ICC WTC Final 2023: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 2021 ರಲ್ಲಿ 'ದಿ ಓವಲ್'ನಲ್ಲಿ ತಮ್ಮ ಏಕೈಕ ಟೆಸ್ಟ್ ಶತಕವನ್ನು ಬಾರಿಸಿದ್ದರು. ಆ ಸಂದರ್ಭದಲ್ಲಿ ಇಂಗ್ಲೆಂಡ್ ಪರಿಸ್ಥಿತಿಯಲ್ಲಿ ಬ್ಯಾಟ್ಸ್‌ಮನ್ ಆಗಿ ಆಡುವುದು ಅಷ್ಟೊಂದು ಆರಾಮದಾಯಕವಾಗುವುದಿಲ್ಲ ಎಂದು ಅವರೇ ಹೇಳಿದ್ದರು. ಇನ್ನು ಯಾವಾಗ ಆಕ್ರಮಣಕಾರಿಯಾಗಬೇಕು, ಯಾವ ಪ್ರತಿಸ್ಪರ್ಧಿ ತಂಡದ ಬೌಲರ್ ಗಳ ವಿರುದ್ಧ ಹೇಗೆ ಆಡವಾಡಬೇಕೆಂಬ ಬುದ್ಧಿವಂತಿಕೆ ರೋಹಿತ್ ಬಳಿ ಇದೆ.
ಇದನ್ನೂ ಓದಿ: ಕೆಲವೇ ಸೆಕೆಂಡ್ ಗಳಲ್ಲಿ ಗಂಗಾನದಿಗೆ ಆಹುತಿಯಾದ 1750 ಕೋಟಿ ರೂ. ವೆಚ್ಚದ ಸೇತುವೆ... ವಿಡಿಯೋ ನೋಡಿ
ಇನ್ನೆರಡು ದಿನಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಪ್ರಾರಂಭವಾಗುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ಮುಂಚಿತವಾಗಿ ಮಾತನಾಡಿದ ಅವರು, ಇಂಗ್ಲಿಷ್ ಪಿಚ್ ಗಳಲ್ಲಿ ಕಠಿಣ ಪರಿಶ್ರಮವನ್ನು ಹೊರತುಪಡಿಸಿ ಬೇರೆ ಯಾವುದೇ ಆಯ್ಕೆಯಿಲ್ಲ ಎಂದು ಹೇಳಿದ್ದಾರೆ..
ಭಾನುವಾರ ನಡೆದ ಐಸಿಸಿಯ 'ಆಫ್ಟರ್ ನೂನ್ ವಿತ್ ಟೆಸ್ಟ್ ಲೆಜೆಂಡ್ಸ್' ಕಾರ್ಯಕ್ರಮದಲ್ಲಿ ಮಾತನಾಡಿದ ರೋಹಿತ್ ಶರ್ಮಾ, “ಸಾಮಾನ್ಯವಾಗಿ ಇಂಗ್ಲೆಂಡ್ ನಲ್ಲಿ ಬ್ಯಾಟ್ಸ್‌ಮನ್ ಗೆ ತುಂಬಾ ಸವಾಲಿನ ಪರಿಸ್ಥಿತಿಗಳಿರುತ್ತವೆ ಎಂದು ನಾನು ಭಾವಿಸುತ್ತೇನೆ. ಎಲ್ಲಿಯವರೆಗೆ ನೀವು ಸವಾಲುಗಳನ್ನು ಎದುರಿಸಲು ಸಿದ್ಧರಿದ್ದೀರಿ, ಅಂದು ನೀವು ಯಶಸ್ಸು ಪಡೆಯುತ್ತೀರಿ” ಎಂದು ಹೇಳಿದ್ದಾರೆ. ರೋಹಿತ್ 2021 ರಲ್ಲಿ ಇಂಗ್ಲೆಂಡ್ ವಿರುದ್ಧದ ನಾಲ್ಕು ಟೆಸ್ಟ್ ಗಳಲ್ಲಿ ಭಾರತದ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿದ್ದರು.
