Paytm UPI Lite: ಜನಪ್ರಿಯ ಆನ್ಲೈನ್ ಪೇಮೆಂಟ್ಸ್ ಪ್ಲಾಟ್ಫಾರ್ಮ್ ಆಗಿರುವ ಪೇಟಿಎಂ iOS ಬಳಕೆದಾರರಿಗಾಗಿ Paytm UPI ಲೈಟ್ ಅನ್ನು ಘೋಷಿಸಿದೆ. ನೀವಿ ಐಫೋನ್ ಬಳಕೆದಾರರಾಗಿದ್ದರೆ ಯುಪಿಐ ಪಿನ್ ಇಲ್ಲದಿದ್ದರೂ ಕೂಡ ಸುರಕ್ಷಿತವಾಗಿ ಪೇಟಿಎಂ ಪೇಮೆಂಟ್ ಮಾಡಬಹುದು.
ಲಭ್ಯವಿರುವ ಮಾಹಿತಿಯ ಪ್ರಕಾರ, ಪೇಟಿಎಂ ಪೇಮೆಂಟ್ iOS ಗಾಗಿ UPI ಲೈಟ್ ಬೆಂಬಲದೊಂದಿಗೆ ಪೇಟಿಎಂ ಸೌಲಭ್ಯವನ್ನು ಒದಗಿಸಲಿದೆ. ಇದು ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು ಯುಪಿಐನಲ್ಲಿ RuPay ಕ್ರೆಡಿಟ್ ಕಾರ್ಡ್, ಸ್ಪ್ಲಿಟ್ ಬಿಲ್ ಮತ್ತು ಮೊಬೈಲ್ ಸಂಖ್ಯೆಯನ್ನು ಮರೆಮಾಡುವ ಪರ್ಯಾಯ ಯುಪಿಐ ಐಡಿ ಕೂಡ ಇದರಲ್ಲಿ ಲಭ್ಯವಿರಲಿದೆ.
ವಾಸ್ತವವಾಗಿ, ಕಳೆದ ವರ್ಷ (2022) ಸೆಪ್ಟೆಂಬರ್ ನಲ್ಲಿ ಎನ್ಪಿಸಿಐನಿಂದ ಪ್ರಾರಂಭಿಸಲಾದ ಯುಪಿಐ ಲೈಟ್ , UPI ಲೈಟ್ ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ಪೇಮೆಂಟ್ ಸಿಸ್ಟಮ್ ಭಾಗವಾಗಿ ಸರಳೀಕೃತ ಆವೃತ್ತಿ ಆಗಿದೆ. ಸಣ್ಣ ಪ್ರಮಾಣದ ವಹಿವಾಟುಗಳನ್ನು ವೇಗವಾಗಿ ಮತ್ತು ಸುಲಭವಾಗಿ ಮಾಡಲು ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.
ಇದನ್ನೂ ಓದಿ- ChatGPT ದುರ್ಬಳಕೆ: ಆರೋಪಿ ಜೈಲಿಗೆ!
ಏನಿದು ಯುಪಿಐ ಲೈಟ್?
ಯುಪಿಐ ಲೈಟ್ ಸಣ್ಣ ಪಾವತಿಗಳನ್ನು (2000 ರೂ.ವರೆಗಿಯ ಪಾವತಿ) ಮಾಡಲು ಬಳಸಬಹುದಾದ ಸಾಧನದ ವಾಲೆಟ್. Paytm ಸೇರಿದಂತೆ ಎಲ್ಲಾ ರೀತಿಯ ಜನಪ್ರಿಯ ಪಾವತಿ ಅಪ್ಲಿಕೇಶನ್ಗಳಲ್ಲಿ ಈ ಸೌಲಭ್ಯ ಲಭ್ಯವಿದೆ. ಆದಾಗ್ಯೂ, ತನ್ನ ಸೂಪರ್ ಅಪ್ಲಿಕೇಶನ್ನಲ್ಲಿ UPI ಲೈಟ್ ಅನ್ನು ಪ್ರಾರಂಭಿಸಿದ ಮೊದಲ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪೇಟಿಎಂ ಪಾತ್ರವಾಗಿದೆ.
