The Kerala Story : ʼದಿ ಕೇರಳ ಸ್ಟೋರಿʼ ಸಿನಿಮಾ ಸಾಕಷ್ಟು ಗೊಂದಲಗಳಿಗೆ ಕಾರಣವಾಗಿರುವ ಸಿನಿಮಾ. ಈ ಸಿನಿಮಾ ವಿರುದ್ಧ ಅನೇಕ ಕೂಗುಗಳು ಕೇಳಿಬರುತ್ತಿವೆ. ಇದೆಲ್ಲದರ ಮದ್ಯವೇ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಹಿಂದೂ ಜೋಡಿಗಳು ಕೇರಳದ ಮಸೀದಿಯಲ್ಲಿ ಮದುವೆಯಾಗಿದ್ದಾರೆ.
ಹಿಂದೂ ಜೋಡಿಗಳು ಕೇರಳದ ಮಸೀದಿಯಲ್ಲಿ ಮದುವೆಯಾಗಿರುವ ವಿಡಿಯೋವೊಂದನ್ನು ಎಆರ್ ರೆಹಮಾನ್ ಅವರು ಹಂಚಿಕೊಂಡಿದ್ದು, ʼಮಾನವೀಯತೆ ಮೇಲಿನ ಪ್ರೀತಿ ನಿರಂತರವಾಗಿರಬೇಕು ಮತ್ತು ಆರೋಗ್ಯಕರವಾಗಿರಬೇಕುʼ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋವನ್ನು ಮೊದಲು ಕಾಮ್ರೆಡ್ ಆಫ್ ಕೇರಳ ಎಂಬ ಟ್ವೀಟರ್ ಅಕೌಂಟ್ ಮೂಲಕ ಈ ವಿಡಿಯೋವನ್ನು ಶೇರ್ ಮಾಡಲಾಗಿತ್ತು.
Bravo 🙌🏽 love for humanity has to be unconditional and healing ❤️🩹 https://t.co/X9xYVMxyiF
— A.R.Rahman (@arrahman) May 4, 2023
ಇದನ್ನೂ ಓದಿ-ಚುನಾವಣೆ ಬೆನ್ನಲ್ಲೆ ʼಟಿಪ್ಪುʼ ಸಿನಿಮಾ, ಮತ್ತೆ ಶುರುವಾಗುತ್ತಾ ಉರಿ ನಂಜು ವಾರ್?
ಇದೇ ವಿಡಿಯೋವನ್ನು ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ತಮ್ಮ ಖಾತೆಯಲ್ಲಿ ಶೇರ್ ಮಾಡಿಕೊಂಡು ಪ್ರೀತಿ ಮತ್ತು ಮಾನವೀಯತೆಯ ಬಗ್ಗೆ ಬರೆದುಕೊಂಡಿದ್ದಾರೆ. ವರದಿಗಳ ಪ್ರಕಾರ ಈ ವಿಡಿಯೋದಲ್ಲಿನ ವಧುವಿನ ತಾಯಿ ಹಣಕಾಸಿನ ಸಮಸೆಯನ್ನು ಮಸೀದಿಯಲ್ಲಿ ಹೇಳಿಕೊಂಡಿಡಿದ್ದು, ಮಗಳ ಮದುವೆಗೆ ಮಸೀದಿಯಲ್ಲಿ ಸಹಾಯ ಯಾಚಿಸಿದ್ದರು.
ʼದಿ ಕೇರಳ ಸ್ಟೋರಿʼ ಸಿನಿಮಾ ಇದು ಖಾಣೆಯಾದ 32 ಸಾವಿರ ಮಹಿಳೆಯರ ಕಥೆ. ಈ ಸಿನಿಮಾಗೆ ಬಾರೀ ವಿರೋಧಗಳು ವ್ಯಕ್ತವಾಗುತ್ತಿವೆ. ರಾಜಕೀಯದಲ್ಲಿಯೂ ಈ ಸಿನಿಮಾ ಗೊಂದಲಗಳನ್ನು ಸೃಷ್ಟಿಸಿದೆ. ಕೇರಳದ ಸಾಕಷ್ಟು ರಾಜಕೀಯ ಮುಖಂಡರು ಈ ಸಿನಿಮಾದ ವಿರುದ್ಧ ಸಿಡಿದೆದ್ದು ಆಕ್ರೋಶ ವ್ಯಕ್ತಪಡಿಸಿದ್ದರು. ʼಲವ್ ಜಿಹಾದ್ನ್ನು ಹೊರತೆಗೆದು ಕೇರಳ ರಾಜ್ಯವನ್ನು ಧಾರ್ಮಿಕ ಉಗ್ರವಾದದ ಕೇಂದ್ರವೆಂದು ಹಬ್ಬಿಸುತ್ತಿದೆʼ ಎಂದು ಕೇರಳದ ಮುಖ್ಯಮಂತ್ರಿ ಆರೋಪಿಸಿದ್ದರು.
ಇದನ್ನೂ ಓದಿ-ʼಇಲಿಯಾನʼದಿಂದ ಹಿಡಿದು ಮದುವೆಯಾಗದೇ ತಾಯಂದಿರಾದ ಸ್ಟಾರ್ ನಟಿಯರು ಇವರು..!
ಈ ವಿವಾದಾತ್ಮಕ ಸಿನಿಮಾದಲ್ಲಿ ರಣವಿಕ್ರಮ ಸಿನಿಮಾದ ನಾಯಕಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವಿಫುಲ್ ಶಾ ಚಿತ್ರವನ್ನು ನಿರ್ಮಾಣಮಾಡಿದ್ದಾರೆ, ಮತ್ತು ಸುದೀಪ್ತೋ ಸೇನ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾ ಎಲ್ಲ ವಿವಾದಗಳನ್ನು ಮೀರಿ ಇಂದು (ಮೇ5) ದೇಶದಾದ್ಯಂತ ಬಿಡುಗಡೆಗೆ ರೆಡಿಯಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.