WTC Final 2023: ರದ್ದಾಗುತ್ತಾ ಭಾರತ-ಆಸ್ಟ್ರೇಲಿಯಾ ಫೈನಲ್ ಪಂದ್ಯ? ಹೊರಬಿತ್ತು ಬಿಗ್ ಅಪ್ಡೇಟ್

WTC Final 2023, Weather Update: ಜೂನ್ 7 ರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ WTC ಫೈನಲ್ ಪಂದ್ಯದ ಮೇಲೆ ಮಳೆಯ ನೆರಳು ಸುಳಿದಾಡುತ್ತಿದೆ. ಈ ಮೆಗಾ ಪಂದ್ಯ ಜೂನ್ 7 ರಿಂದ 11 ರವರೆಗೆ ಲಂಡನ್‌ ನಲ್ಲಿ ನಡೆಯಲಿದೆ. ಈ ಮಧ್ಯೆ ಹವಾಮಾನವನ್ನು ಗಮನಿಸಿದರೆ, ಮೊದಲ, ಎರಡನೇ ಮತ್ತು ಮೂರನೇ ದಿನ ಮಳೆಯಾಗುವ ಸಾಧ್ಯತೆಯಿಲ್ಲ.

Written by - Bhavishya Shetty | Last Updated : Jun 5, 2023, 12:56 PM IST
    • 2021ರ WTC ಫೈನಲ್‌ ನಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲನ್ನು ಎದುರಿಸಬೇಕಾಯಿತು
    • ಈ ಬಾರಿ ತಂಡ ಚಾಂಪಿಯನ್ ಆಗುವ ಉದ್ದೇಶದಿಂದ ಆಸ್ಟ್ರೇಲಿಯಾ ವಿರುದ್ಧ ಮೈದಾನಕ್ಕಿಳಿಯಲಿದೆ
    • WTC ಫೈನಲ್ ಪಂದ್ಯದ ಮೇಲೆ ಮಳೆಯ ನೆರಳು ಸುಳಿದಾಡುತ್ತಿದೆ
WTC Final 2023: ರದ್ದಾಗುತ್ತಾ ಭಾರತ-ಆಸ್ಟ್ರೇಲಿಯಾ ಫೈನಲ್ ಪಂದ್ಯ? ಹೊರಬಿತ್ತು ಬಿಗ್ ಅಪ್ಡೇಟ್  title=
World Test Championship

WTC Final 2023, Weather Update: ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನಲ್ಲಿ ಫೈನಲ್‌ಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ ಮೊದಲ ಬಾರಿಗೆ WTC ಫೈನಲ್ ಆಡುತ್ತಿದೆ. 2021ರ WTC ಫೈನಲ್‌ ನಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್‌ ಗಳಿಂದ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಈ ಬಾರಿ ತಂಡ ಚಾಂಪಿಯನ್ ಆಗುವ ಉದ್ದೇಶದಿಂದ ಆಸ್ಟ್ರೇಲಿಯಾ ವಿರುದ್ಧ ಮೈದಾನಕ್ಕಿಳಿಯಲಿದೆ. ಈ ನಡುವೆ ದೊಡ್ಡ ಮಾಹಿತಿಯೊಂದು ಹೊರಬಿದ್ದಿದೆ.

ಇದನ್ನೂ ಓದಿ: WTC Final 2023: ರೋಹಿತ್, ಗಿಲ್, ಕೊಹ್ಲಿ ಅಲ್ಲ… ಈ ಜೋಡಿಯೇ ಟೀಂ ಇಂಡಿಯಾ ಟ್ರೋಫಿ ಗೆಲ್ಲಲು ಸಹಾಯ ಮಾಡೋದು!

IND-AUS ಫೈನಲ್ ಪಂದ್ಯ ರದ್ದಾಗುತ್ತದೆಯೇ?

