Adipurush ನಿರ್ಮಾಪಕರ ಮಹತ್ವದ ನಿರ್ಧಾರ, ಆಕ್ಷೇಪಾರ್ಹ ಸಂಭಾಷಣೆಗಳನ್ನು ಬದಲಿಸಲಾಗುವುದು

Adipurush Controversy: ಮನೋಜ್ ಮುಂತಶಿರ್ ಇತ್ತೀಚೆಗೆ ಬಿಡುಗಡೆಯಾದ ಪೌರಾಣಿಕ ಮಹಾಕಾವ್ಯ ಚಿತ್ರ 'ಆದಿಪುರುಷ'ನಲ್ಲಿ ಕೆಲವು ಸಂಭಾಷಣೆಗಳ ಸಾಲುಗಳನ್ನು ಬದಲಾಯಿಸಲು ನಿರ್ಧರಿಸಿದ್ದಾರೆ.  

Written by - Nitin Tabib | Last Updated : Jun 18, 2023, 05:50 PM IST
  • ಈ ಕುರಿತು ತಮ್ಮ ಪೋಸ್ಟ್ ವೊಂದರಲ್ಲಿ ಬರೆದುಕೊಂಡ ಮನೋಜ್,
  • 'ಸನಾತನದ ನಿಜವಾದ ವೀರರನ್ನು ನಮ್ಮ ಯುವ ಪೀಳಿಗೆಯ ಮುಂದೆ ಪ್ರಸ್ತುತಪಡಿಸುವುದು ನಮ್ಮ ಗುರಿಯಾಗಿದೆ.
  • ಪ್ರೇಕ್ಷಕರ ಆಕ್ಷೇಪಣೆಗಳಿರುವ 5 ಡೈಲಾಗ್‌ಗಳನ್ನು ಬದಲಾಯಿಸಲಾಗುವುದು.
  • ಕೆಲವು ಭಾಗಗಳು ಜನರಿಗೆ ಇಷ್ಟವಾಗದಿದ್ದರೆ, ಅದನ್ನು ಸರಿಪಡಿಸುವುದು ನಮ್ಮ ಜವಾಬ್ದಾರಿ ಎಂದಿದ್ದಾರೆ,
Adipurush ನಿರ್ಮಾಪಕರ ಮಹತ್ವದ ನಿರ್ಧಾರ, ಆಕ್ಷೇಪಾರ್ಹ ಸಂಭಾಷಣೆಗಳನ್ನು ಬದಲಿಸಲಾಗುವುದು title=

Adipurush Box Office: ಒಂದೆಡೆ 'ರಾಮಾಯಣ' ಆಧಾರಿತ 'ಆದಿಪುರುಷ' ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ  ಚಿತ್ರದ ಬಗ್ಗೆ ಸಾಕಷ್ಟು ವಿವಾದಗಳೂ ಕೂಡ ಹುಟ್ಟಿಕೊಂಡಿವೆ. 'ಆದಿಪುರುಷ' ಚಿತ್ರದ ಡೈಲಾಗ್‌ಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಲೇಖಕರು ಮತ್ತು ಚಿತ್ರದ  ತಯಾರಕರು ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ, ಈ ಹಿನ್ನೆಲೆಯಲ್ಲಿ ಚಿತ್ರದ ಕೆಲವು ಸಂಭಾಷಣೆಗಳನ್ನು ಬದಲಾಯಿಸಲು ನಿರ್ಧರಿಸಲಾಗಿದೆ. ಇತ್ತೀಚಿಗೆ ಬಿಡುಗಡೆಯಾದ ಪೌರಾಣಿಕ ಮಹಾಕಾವ್ಯ ಚಿತ್ರ ಆದಿಪುರುಷನಲ್ಲಿ ಕೆಲವು ಸಾಲುಗಳ ಸಂಭಾಷಣೆಗಳನ್ನು ಬದಲಾಯಿಸಲು ಚಿತ್ರದ ಬರಹಗಾರ ಮನೋಜ್ ಮುಂತಶಿರ್ ನಿರ್ಧರಿಸಿದ್ದಾರೆ. ಅದರಲ್ಲೂ ಹನುಮಂತ ಹೇಳಿದ ಸಂವಾದದ ಬಗ್ಗೆ ಅಸಮಾಧಾನ ವ್ಯಕ್ತವಾಗಿದ್ದು, ಬಳಿಕ ಇದೀಗ ಈ ನಿರ್ಧಾರ ಕೈಗೊಳ್ಳಲಾಗಿದೆ.

ಇದನ್ನೂ ಓದಿ-Adipusush ಚಿತ್ರ ನಿರ್ಮಾಪಕರಿಗೆ ಬಿಗ್ ಶಾಕ್, ಎಲ್ಲಾ ಪ್ರಯತ್ನಗಳ ಹೊರತಾಗಿ ಚಿತ್ರ ಆನ್ಲೈನ್ ನಲ್ಲಿ ಸೋರಿಕೆ