ಮೊಬೈಲ್ ಸಾಧನದಲ್ಲಿ ಯುಪಿಐ ಲೈಟ್ ಅನ್ನು ಒಮ್ಮೆ ಹೊಂದಿಸಿದರೆ ಯಾವುದೇ ಅಡೆತಡೆಗಲಿಲ್ಲದೇ ಸಣ್ಣ ಪ್ರಮಾಣದ ವಹಿವಾಟುಗಳನ್ನು ತ್ವರಿತ ಮತ್ತು ಸುರಕ್ಷಿತವಾಗಿ ಮಾಡಬಹುದಾಗಿದೆ. ಗಮನಾರ್ಹವಾಗಿ, ಓರ್ವ ಪೇಟಿಎಂ ಬಳಕೆದಾರ ದಿನಕ್ಕೆ ಎರಡು ಬಾರಿ UPI ಲೈಟ್ಗೆ ರೂ 2,000 ವರೆಗೆ ಸೇರಿಸಬಹುದು. ಅರ್ಥಾತ್ ಒಂದು ದಿನದಲ್ಲಿ ಕೇವಲ 4,000 ರೂಪಾಯಿಗಳನ್ನು ಮಾತ್ರ ಯುಪಿಐ ಲೈಟ್ಗೆ ಸೇರಿಸಬಹುದಾಗಿದೆ.
ಇದನ್ನೂ ಓದಿ- ತಂತ್ರಜ್ಞಾನವನ್ನು ಹೊಸ ಎತ್ತರಕ್ಕೆ ಒಯ್ಯುತ್ತಿರುವ ಸ್ಯೂಡೋ ಸ್ಯಾಟಲೈಟ್ಗಳು
ಐಫೋನ್ ನಲ್ಲಿ ಪೇಟಿಎಂ ಯುಪಿಐ ಲೈಟ್ ಬಳಸುವುದು ಹೇಗೆ?
* ಮೊದಲು ಪೇಟಿಎಂ ಅಪ್ಲಿಕೇಷನ್ ಅನ್ನು ತೆರೆಯಿರಿ
* ಹೋಮ್ ಸ್ಕ್ರೀನ್ನಲ್ಲಿರುವ 'ಯುಪಿಐ ಲೈಟ್' ಐಕಾನ್ ಮೇಲೆ ಟ್ಯಾಪ್ ಮಾಡಿ.
* ನಿಗದಿತ ಜಾಗದಲ್ಲಿ ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ನಮೂದಿಸಿ, ದೃಢೀಕರಿಸಿ.
* ನಿಮ್ಮ ಯುಪಿಐ ಲೈಟ್ ವಾಲೆಟ್ಗೆ ಹಣವನ್ನು ಸೇರಿಸಿ.
* ಪಾವತಿ ಮಾಡಲು, 'ಯುಪಿಐ ಲೈಟ್' ಆಯ್ಕೆಯನ್ನು ಆಯ್ಕೆಮಾಡಿ.
* ಸ್ವೀಕರಿಸುವವರ ಯುಪಿಐ ಐಡಿಯನ್ನು ನಮೂದಿಸಿ ಅಥವಾ ಅವರ QR ಕೋಡ್ ಅನ್ನು ಸ್ಕ್ಯಾನ್ ಮಾಡಿ.
* ನೀವು ಪಾವತಿಸಲು ಬಯಸುವ ಮೊತ್ತವನ್ನು ನಮೂದಿಸಿ.
* 'ಪೇ' ಆಯ್ಕೆಯನ್ನು ಟ್ಯಾಪ್ ಮಾಡಿದರೆ ನಿಮ್ಮ ಪಾವತಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.