Karnataka Budget 2023: ಇಂದು ಸಿಎಂ ಸಿದ್ದರಾಮಯ್ಯ 14ನೇ ಬಾರಿಗೆ ಬಜೆಟ್ ಮಂಡನೆ ಮಾಡಲಿದ್ದಾರೆ. ನೂತನ ಸರ್ಕಾರದ ಮೊದಲ ಬಜೆಟ್ ಬಗ್ಗೆ ರಾಜ್ಯದ ಜನತೆಗೆ ನೂರೆಂಟು ನಿರೀಕ್ಷೆಗಳಿವೆ. ದಕ್ಷಿಣ ಕನ್ನಡ, ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ, ಮೈಸೂರು ಭಾಗದ ಜನರ ನೀರಿಕ್ಷೆಗಳು ಒಂದೆಡೆ ಆದರೆ, ಬಜೆಟ್‌ನಲ್ಲಿ ಬೆಂಗಳೂರಿಗೆ ಭರಪೂರ ಅನುದಾನ ನಿರೀಕ್ಷೆಯಿದೆ. ಯಾವ ಭಾಗದ ಜನರ ನಿರೀಕ್ಷೆಗಳೇನು? ಎಂದು ತಿಳಿಯೋಣ...
ಸಿದ್ದರಾಮಯ್ಯ ಬಜೆಟ್ ನಿರೀಕ್ಷೆ: ಜಿಲ್ಲಾವಾರು ಇರುವ ಬೇಡಿಕೆಗಳೇನು?
ದಕ್ಷಿಣ ಕನ್ನಡದ ಬೇಡಿಕೆಗಳ ಪಟ್ಟಿ:
- ಕರಾವಳಿ ಪ್ರಾಧಿಕಾರ ಮೇಲ್ದರ್ಜೆಗೆ
- ಮೀನುಗಾರರಿಗೆ 10 ಲಕ್ಷ ರೂ. ವಿಮೆ
- ಮೀನುಗಾರ ಮಹಿಳೆಯರಿಗೆ ಬಡ್ಡಿರಹಿತ ಸಾಲ
- ಹಡಗು ಖರೀದಿಗೆ 25 ಲಕ್ಷ ರೂ. ಸಾಲ
- ನಾರಾಯಣಗುರು ಅಭಿವೃದ್ಧಿ ಮಂಡಳಿ
- ಬಂಟರ ಅಭಿವೃದ್ಧಿ ಮಂಡಳಿ ಸ್ಥಾಪನೆ
- ಅಡಕೆ ಬೆಳೆ ಸಮಸ್ಯೆ ಪರಿಹಾರಕ್ಕೆ 50 ಕೋಟಿ ರೂ.
- ಉಡುಪಿಯ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಶ್ಚೇತನ
ಕಲ್ಯಾಣ ಕರ್ನಾಟಕದ ಬೇಡಿಕೆಗಳು:
- ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಬಜೆಟ್
- 70 ಸಾವಿರ ಕೋಟಿ ರೂಪಾಯಿ ಮೀಸಲಿಡಿ
- ತೊಗರಿ ಅಭಿವೃದ್ಧಿ ಮಂಡಳಿಗೆ 100 ಕೋಟಿ ರೂ. ಅನುದಾನ
- ಪ್ರತ್ಯೇಕ ಕೈಗಾರಿಕಾ ನೀತಿ ಜತೆಗೆ ಮೆಗಾ ಟೆಕ್ಸ್‌ಟೈಲ್ ಪಾರ್ಕ್‌ಗೆ ಅನುದಾನ
- ಯುವಕರಿಗೆ ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಹೆಚ್ಚಿನ ಮೀಸಲಾತಿ
- ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಪ್ರತ್ಯೇಕ ಅನುದಾನ
ಮಧ್ಯ ಕರ್ನಾಟಕದ ಬೇಡಿಕೆಗಳು:
- ದಾವಣಗೆರೆಯಲ್ಲಿ ವಿಮಾನ ನಿಲ್ದಾಣಕ್ಕೆ ಸ್ಥಳ
- ಬಹು ಬೇಡಿಕೆಯ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ
- ಮೆಕ್ಕೆಜೋಳ ಆಹಾರ ಸಂಸ್ಕರಣ ಘಟಕ ನಿರ್ಮಾಣ ಸ್ಥಾಪನೆ
- ನನಸಾಗಬೇಕಿದೆ ಕೈಗಾರಿಕಾ ಕಾರಿಡಾರ್ ನಿರ್ಮಾಣದ ಕನಸು
- ಚಿತ್ರದುರ್ಗದಲ್ಲಿ ಮೂಲಸೌಕರ್ಯಗಳ ಕೊರತೆ ನೀಗಿಸಬೇಕಿದೆ
ಮೈಸೂರು ಭಾಗದ ನಿರೀಕ್ಷೆಗಳೇನು?
- ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಬೇಕು
- ಕನಿಷ್ಠ 4 ಆನೆಧಾಮಗಳ ಸ್ಥಾಪನೆಗೆ ಅನುದಾನ
- ಮಂಡ್ಯದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
- ಚಾಮರಾಜನಗರದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ
- ಗುಣಮಟ್ಟದ ಶಿಕ್ಷಣ ಮತ್ತು ಶಾಲೆಗಳ ಅಭಿವೃದ್ಧಿಗೆ ಅನುದಾನ
- ಶ್ರೀರಂಗಪಟ್ಟಣ ಮೆಕ್ಸಿಕೋ ಮಾದರಿಯಲ್ಲಿ ಅಭಿವೃದ್ಧಿಪಡಿಸಿ ಸ್ಮಾರಕಗಳ ಸಂರಕ್ಷಣೆ
- ಕೊಡಗಿನ ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆಗೆ ಒತ್ತಾಯ
ಉತ್ತರ ಕರ್ನಾಟಕದ ಬೇಡಿಕೆಗಳು..?
- ನನೆಗುದಿಗೆ ಬಿದ್ದ ಮಹಾದಾಯಿ ಯೋಜನೆ ಸಾಕಾರ
- ಶಿಕ್ಷಣ ಕ್ಷೇತ್ರ ಮತ್ತು ನೀರಾವರಿ ಯೋಜನೆಗಳಿಗೆ ಆದ್ಯತೆ
- ಕೃಷಿ ವಿಚಾರದಲ್ಲಿ ಇಸ್ರೇಲ್ ಮಾದರಿ ಯೋಜನೆ ಅಳವಡಿಕೆ
- ಇಂಡಸ್ಟ್ರಿಯಲ್ ಕಾರಿಡಾರ್ ನಿರ್ಮಾಣಕ್ಕೆ ವಿಶೇಷ ಒತ್ತು
- ಹುಬ್ಬಳ್ಳಿ ಮತ್ತು ಬೆಳಗಾವಿ ಸುತ್ತ ಬೃಹತ್ ಕೈಗಾರಿಕೆಗಳ ನಿರ್ಮಾಣ
ಇದನ್ನೂ ಓದಿ- ನನ್ನ ಬಳಿ ಇರುವ ಪೆನ್ ಡ್ರೈವ್ ಅಸಲಿ, ಹೈದ್ರಾಬಾದ್ ನಲ್ಲಿ ಮಾಡಿಸಿದ್ದಲ್ಲ- ಮಾಜಿ ಸಿಎಂ ಎಚ್‌ಡಿಕೆ
ಸಿದ್ದು ಬಜೆಟ್‌ಗೆ 'ಗ್ಯಾರಂಟಿ' ಭಾರ..!
- ಗ್ಯಾರಂಟಿಗಾಗಿ ಬಿಜೆಪಿ ಯೋಜನೆಗಳಿಗೆ ಕತ್ತರಿ?
- ಅಹಿಂದ ವರ್ಗಕ್ಕೆ ಸಿದ್ದರಾಮಯ್ಯ ಗಿಫ್ಟ್ ಸಂಭವ
- ಕೆಲ ಕಲ್ಯಾಣ ಯೋಜನೆಗಳು ಮುಂದುವರಿಕೆ
- ಅಹಿಂದ ವಿದ್ಯಾರ್ಥಿಗಳ ಸೌಲಭ್ಯಗಳು ಕಂಟಿನ್ಯೂ..?
- ವಿದ್ಯಾರ್ಥಿ ವೇತನ ನೀಡುವ ಯೋಜನೆಗಳಿಗೆ ಕತ್ತರಿ ಪ್ರಯೋಗ?
- ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಯೋಜನೆಗಳು ಗೃಹ ಜ್ಯೋತಿ ಜೊತೆ ವಿಲೀನ
- ಅಹಿಂದ ಸಮುದಾಯದ ವಿದ್ಯಾರ್ಥಿಗಳ ಸೌಲಭ್ಯಗಳಿಗೆ ಇಲ್ಲ ಧಕ್ಕೆ
ಅಹಿಂದ ಸಮುದಾಯಕ್ಕೆ ಗಿಫ್ಟ್?
1. SC-ST, OBC ಹಾಗೂ ಅಲ್ಪಸಂಖ್ಯಾತರ ಶಿಕ್ಷಣ ಹಾಗೂ ಆರೋಗ್ಯ ಯೋಜನೆ ಮುಂದುವರಿಕೆ
2. SC-ST, OBC ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪ್ರಕಟ ಸಂಭವ
3. ಶೈಕ್ಷಣಿಕ ಸಾಲ, ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ ಯಥಾವತ್ತಾಗಿ ಮುಂದುವರಿಕೆ..?
