Watch: ಔಟಾ… ನಾಟೌಟಾ…? ಭಾರತ ಗೆಲ್ಲಲ್ಲೇಬೇಕಾದ ಪಂದ್ಯದಲ್ಲಿ ಆಸೀಸ್ ಮೋಸ! ಈ ದೃಶ್ಯ ನೋಡಿ ನೀವೇ ಹೇಳಿ

Shubman Gill Not Out: ಶುಭ್ಮನ್ ಗಿಲ್ ಅವರು, ಸ್ಕಾಟ್ ಬೋಲ್ಯಾಂಡ್‌ ಎಸೆತದಲ್ಲಿ ರನ್ ಕಲೆ ಹಾಕಲು ಮುಂದಾದಾಗ ಆ ಬಾಲ್ ನ್ನು ಕ್ಯಾಮರೂನ್ ಗ್ರೀನ್ ಕ್ಯಾಚ್ ಪಡೆದರು. ಆದರೆ ಆ ಬಾಲ್ ನೆಲದ ಅಂಚಿಗೆ ತಾಗಿದೆ. ಆದರೂ ಸಹ ಆ ಎಸೆತವನ್ನು ಔಟ್ ಎಂದು ಅಂಪೈರ್ ಘೋಷಿಸಿ, ಶುಭ್ಮನ್ ಪೆವಿಲಿಯನ್ ಗೆ ಮರಳುವಂತೆ ಮಾಡಿದರು.

Written by - Bhavishya Shetty | Last Updated : Jun 10, 2023, 11:38 PM IST
    • ಇದು ನಿರ್ಣಾಯಕ ಕ್ಷಣವಾದ್ದರಿಂದ ಭಾರತ ತನ್ನ ಪ್ರಬಲ ಹೋರಾಟವನ್ನು ಆಸೀಸ್ ವಿರುದ್ಧ ನಡೆಸುತ್ತಿದೆ.
    • ಆ ಬಾಲ್ ನ್ನು ಕ್ಯಾಮರೂನ್ ಗ್ರೀನ್ ಕ್ಯಾಚ್ ಪಡೆದರು. ಆದರೆ ಆ ಬಾಲ್ ನೆಲದ ಅಂಚಿಗೆ ತಾಗಿದೆ
    • ದುರದೃಷ್ಟವಶಾತ್ ಭಾರತದ ಪರ ಬ್ಯಾಟ್ ಬೀಸಿದ್ದ ಗಿಲ್ ಕೇವಲ 18 ರನ್‌ ಗಳಿಗೆ ಔಟಾದರು.
Watch: ಔಟಾ… ನಾಟೌಟಾ…? ಭಾರತ ಗೆಲ್ಲಲ್ಲೇಬೇಕಾದ ಪಂದ್ಯದಲ್ಲಿ ಆಸೀಸ್ ಮೋಸ! ಈ ದೃಶ್ಯ ನೋಡಿ ನೀವೇ ಹೇಳಿ  title=
, Shubman Gill Out Controversy

Shubman Gill: ಆಸ್ಟ್ರೇಲಿಯದ ಆಲ್‌ ರೌಂಡರ್‌ ಕ್ಯಾಮರೂನ್‌ ಗ್ರೀನ್‌, ಶುಭ್ಮನ್‌ ಗಿಲ್‌ ಅವರ ಕ್ಯಾಚ್ ಹಿಡಿದಿರುವುದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಭಾರೀ ಆಕ್ರೋಶ ಕೂಡ ವ್ಯಕ್ತವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಸಂಬಂಧ ವಿಡಿಯೋ ಕೂಡ ವೈರಲ್ ಆಗುತ್ತಿದ್ದು, ಟೆಸ್ಟ್ ನಲ್ಲಿ ಭಾರತ ಗೆಲ್ಲಲೇಬೇಕಾದ ಪಂದ್ಯದಲ್ಲಿ ಮೋಸದಾಟ ನಡೆಯುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.

ಇದನ್ನೂ ಓದಿ: ವಿಶ್ವಕಪ್’ಗೂ ಮುನ್ನ Team Indiaಗೆ ಸಿಹಿಸುದ್ದಿ: 2 ವರ್ಷಗಳ ಬಳಿಕ ಗ್ರ್ಯಾಂಡ್ ಎಂಟ್ರಿ ಕೊಡ್ತಿದ್ದಾನೆ ಈ ಮಾರಕ ಬೌಲರ್!

