Diabetics Diet In Summer: ಡಯಾಬಿಟಿಸ್ ಅಥವಾ ಮಧುಮೇಹ ಎನ್ನುವುದು ದೀರ್ಘಕಾಲದ ಚಯಾಪಚಯ ಕಾಯಿಲೆಯಾಗಿದ್ದು ಅದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ. ಬ್ಲಡ್ ಶುಗರ್ ಲೆವೆಲ್ ಏರುಪೇರಾದಾಗ ಅದು ದೇಹದಲ್ಲಿ ಇನ್ನಿತರ ಖಾಯಿಲೆಗಳ ಅಪಾಯವನ್ನೂ ಕೂಡ ಹೆಚ್ಚಿಸುತ್ತದೆ. ಕಳಪೆ ಜೀವನಶೈಲಿ, ಆಹಾರ ಕ್ರಮದಲ್ಲಿ ಶಿಸ್ತಿನ ಕೊರತೆ ಹೀಗೆ ಮಧುಮೇಹ ರೋಗಕ್ಕೆ ಕಾರಣಗಳು ಏನೇ ಇರಬಹುದು. ಆದರೆ, ಒಮ್ಮೆ ಮಧುಮೇಹಕ್ಕೆ ಒಳಗಾದರೆ ಅಂತಹವರು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ.
ಆರೋಗ್ಯ ತಜ್ಞರ ಪ್ರಕಾರ, ಮಧುಮೇಹಿಗಳು ಬೇಸಿಗೆ ಕಾಲದಲ್ಲಿ ಕೆಲವು ಆಹಾರಗಳಿಂದ ಅಂತರ ಕಾಯ್ದುಕೊಳ್ಳುವುದು ತುಂಬಾ ಅಗತ್ಯ. ಇಲ್ಲವಾದಲ್ಲಿ, ಅದು ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಬಹುದು ಎಂದು ಹೇಳಲಾಗುತ್ತದೆ.
ನೀವು ಮಧುಮೇಹಿ ಆಗಿದ್ದರೆ ಬೇಸಿಗೆ ಕಾಲದಲ್ಲಿ ಈ ಆಹಾರಗಳನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ:
ದಿನೇ ದಿನೇ ಹೆಚ್ಚುತ್ತಿರುವ ತಾಪಮಾನದ ನಡುವೆ ನೀವು ಹೈ ಬ್ಲಡ್ ಶುಗರ್ ಸಮಸ್ಯೆಯನ್ನು ತಪ್ಪಿಸಲು ಮತ್ತು ಡಯಾಬಿಟಿಸ್ ಅನ್ನು ನಿಯಂತ್ರಿಸಲು ಬಯಸಿದರೆ ಬೇಸಿಗೆಯಲ್ಲಿ ಇಂತಹ ಆಹಾರಗಳಿಂದ ಸಾಧ್ಯವಾದಷ್ಟು ಅಂತರ ಕಾಯ್ದುಕೊಳ್ಳಿ...
* ಕೂಲ್ ಡ್ರಿಂಕ್ಸ್:
ನೀವು ಡಯಾಬಿಟಿಸ್ ಸಮಸ್ಯೆಯಿಂದ ಬಳಲುತ್ತಿದ್ದರೆ ಬೇಸಿಗೆಯಲ್ಲಿ ಯಾವುದೇ ಕಾರಣಕ್ಕೂ ತಂಪು ಪಾನೀಯಗಳನ್ನು ಕುಡಿಯಬೇಡಿ. ಅದರಲ್ಲೂ ಸಕ್ಕರೆ ಅಧಿಕ ಮಟ್ಟದಲ್ಲಿರುವ ಪಾನೀಯಗಳಾದ ಕೋಲಾ, ಬಿಯರ್ ಅಥವಾ ಸಕ್ಕರೆ ಪಾಕ-ಆಧಾರಿತ ಉತ್ಪನ್ನಗಳಾದ ಪ್ಯಾಕ್ ಮಾಡಿದ ಜ್ಯೂಸ್ಗಳಂತಹ ಕಾರ್ಬೊನೇಟೆಡ್ ಪಾನೀಯಗಳಿಂದ ದೂರ ಉಳಿಯುವುದನ್ನು ಖಚಿತಪಡಿಸಿಕೊಳ್ಳಿ.