ಪ್ಯಾಟ್ ಕಮಿನ್ಸ್, ರಾಸ್ ಟೇಲರ್ ಮತ್ತು ಇಯಾನ್ ಬೆಲ್ ಜೊತೆ ಕುಳಿತುಕೊಂಡ ತಮ್ಮ ವೈಯಕ್ತಿಕ ಅನುಭವದ ಬಗ್ಗೆ ಮಾತನಾಡಿದ ಅವರು, “2021 ರಲ್ಲಿ ನಾನು ಅರಿತುಕೊಂಡ ಒಂದು ವಿಷಯವೆಂದರೆ ನೀವು ಎಂದಿಗೂ ಕ್ರೀಸ್ ನಲ್ಲಿ ಫ್ರೀಜ್ ಆಗುವುದಿಲ್ಲ. ಅಲ್ಲಿನ ಹವಾಮಾನವು ಬದಲಾಗುತ್ತಲೇ ಇರುತ್ತದೆ. ಕ್ರೀಸ್ ಗೆ ಎಂಟ್ರಿ ಕೊಟ್ಟ ಬಳಿಕ ಅಲ್ಲಿ ಶಕ್ತಿ ಪ್ರದರ್ಶನ ಮಾಡಲೇಬೇಕು” ಎಂದು ಹೇಳಿದ್ದಾರೆ.
ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಮತ್ತು ಟೀಮ್ ಇಂಡಿಯಾದ ಅಂಕಿಅಂಶಗಳು ಮತ್ತು ಡೇಟಾಗೆ ಹೆಚ್ಚಿನ ಗಮನವನ್ನು ನೀಡುತ್ತಾರೆ. ‘ದಿ ಓವಲ್'ನಲ್ಲಿ ಯಶಸ್ಸು ಕಂಡ ಮಾಜಿ ಆಟಗಾರರ ಸ್ಕೋರಿಂಗ್ 'ಮಾದರಿ'ಯನ್ನು ತಿಳಿದುಕೊಳ್ಳುವುದು ಕೆಟ್ಟ ಆಲೋಚನೆಯಲ್ಲ ಎಂದು ರೋಹಿತ್ ಅಭಿಪ್ರಾಯಪಟ್ಟಿದ್ದಾರೆ. “ನಾನು ಅವರನ್ನು (ಯಶಸ್ವಿ ಆಟಗಾರರನ್ನು) ಅನುಕರಿಸಲು ಪ್ರಯತ್ನಿಸುವುದಿಲ್ಲ ಆದರೆ ರನ್ ಗಳಿಸುವ ಅವರ ಮಾದರಿಯನ್ನು ತಿಳಿದುಕೊಳ್ಳುವುದು ಒಳ್ಳೆಯದು” ಎಂದು ಹೇಳಿದರು.
ಇದನ್ನೂ ಓದಿ: Karnataka Rain: ರಾಜ್ಯದಲ್ಲಿ ವರುಣ ಎಂಟ್ರಿಗೆ ಕ್ಷಣಗಣನೆ: ಈ ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಬಿರುಗಾಳಿ ಬೀಸುವ ಮುನ್ಸೂಚನೆ
“ಫಾರ್ಮ್ಯಾಟ್ ಬದಲಾಯಿಸುವುದು ಖಂಡಿತವಾಗಿಯೂ ಸವಾಲಿನ ಅಂಶವಾಗಿದೆ. ನೀವು ಬಹು ಸ್ವರೂಪಗಳಲ್ಲಿ ಆಡುತ್ತೀರಿ. ಹೀಗಿರುವಾಗ ಮಾನಸಿಕವಾಗಿ ನೀವು ಬದಲಾವಣೆಗೆ ಹೊಂದಿಕೊಳ್ಳಬೇಕು. ತಂತ್ರವನ್ನು ಸರಿಹೊಂದಿಸಬೇಕು, ನೀವು ಮಾನಸಿಕವಾಗಿ ಸಿದ್ಧರಾಗಿರಬೇಕು” ಎಂದು ರೋಹಿತ್ ಹೇಳುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