4. ಬೆಂಗಳೂರಲ್ಲಿ ಇಂದಿರಾ ಕ್ಯಾಂಟೀನ್ ಜಾರಿಗೆ ವಿಶೇಷ ಕ್ರಮ ಕೈಗೊಳ್ಳುವ ಸಂಭವ
ಬಜೆಟ್‌ನಲ್ಲಿ ಬೆಂಗಳೂರಿಗೆ ಭರಪೂರ ಅನುದಾನ ನಿರೀಕ್ಷೆ!
BBMP-BDA-BMRCL ನಿರೀಕ್ಷ:
- ಬಿಬಿಎಂಪಿ ಚುನಾವಣೆ, ಮೆಟ್ರೋ ವಿಸ್ತರಣೆ ನಿರೀಕ್ಷೆ
- BBMP ಚುನಾವಣೆಯಿಂದ ಹೆಚ್ಚು ಅನುದಾನ..?
- ನೀರಿನ ಸಮಸ್ಯೆ, ಒಳಚರಂಡಿ ವ್ಯವಸ್ಥೆಗೆ ಒತ್ತು
- ಸಾರಿಗೆ, ರಸ್ತೆ ಗುಂಡಿ ಮುಚ್ಚುವುದು, ಡಾಂಬರೀಕರಣ
- BDA ರೂಪಿಸಿರುವ 2035 ಮಾಸ್ಟರ್ ಪ್ಲಾನ್ ಜಾರಿ ಕ್ರಮ
- ನೀರಿನ ಸಮಸ್ಯೆ, ಕಾವೇರಿ ನೀರಿನ ಸರಬರಾಜಿಗೆ ಕ್ರಮ
- ಒಳಚರಂಡಿ ಸರಿಮಾಡಿ ಪ್ರವಾಹ ಪರಿಸ್ಥಿತಿ ನಿರ್ವಹಣೆ
- ಮೆಟ್ರೋ ರೈಲು ಯೋಜನೆ, ಹಳದಿ ಮಾರ್ಗದ ಮೆಟ್ರೋ ಸಂಚಾರ
- ಪೆರಿಫೆರಲ್ ವರ್ತುಲ ರಸ್ತೆ, ಹೊರ ವರ್ತುಲ ರಸ್ತೆಗಳ ನಿರ್ಮಾಣ
- ಬೆಂಗಳೂರು ನಗರದ ದಟ್ಟಣೆ ತಗ್ಗಿಸಲು ಅಗತ್ಯ ಕ್ರಮ
- ಡ್ರೋನ್ ಕ್ಯಾಮೆರಾ ಅಳವಡಿಕೆ, ಸುಗಮ ಸಂಚಾರಕ್ಕೆ ಒತ್ತು
- ಚಾಲುಕ್ಯ ಸರ್ಕಲ್ to ಹೆಬ್ಬಾಳದವರೆಗೆ ಉಕ್ಕಿನ ಮೇಲ್ಸೇತುವೆ..?
- ತುಮಕೂರು ರಸ್ತೆಯಲ್ಲಿ ಸುರಂಗ ರಸ್ತೆ ಮಾರ್ಗ ಪ್ರಕಟ..?
- ಬೆಂಗಳೂರಿನ ಎಲ್ಲೆಡೆ ಇಂದಿರಾ ಕ್ಯಾಂಟೀನ್ ಕಾರ್ಯಾರಂಭ
ಇದನ್ನೂ ಓದಿ- ಬಜೆಟ್ ಮುಗಿಸಿ ನಾಳೆಯೇ ಉಡುಪಿಗೆ ಭೇಟಿ- ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಬೆಂಗಳೂರಿಗೆ ಬೊಮ್ಮಾಯಿ ಕೊನೆ ಬಜೆಟ್‌ನಲ್ಲಿ ಕೊಟ್ಟಿದ್ದೇನು..?
ಬಸವರಾಜ ಬೊಮ್ಮಾಯಿ ಅವರ ಕೊನೆಯ ಬಜೆಟ್‌ನಲ್ಲಿ ಬೆಂಗಳೂರಿಗೆ ಏನು ಕೊಡುಗೆ ನೀಡಿದ್ದರು ಎಂಬುದನ್ನೂ ನೋಡುವುದಾದರೆ...