ಎಲ್ಲದಕ್ಕೂ ಮೊದಲು ಈ ದೃಶ್ಯ​ ಒಮ್ಮೆ ನೋಡಿ.

444 ರನ್‌ ಗಳ ಇನ್ನಿಂಗ್ಸ್ ಚೇಸ್ ಮಾಡಬೇಕು, ಇದು ನಿರ್ಣಾಯಕ ಕ್ಷಣವಾದ್ದರಿಂದ ಭಾರತ ತನ್ನ ಪ್ರಬಲ ಹೋರಾಟವನ್ನು ಆಸೀಸ್ ವಿರುದ್ಧ ನಡೆಸುತ್ತಿದೆ. ಈ ಸಂದರ್ಭದಲ್ಲಿ ಶುಭ್ಮನ್ ಗಿಲ್ ಅವರು, ಸ್ಕಾಟ್ ಬೋಲ್ಯಾಂಡ್‌ ಎಸೆತದಲ್ಲಿ ರನ್ ಕಲೆ ಹಾಕಲು ಮುಂದಾದಾಗ ಆ ಬಾಲ್ ನ್ನು ಕ್ಯಾಮರೂನ್ ಗ್ರೀನ್ ಕ್ಯಾಚ್ ಪಡೆದರು. ಆದರೆ ಆ ಬಾಲ್ ನೆಲದ ಅಂಚಿಗೆ ತಾಗಿದೆ. ಆದರೂ ಸಹ ಆ ಎಸೆತವನ್ನು ಔಟ್ ಎಂದು ಅಂಪೈರ್ ಘೋಷಿಸಿ, ಶುಭ್ಮನ್ ಪೆವಿಲಿಯನ್ ಗೆ ಮರಳುವಂತೆ ಮಾಡಿದರು.

ಗ್ರೀನ್ ಅವರು ಕ್ಲೀನ್ ಕ್ಯಾಚ್ ಹಿಡಿದಿದ್ದಾರೆ ಎಂದನಿಸಿದರೂ ಸಹ ಅದನ್ನು ಒಪ್ಪಲು ಟೀಂ ಇಂಡಿಯಾ ಫ್ಯಾನ್ಸ್ ಸಿದ್ಧರಿಲ್ಲ. ಇಲ್ಲಿ ಮೋಸದಾಟ ನಡೆಯುತ್ತಿದೆ ಎಂದು ದೂರುತ್ತಿದ್ದಾರೆ. ಈ ಹಿಂದೆ ಬಾಲ್ ಟ್ಯಾಂಪರಿಂಗ್ ಮಾಡುತ್ತಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿತ್ತು.

ದುರದೃಷ್ಟವಶಾತ್ ಭಾರತದ ಪರ ಬ್ಯಾಟ್ ಬೀಸಿದ್ದ ಗಿಲ್ ಕೇವಲ 18 ರನ್‌ ಗಳಿಗೆ ಔಟಾದರು. ನಾಲ್ಕನೇ ದಿನದ ಟೀ ಬ್ರೇಕ್ ಸಮಯಕ್ಕೆ ಭಾರತದ ಸ್ಕೋರ್ 1 ವಿಕೆಟ್ ನಷ್ಟಕ್ಕೆ 41 ರನ್ ಆಗಿದೆ.

ಇದನ್ನೂ ಓದಿ: ತಾಳ್ಮೆಯ ಪ್ರತೀಕ ಧೋನಿಗೆ ಈ ವ್ಯಕ್ತಿಯನ್ನ ಕಂಡ್ರೆ ಆಗಲ್ಲ…! ಬಾಲ್ಯದ ದ್ವೇಷಕ್ಕೆ ‘ರಕ್ತಸಂಬಂಧ’ವನ್ನೇ ದೂರವಿಟ್ಟರು ಮಾಹಿ

ಈ ಮಧ್ಯೆ ಗಿಲ್ ಔಟ್ ವಿಚಾರವಾಗಿ ಥರ್ಡ್ ಅಂಪೈರ್ ನೀಡಿದ ನಿರ್ಧಾರವನ್ನು ಭಾರತದ ಮಾಜಿ ಆಟಗಾರರು ಮತ್ತು ಕಾಮೆಂಟೇಟರ್‌ ಗಳು ಧಿಕ್ಕರಿಸಿದ್ದು, ಗಿಲ್‌ ಬೆಂಬಲಕ್ಕೆ ನಿಂತಿದ್ದಾರೆ.

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

 

 

 

Trending News