ಇದನ್ನೂ ಓದಿ- ಮಳೆಗಾಲದಲ್ಲಿ ಅರಿಶಿನದ ಹಾಲು ಕುಡಿದರೆ ಆರೋಗ್ಯಕ್ಕಿದೆ ಸಾಕಷ್ಟು ಅದ್ಭುತ ಪ್ರಯೋಜನ
* ರವೆ:
ಪ್ರತಿಯೊಬ್ಬರ ಅಡುಗೆ ಮನೆಯಲ್ಲಿಯೂ ಬಹಳ ಸುಲಭವಾಗಿ ಲಭ್ಯವಿರುವ ಆಹಾರ ಪದಾರ್ಥ ರವೆ. ಆದರೆ ಬೇಸಿಗೆಯಲ್ಲಿ ಮಧುಮೆಹಿಗಳು ಸಾಧ್ಯವಾದಷ್ಟು ರವೆಯಿಂದ ತಯಾರಿಸಿದ ಆಹಾರಗಳನ್ನು ಸೇವಿಸಬಾರದು. ವಾಸ್ತವವಾಗಿ, ರವೆ ಪಿಷ್ಟ-ಭರಿತ ಆಹಾರ ಪದಾರ್ಥವಾಗಿದೆ.
* ಶೈತ್ಯೀಕರಿಸಿದ ಸಿಹಿತಿಂಡಿಗಳು:
ಶೈತ್ಯೀಕರಿಸಿದ ಸಿಹಿತಿಂಡಿಗಳು ಅಥವಾ ಐಸ್ ಕ್ರೀಮ್ಗಳಲ್ಲಿ ಸಕ್ಕರೆ ಅಂಶದ ಜೊತೆಗೆ ಕ್ಯಾಲೋರಿಗಳು ಕೂಡ ಅಧಿಕ ಮಟ್ಟದಲ್ಲಿ ಕಂಡು ಬರುತ್ತವೆ. ಇವುಗಳ ಸೇವನೆಯು ನಿಮ್ಮ ಬ್ಲಡ್ ಶುಗರ್ ಲೆವೆಲ್ ಅನ್ನು ಹೆಚ್ಚಿಸಬಹುದಾದ್ದರಿಂದ ಸಾಧ್ಯವಾದಷ್ಟು ಇಂತಹ ಆಹಾರಗಳ ಸೇವನೆಯನ್ನು ತಪ್ಪಿಸಿ.
* ಬೇಕರಿ ಉತ್ಪನ್ನಗಳು:
ಯಾವುದೇ ಋತುಮಾನವಿರಲಿ ನಮ್ಮಲ್ಲಿ ಹಲವರಿಗೆ ಬೇಕರಿ ಉತ್ಪನ್ನಗಳೆಂದರೆ ಬಲು ಪ್ರಿಯ. ಆದರೆ, ಬಹುತೇಕ ಬೇಕರಿ ಖಾದ್ಯಗಳನ್ನು ಮೈದಾ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಮೈದಾ ಎಂದರೆ ಸಂಸ್ಕರಿಸಿದ ಹಿಟ್ಟು ಹೆಚ್ಚಿನ ಗ್ಲುಟನ್ ಅಂಶವನ್ನು ಹೊಂದಿರುತ್ತದೆ, ಇದು ನೇರವಾಗಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟಗಳ ಏರಿಕೆಗೆ ಸಂಬಂಧಿಸಿದೆ. ಹಾಗಾಗಿ, ನೀವು ಮಧುಮೇಹಿಯಾಗಿದ್ದರೆ ಯಾವುದೇ ಕಾರಣಕ್ಕೂ ಬೇಕರಿ ಉತ್ಪನ್ನಗಳನ್ನು ಸೇವಿಸಬೇಡಿ.
ಇದನ್ನೂ ಓದಿ- ಬೆಳಗಿನ ಉಪಹಾರಕ್ಕೆ ಇದೇ ಸರಿಯಾದ ಸಮಯ ! 90% ದಷ್ಟು ಜನರಿಗೆ ತಿಳಿದಿಲ್ಲ ಈ ಸತ್ಯ !
* ಕರಿದ ಆಹಾರಗಳು:
ಬೇಸಿಗೆ ಕಾಲದಲ್ಲಿ ಮಾತ್ರವಲ್ಲ ಮಧುಮೇಹಿಗಳು ಯಾವುದೇ ಋತುವಿನಲ್ಲಿ ಕರಿದ ಆಹಾರಗಳ ಸೇವನೆಯನ್ನು ತಪ್ಪಿಸಬೇಕು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.