- ಕೊನೆಯ ಬಜೆಟ್‌ನಲ್ಲಿ 8,409 ಕೋಟಿ ರೂಪಾಯಿ ಅನುದಾನ
- 2021-22ರ ಬಜೆಟ್ ಗೆ ಹೋಲಿಸಿದರೆ 614 ಕೋಟಿ ರೂ. ಅನುದಾನ ಹೆಚ್ಚಳ
- ಸರ್ಜಾಪುರ-ಹೆಬ್ಬಾಳ ನಡುವೆ 37 ಕಿ.ಮೀ ಮೆಟ್ರೋ ಭರವಸೆ
- ಹೊಸಹಳ್ಳಿ-ಕಡಬಗೆರೆ ನಡುವೆ 13 ಕಿ.ಮೀ ಮೆಟ್ರೊ ಮಾರ್ಗದ ಭರವಸೆ
- ಮೆಟ್ರೊ ಮೂರನೇ ಹಂತಕ್ಕೆ 11,250 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದರು
- 105 ಎಕರೆಯ NGEF ಪ್ರದೇಶದಲ್ಲಿ ಸಿಂಗಾಪುರ ಮಾದರಿಯಲ್ಲಿ ಗ್ರೀನ್ ಎಕ್ಸ್ ಪೋ
- ಯಲಹಂಕ ಸಮೀಪ 105 ಎಕರೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಉದ್ಯಾನವನ
- ನಗರದಲ್ಲಿ 4 500 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ
- ಎಲ್ಲ 198 ವಾರ್ಡ್‌ಗಳಲ್ಲಿ ‘ನಮ್ಮ ಕ್ಲಿನಿಕ್’ ಸ್ಥಾಪನೆ
- ಬಿ ಖಾತಾ ಸ್ವತ್ತುಗಳಿಗೆ ‘ಎ’ ಖಾತಾ ನೀಡುವುದು
- ನಿತ್ಯ 77.50 ಕೋಟಿ ಲೀಟರ್ ನೀರು ತರುವ ಕಾವೇರಿ 5ನೇ ಹಂತದ ಯೋಜನೆ
- ಬಾಕಿ 4000 ಕೋಟಿ ರೂಪಾಯಿ ಬಿಡುಗಡೆಗೊಳಿಸಿ 2024-25ರೊಳಗೆ ಪೂರ್ಣ
- ರಾಜಾಕಾಲುವೆ ಅಭಿವೃದ್ಧಿಗೆ 1500 ಕೋಟಿ ರೂ ಅನುದಾನ
- ಮಡಿವಾಳ ಮತ್ತು ಮಲ್ಲಪ್ಪಶೆಟ್ಟಿ ಕೆರೆಗಳ ಅಭಿವೃದ್ದಿ
- ಕಟ್ಟಡ ಕಾರ್ಮಿಕರಿಗೆ 100 ಹೈಟೆಕ್ ಸಂಚಾರ ಕ್ಲಿನಿಕ್ ಗಳ ಸ್ಥಾಪನೆ
- ಜಲ ಮಾಲಿನ್ಯ ನಿಯಂತ್ರಣಕ್ಕೆ 1500 ಕೋಟಿ ರೂ.ಗಳ ವೆಚ್ಚ
- 20 ಬೆಂಗಳೂರು ಪಬ್ಲಿಕ್ ಶಾಲೆಗಳ ಅಭಿವೃದ್ಧಿಗೆ 89 ಕೋಟಿ ರೂ ಅನುದಾನ
- ಜಕ್ಕೂರು ವಿಮಾನ ತರಬೇತಿ ಶಾಲೆ ಅಭಿವೃದ್ಧಿಗೆ ಖಾಸಗಿ ಸಹಭಾಗಿತ್ವ
ಕೆಲವು ಯೋಜನೆಗಳಿಗೆ ಕತ್ತರಿ ಪ್ರಯೋಗ?
1. ಕೆಲವು ಜನ ಕಲ್ಯಾಣ ಯೋಜನೆಗಳಿಗೆ ಕತ್ತರಿ ಪ್ರಯೋಗ ಸಾಧ್ಯತೆ
2. ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಕೆಲವು ಯೋಜನೆಗಳಿಗೆ ಕೊಕ್
3. ಬಿಜೆಪಿ ಸರ್ಕಾರದ ಅತ್ಯಗತ್ಯ ಯೋಜನೆ ಉಳಿಸಿಕೊಳ್ಳುವ ನಿರೀಕ್ಷೆ
ಒಟ್ಟಾರೆಯಾಗಿ 14ನೇ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್ ಬಗ್ಗೆ ಜನರಿಗೆ ಬೆಟ್ಟದಷ್ಟು ನಿರೀಕ್ಷೆಗಳಿದ್ದು ಸಿಎಂ ಸಿದ್ಧರಾಮಯ್ಯ ಯಾವ ಭಾಗದ ಜನರಿಗೆ ಭಾಗ್ಯವಿಧಾತ ಆಗಲಿದ್ದಾರೆ. ಯಾರಿಗೆ ನಿರಾಶೆ ಉಂಟುಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=38l6m8543Vk
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.