ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ! ರೈಲು ಟಿಕೆಟ್ ಬಗ್ಗೆ ಜಾರಿಯಾಗಿದೆ ಹೊಸ ನಿಯಮ!

Indian Railways Latest Update: ರೈಲಿನಲ್ಲಿ ಪ್ರಯಾಣಿಸಬೇಕಾದರೆ ಟಿಕೆಟ್ ಅನ್ನು ಮೊದಲೇ ಬುಕ್ ಮಾಡಬೇಕಾಗುತ್ತದೆ. ರೈಲು ಟಿಕೆಟ್ ಗೆ ಸಂಬಂಧಿಸಿದ ಹೊಸ ನಿಯಮವನ್ನು ತಿಳಿದುಕೊಂಡಿರಬೇಕು. ರೈಲು ಟಿಕೆಟ್ ಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆ ನಿಯಮವನ್ನು ಬದಲಾಯಿಸಿದೆ. 

Written by - Ranjitha R K | Last Updated : Jul 13, 2023, 08:57 AM IST
  • ಪ್ರತಿನಿತ್ಯ ಲಕ್ಷಾಂತರ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಾರೆ.
  • ರೈಲಿನಲ್ಲಿ ಪ್ರಯಾಣಿಸಬೇಕಾದರೆ ಟಿಕೆಟ್ ಅನ್ನು ಮೊದಲೇ ಬುಕ್ ಮಾಡಬೇಕಾಗುತ್ತದೆ.
  • ಟಿಕೆಟ್ ಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆ ನಿಯಮವನ್ನು ಬದಲಾಯಿಸಿದೆ.
ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ! ರೈಲು ಟಿಕೆಟ್ ಬಗ್ಗೆ ಜಾರಿಯಾಗಿದೆ ಹೊಸ ನಿಯಮ!   title=

Indian Railways Latest Update : ನೀವು ಕೂಡಾ ಪ್ರಯಾಣಕ್ಕಾಗಿ ರೈಲು ಟಿಕೆಟ್ ಅನ್ನು ಬುಕ್ ಮಾಡಿದ್ದರೆ, ಈ ಸುದ್ದಿ ನಿಮಗೆ ಸಂತಸ ತರಬಹುದು. ಪ್ರತಿನಿತ್ಯ ಲಕ್ಷಾಂತರ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ರೈಲಿನಲ್ಲಿ ಪ್ರಯಾಣಿಸಬೇಕಾದರೆ ಟಿಕೆಟ್ ಅನ್ನು ಮೊದಲೇ ಬುಕ್ ಮಾಡಬೇಕಾಗುತ್ತದೆ. ಇಲ್ಲವಾದರೆ ಟಿಕೆಟ್ ಕನ್ಫರ್ಮ್ ಆಗದೆ ಹೋಗುವ ಸಂಭವ ಇರುತ್ತದೆ. ನೀವು ಕೂಡಾ ಪ್ರಯಾಣ ಬೆಳೆಸುವ ಸಲುವಾಗಿ ರೈಲು ಟಿಕೆಟ್ ಅನ್ನು  ಕಾಯ್ದಿರಿಸಲು ಹೋಗುತ್ತಿದ್ದರೆ ಅಥವಾ ಆ ಯೋಚನೆಯಲ್ಲಿದ್ದರೆ ರೈಲು ಟಿಕೆಟ್ ಗೆ ಸಂಬಂಧಿಸಿದ ಹೊಸ ನಿಯಮವನ್ನು ತಿಳಿದುಕೊಂಡಿರಬೇಕು. ರೈಲು ಟಿಕೆಟ್ ಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆ ನಿಯಮವನ್ನು ಬದಲಾಯಿಸಿದೆ. ರೈಲು ಟಿಕೆಟ್ ಬುಕ್ಕಿಂಗ್‌ಗೆ ಸಂಬಂಧಿಸಿದಂತೆ ರೈಲ್ವೆ ಹೊಸ ನಿಯಮಗಳನ್ನು ಹೊರಡಿಸಿದ್ದು, ಇದು ಪ್ರಯಾಣಿಕರಿಗೆ ಪ್ರಯೋಜನವಾಗಲಿದೆ. 

ನಿಮ್ಮ ಟಿಕೆಟ್ ಅನ್ನು ಇನ್ನೊಬ್ಬರಿಗೆ ವರ್ಗಾಯಿಸಬಹುದಾದ ನಿಯಮವನ್ನು ರೈಲ್ವೆ ಜಾರಿಗೆ ತಂದಿದೆ. ಅಂದರೆ, ಪ್ರಯಾಣಿಕನು ತಾಯಿ, ತಂದೆ, ಸಹೋದರ, ಸಹೋದರಿ, ಮಗ, ಮಗಳು, ಗಂಡ, ಹೆಂಡತಿಯಂತಹ ಕುಟುಂಬದ ಸದಸ್ಯರಿಗೆ ತನ್ನ ಟಿಕೆಟ್ ಅನ್ನು  ವರ್ಗಾಯಿಸಬಹುದು.