ಜೂನ್ 7 ರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ WTC ಫೈನಲ್ ಪಂದ್ಯದ ಮೇಲೆ ಮಳೆಯ ನೆರಳು ಸುಳಿದಾಡುತ್ತಿದೆ. ಈ ಮೆಗಾ ಪಂದ್ಯ ಜೂನ್ 7 ರಿಂದ 11 ರವರೆಗೆ ಲಂಡನ್‌ ನಲ್ಲಿ ನಡೆಯಲಿದೆ. ಈ ಮಧ್ಯೆ ಹವಾಮಾನವನ್ನು ಗಮನಿಸಿದರೆ, ಮೊದಲ, ಎರಡನೇ ಮತ್ತು ಮೂರನೇ ದಿನ ಮಳೆಯಾಗುವ ಸಾಧ್ಯತೆಯಿಲ್ಲ. ಆದರೆ ನಾಲ್ಕನೇ ದಿನ ಪೂರ್ಣ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿವೆ. ಐದನೇ ದಿನದಂದು ಹವಾಮಾನವು ಮತ್ತೆ ಸ್ಪಷ್ಟವಾಗಿರುವ ಸಾಧ್ಯತೆಗಳಿವೆ. ಮೀಸಲು ದಿನ ಅಂದರೆ ಜೂನ್ 12 ರ ಬಗ್ಗೆ ಮಾತನಾಡುವುದಾದರೆ, ಈ ದಿನದ ಹವಾಮಾನಕ್ಕೆ ಯಾವುದೆ ಅಡೆತಡೆ ಕಾಣಿಸಿಕೊಂಡಿಲ್ಲ.

ಲಂಡನ್ ಹವಾಮಾನದ ಬಗ್ಗೆ ಮಾತನಾಡುವುದಾದರೆ, ಪಂದ್ಯದ ನಾಲ್ಕನೇ ದಿನದಂದು ಮಾತ್ರ ಮಳೆಯಾಗುವ ಸಾಧ್ಯತೆಯಿದೆ. ಪಂದ್ಯದ ನಾಲ್ಕನೇ ದಿನದಂದು ಶೇ.60ರಷ್ಟು ಮಳೆಯಾಗುವ ನಿರೀಕ್ಷೆಯಿದೆ. ಹವಾಮಾನ ವರದಿ ಪ್ರಕಾರ ನಾಲ್ಕನೇ ದಿನ ಬಿಟ್ಟರೆ ಉಳಿದ ದಿನಗಳಲ್ಲಿ ಮಳೆಯ ಸುಳಿವು ಕಂಡುಬಂದಿಲ್ಲ. ಮೊದಲ ಮತ್ತು ಎರಡನೇ ದಿನ ಶೇ.1ರಷ್ಟು ಮಾತ್ರ ಮಳೆಯಾಗುವ ಸಾಧ್ಯತೆಗಳಿದ್ದರೆ, ಮೂರನೇ ದಿನ ಶೇ.4ರಷ್ಟು ಮಳೆಯಾಗುವ ಸಾಧ್ಯತೆಗಳಿವೆ. ಐದನೇ ದಿನದಲ್ಲಿ ಶೇಕಡಾ 1 ರಷ್ಟು ಮಳೆ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಟೀಂ ಇಂಡಿಯಾದ ಈ ಬೌಲರ್ ಹೆಸರು ಕೇಳಿದ್ರೆ ನಡುಗುತ್ತೆ ಆಸೀಸ್! ಆದ್ರೆ ಅದು ಕೊಹ್ಲಿ-ರೋಹಿತ್ ಅಲ್ಲ…

2021 ರಲ್ಲಿ, ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಅಂತಿಮ ಪಂದ್ಯದಲ್ಲಿ ಭಾರಿ ಮಳೆಯಾಗಿತ್ತು. ಪಂದ್ಯದ ಮೊದಲ ಎರಡು ದಿನಗಳಲ್ಲಿ ಒಂದೇ ಒಂದು ಚೆಂಡನ್ನು ಎಸೆಯಲಾಗಲಿಲ್ಲ. ಇದಾದ ಬಳಿಕ ಮೀಸಲು ದಿನ ಸೇರಿದಂತೆ ಒಟ್ಟು 4 ದಿನಗಳ ಆಟ ನಡೆಯಿತು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಭಾರತವನ್ನು 8 ವಿಕೆಟ್‌ಗಳಿಂದ ಸೋಲಿಸಿ ಚಾಂಪಿಯನ್ ಆಯಿತು.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News