ಈ ಕುರಿತು ತಮ್ಮ ಪೋಸ್ಟ್ ವೊಂದರಲ್ಲಿ ಬರೆದುಕೊಂಡ ಮನೋಜ್, 'ಸನಾತನದ ನಿಜವಾದ ವೀರರನ್ನು ನಮ್ಮ ಯುವ ಪೀಳಿಗೆಯ ಮುಂದೆ ಪ್ರಸ್ತುತಪಡಿಸುವುದು ನಮ್ಮ ಗುರಿಯಾಗಿದೆ. ಪ್ರೇಕ್ಷಕರ ಆಕ್ಷೇಪಣೆಗಳಿರುವ 5 ಡೈಲಾಗ್‌ಗಳನ್ನು ಬದಲಾಯಿಸಲಾಗುವುದು. ಕೆಲವು ಭಾಗಗಳು ಜನರಿಗೆ ಇಷ್ಟವಾಗದಿದ್ದರೆ, ಅದನ್ನು ಸರಿಪಡಿಸುವುದು ನಮ್ಮ ಜವಾಬ್ದಾರಿ ಎಂದಿದ್ದಾರೆ, ಈ ಚಿತ್ರ ಬಿಡುಗಡೆಗೆ ಪ್ರೇಕ್ಷಕರು ದೀರ್ಘ ಕಾಲದಿಂದ ಕಾಯುತ್ತಿದ್ದರು, ಆದರೆ ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಬಳಿಕ, ಪ್ರೇಕ್ಷಕರು ಚಿತ್ರದ ಕೆಲವು ದೃಶ್ಯಗಳು ಮತ್ತು ಸಂಭಾಷಣೆಗಳಿಗೆ ಆಕ್ಷೇಪವ್ಯಕ್ತಪಡಿಸಿದ್ದಾರೆ.  'ಚಿತ್ರವನ್ನು ಸ್ಮರಣೀಯವಾಗಿಸಲು ಚಿತ್ರತಂಡವು ಚಿತ್ರದ ಸಂಭಾಷಣೆಗಳಲ್ಲಿ ಬದಲಾವಣೆಗಳನ್ನು ಮಾಡಲು ನಿರ್ಧರಿಸಿದೆ, ಸಾರ್ವಜನಿಕರ ಮತ್ತು ಪ್ರೇಕ್ಷಕರ ಅಭಿಪ್ರಾಯಕ್ಕೆ ಪ್ರಾಮುಖ್ಯತೆಯನ್ನು ನೀಡುತ್ತದೆ' ಎಂದು ನಿರ್ಮಾಪಕರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ-Amit Shah: 'ಸಾವಿರಾರು ಅಮಾಯಕ ಸಿಖ್ ಸಹೋದರ-ಸಹೋದರಿಯರನ್ನು ಹತ್ಯೆಗೈದರು..', 84ರ ಗಲಭೆ ಉಲ್ಲೇಖಿಸಿ ಕಾಗ್ರೆಸ್ ವಿರುದ್ದ್ ಅಮಿತ್ ಶಾ ವಾಗ್ದಾಳಿ

ಚಿತ್ರ ತಯಾರಕರು ಸಂಭಾಷಣೆಗಳ ಕುರಿತು ಮತ್ತೊಮ್ಮೆ ಯೋಚಿಸಲು ಮುಂದಾಗಿದ್ದಾರೆ. ಅವುಗಳು ಮತ್ತೊಮ್ಮೆ ಬರೆಯಲಾಗಿವೆ ಎಂಬುದನ್ನೂ ಕೂಡ ಖಚಿತಪಡಿಸಿಕೊಳ್ಳಲು ಅವರು ಪ್ರಯತ್ನಿಸಲಿದ್ದು, ಮುಂಬರುವ ದಿನಗಳಲ್ಲಿ ಥಿಯೇಟರ್ ಗಳಲ್ಲಿ ಆ ಸಂಭಾಷಣೆಗಳು ಪ್ರೇಕ್ಷಕರಿಗೆ ಕೇಳಲು ಸಿಗಲಿವೆ.  ಗಲ್ಲಾಪೆಟ್ಟಿಗೆಯಲ್ಲಿ ಚಿತ್ರ ಭರ್ಜರಿ ಕಲೆಕ್ಷನ್ ಮಾಡಿದರೂ ಪ್ರೇಕ್ಷಕರ ಭಾವನೆಗಳಿಗೆ ಧಕ್ಕೆಯಾಗಬಾರದು ಎನ್ನುವುದೇ ಈ ನಿರ್ಧಾರವೇ ಕಾರಣ ಎನ್ನಲಾಗಿದೆ. ಚಿತ್ರದಲ್ಲಿನ ವಿವಾದಾತ್ಮಕ ಸಂಭಾಷಣೆಯೊಂದು ಲಂಕಾ ದಹನ್ ಸಮಯದ ಚಿತ್ರೀಕರಣ ತೋರಿಸುತ್ತದೆ. ಇದರಲ್ಲಿ ಹನುಮಂತನ ಪಾತ್ರಧಾರಿ "ಕಪಡಾ ತೆರೆ ಬಾಪ್ ಕಾ, ತೇಲ್ ತೆರೆ ಬಾಪ್ ಕಾ, ಜಲೇಗಿ ಭೀ ತೇರಿ ಬಾಪ್ ಕಿ" ಎಂಬ ಡೈಲಾಗ್ ಹೊಡೆಯುತ್ತಾನೆ ಅಂದರೆ, ಬಟ್ಟೆ ನಿಮ್ಮಪ್ಪಂದು, ಎಣ್ಣೆ ನಿಮ್ಮಪ್ಪಂದು, ಸುಟ್ರು ನಿಮ್ಮಪ್ಪಂದೆ ಸುಡುತ್ತೆ" ಎಂಬುದು ಇದರ ಅರ್ಥ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News