ಇದನ್ನೂ ಓದಿ : ಶ್ರೀಸಾಮಾನ್ಯರಿಗೆ ಮತ್ತೊಂದು ಶಾಕಿಂಗ್ ಸುದ್ದಿ! ಮತ್ತೆ ಹೆಚ್ಚಾಯ್ತು ಚಿಲ್ಲರೆ ಹಣದುಬ್ಬರ

ನಿಮ್ಮ ಟಿಕೆಟ್ ಅನ್ನು ನೀವು ಯಾರಿಗೆ ವರ್ಗಾಯಿಸಬಹುದು : 
ರೈಲ್ವೇ ನಿಯಮಗಳ ಪ್ರಕಾರ, ನೀವು ನಿಮ್ಮ ಟಿಕೆಟ್ ಅನ್ನು ನಿಮ್ಮ ಪೋಷಕರು, ಒಡಹುಟ್ಟಿದವರು, ಮಗ-ಮಗಳು ಅಥವಾ ಹೆಂಡತಿಯಂತಹ ನಿಮ್ಮ ಕುಟುಂಬದ ಸದಸ್ಯರ ಹೆಸರಿಗೆ ಮಾತ್ರ ವರ್ಗಾಯಿಸಬಹುದು. ಇದರರ್ಥ ನಿಮ್ಮ ಆಪ್ತ ಸ್ನೇಹಿತರು ನಿಮ್ಮ ಟಿಕೆಟ್‌ನಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲ.

ವರ್ಗಾವಣೆ ಟಿಕೆಟ್ ಅನ್ನು ಹೇಗೆ ಪಡೆಯುವುದು ? : 
ಟಿಕೆಟ್ ಅನ್ನು ವರ್ಗಾಯಿಸಲು, ಮೊದಲು ನೀವು ಆ ಟಿಕೆಟ್‌ನ ಪ್ರಿಂಟ್‌ಔಟ್ ತೆಗೆದುಕೊಂಡು ನಿಮ್ಮ ಹತ್ತಿರದ ರೈಲ್ವೆ ನಿಲ್ದಾಣಕ್ಕೆ ಹೋಗಬೇಕು. ಟಿಕೆಟ್ ಅನ್ನು ಯಾರ ಹೆಸರಿಗೆ ವರ್ಗಾಯಿಸಬೇಕೋ ಆ ವ್ಯಕ್ತಿಯ ಆಧಾರ್ ಕಾರ್ಡ್‌ನಂತಹ ಗುರುತಿನ ಪುರಾವೆಯನ್ನು ಕೂಡಾ ಜೊತೆಗೆ ಕೊಂಡೊಯ್ಯಬೇಕು. ಈ ಗುರುತಿನ ಪುರಾವೆಯನ್ನು ಲಗತ್ತಿಸುವ ಮೂಲಕ  ನೀವು ಟಿಕೆಟ್ ವರ್ಗಾವಣೆಗೆ ಅರ್ಜಿಯನ್ನು ನೀಡಬೇಕಾಗುತ್ತದೆ.

ಇದನ್ನೂ ಓದಿ : ಟೊಮೆಟೊ ದರಕ್ಕೆ ಸಂಬಂಧಿಸಿದಂತೆ ಇಲ್ಲಿದೆ ಒಂದು ಸಂತಸದ ಸುದ್ದಿ!

24 ಗಂಟೆ ಮುಂಚಿತವಾಗಿ ವರ್ಗಾವಣೆ ಮಾಡಬೇಕು:
ರೈಲ್ವೆ ನಿಯಮಗಳ ಪ್ರಕಾರ ಬೇರೆಯವರ ಹೆಸರಿಗೆ ಟಿಕೆಟ್ ವರ್ಗಾವಣೆ ಮಾಡಬೇಕಾದರೆ ರೈಲು ಹೊರಡುವ 24 ಗಂಟೆ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. 

ಒಮ್ಮೆ ಮಾತ್ರ ಅವಕಾಶ ಸಿಗುತ್ತದೆ : 
ನಿಮ್ಮ ಟಿಕೆಟ್ ಅನ್ನು ಒಮ್ಮೆ ಮಾತ್ರ ವರ್ಗಾಯಿಸಬಹುದು. ನೀವು ನಿಮ್ಮ ಟಿಕೆಟ್ ಅನ್ನು ಮತ್ತೆ ಮತ್ತೆ ಬೇರೆಯವರ ಹೆಸರಿಗೆ  ವರ್ಗಾಯಿಸಲು  ಸಾಧ್ಯವಾಗುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News