Mosquito repellent side effect : ಬೇಸಿಗೆ ಬಂತೆಂದರೆ ಸೊಳ್ಳೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ರಾತ್ರಿ ಹೊತ್ತಲ್ಲಿ ನೆಮ್ಮದಿಯಿಂದ ನಿದ್ದ ಮಾಡಲು ಬಿಡುವುದಿಲ್ಲ. ಈ ಸೊಳ್ಳೆಗಳ ಕಾಟದಿಂದ ಜನರಿಗೆ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಜನರು ಅದನ್ನು ತಪ್ಪಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಕೆಲವರು ಕ್ರೀಂ, ಕಾಯಿಲ್ ಬಳಸಿದರೆ, ಇನ್ನು ಕೆಲವರು ಸೊಳ್ಳೆ ನಿವಾರಕಗಳನ್ನು ಬಳಸಿ ಸುಖ ನಿದ್ದೆ ಬರುತ್ತಾರೆ.
ಸೊಳ್ಳೆ ಓಡಿಸಲು ನೀವು ಬಳಸುವ ವಸ್ತುಗಳಲ್ಲಿ ನಿಮ್ಮ ಆರೋಗ್ಯಕ್ಕೆ ಹಾನಿ ಉಂಟುಮಾಡುವ ಅಂಶಗಳಿರುತ್ತವೆ ಎಂದು ನಿಮಗೆ ತಿಳಿದಿದೆಯೇ. ಹೌದು.. ಈ https://zeenews.india.com/kannada/health/include-these-superfoods-in-your-diet-to-get-healthy-bones-132836 ಅಥವಾ ಓಡಿಸಲು ಬಳಸುವ ವಸ್ತುಗಳ ಬಗ್ಗೆ ತಜ್ಞರು ಏನು ಹೇಳುತ್ತಾರೆಂದು ತಿಳಿಯೋಣ ಬನ್ನಿ. ಅಷ್ಟೇ ಅಲ್ಲ, ಸೊಳ್ಳೆಗಳ ಕಾಟ ತಪ್ಪಿಸಲು ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ಪಡೆಯೋಣ.
ಇದನ್ನೂ ಓದಿ: Health Tips: ರಾತ್ರಿ ಮಲಗುವ ಮುನ್ನ ಅಪ್ಪಿತಪ್ಪಿಯೂ ಕೂಡ ಈ ಆಹಾರಗಳನ್ನು ಸೇವಿಸಬೇಡಿ, ಹೆಲ್ತ್ ಹಾಳಾಗುತ್ತೆ!
ಆರೋಗ್ಯ ತಜ್ಞರು ಹೇಳುವಂತೆ, ಸೊಳ್ಳೆ ನಿವಾರಕಗಳಲ್ಲಿ ಕಂಡುಬರುವ ವಸ್ತುಗಳು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಮನೆಯಲ್ಲಿ ಸೊಳ್ಳೆ ನಿವಾರಕಗಳಂತಹ ಸುರುಳಿಗಳನ್ನು ಸುಡುವುದರಿಂದ ಆರೋಗ್ಯದ ಅಪಾಯ ಹೆಚ್ಚಾಗುತ್ತದೆ ಎಂದು ಅವರು ಹೇಳುತ್ತಾರೆ. ಈ ನಿಟ್ಟಿನಲ್ಲಿ ಅಧ್ಯಯನವೊಂದು ʼ ಸೊಳ್ಳೆ ಕಾಯಿಲ್ ಅನ್ನು ಬೆಳಗಿಸುವುದು ಸುಮಾರು 100 ಸಿಗರೇಟ್ ಸೇದುವುದಕ್ಕೆ ಸಮಾನವಾಗಿದೆʼ ಎಂದು ಹೇಳಿದೆ.
ಅಲ್ಲದೆ, ತಜ್ಞರ ಪ್ರಕಾರ, ಸೊಳ್ಳೆ ಬತ್ತಿಗಳಿಂದ ಬರುವ ಹೊಗೆ ಅಥವಾ ವಾಸನೆಯು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದಾಗಿ ನಿಮ್ಮ ಶ್ವಾಸಕೋಶದಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಷ್ಟೇ ಅಲ್ಲ, ಇದರ ಸೇವನೆಯಿಂದ ಜನರಲ್ಲಿ ಅಸ್ತಮಾ ಸಮಸ್ಯೆಯೂ ಉಂಟಾಗುತ್ತದೆ. ಈ ಕಾರಣದಿಂದ ಜನರು ಯಾವುದೇ ಸೊಳ್ಳೆ ನಿವಾರಕಗಳಿಂದ ದೂರವಿರಲು ಸಲಹೆ ನೀಡುತ್ತಾರೆ. ಸೊಳ್ಳೆ ನಿವಾರಕಗಳಿಂದ ದೂರವಿರುವಂತೆ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. ಸೊಳ್ಳೆ ಪರದೆಗಳನ್ನು ಉಪಯೋಗಿಸುವಂತೆ ಸಲಹೆ ನೀಡುತ್ತಾರೆ. ಇಷ್ಟೇ ಅಲ್ಲ, ಸೊಳ್ಳೆಗಳಿಂದ ದೂರವಿರಲು ಕೆಲವು ನೈಸರ್ಗಿಕ ಮತ್ತು ಸುರಕ್ಷಿತ ಪರ್ಯಾಯಗಳನ್ನು ಬಳಸುವಂತೆ ಹೇಳುತ್ತಾರೆ. ಉದಾಹರಣೆಗೆ ಬೇವಿನ ಎಲೆಗಳನ್ನು ಬಳಸುವುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.