Health Tipes: ಕೊಕೊ ಹಣ್ಣು ಮೊದಲು ದಕ್ಷಿಣ ಅಮೆರಿಕಾದಿಂದ ಪರಿಚಯಿಸಲಾಯಿತು. ಬಳಿಕ ಭಾರತೀಯ ಮಲೆನಾಡು ಪ್ರದೇಶದಲ್ಲಿ ಹೇರಳವಾಗಿ ಕಂಡುಬಂದಿದೆ. ಈ ಹಣ್ಣಿನ ಬಗ್ಗೆ ಹಲವರಿಗೆ ತಿಳಿದಿರುವುದಿಲ್ಲ.
ಮಲೆನಾಡಿನ ಕಾಡಿನಲ್ಲಿ ಸಿಗುವ ಈ ಹಣ್ಣು ಸಖತ್ ರುಚಿ ಹೊಂದಿರುತ್ತದೆ. ಪ್ರೋಟೀನ್, ಸೆಲ್ಯುಲೋಸ್ , ಪಿಷ್ಟ, ನೀರು,ಖನಿಜಗಳು ಮತ್ತು ಉಪ್ಪು,ಸಾವಯವ ಆಮ್ಲಗಳು ಕೆಫೀನ್,ಕಬ್ಬಿಣ, ಮೆಗ್ನೀಸಿಯಮ್, ಕ್ಯಾಟೆಚಿನ್ಗಳು, ಫ್ಲೇವೊನಾಲ್ ಗ್ಲೈಕೋಸೈಡ್,ಆಂಥೋಸಯಾನಿನ್, ಪ್ರೊಸೈನಿಡಿನ್ಗಳನ್ನು ಒಳಗೊಂಡಿದೆ. ಹಾಗೆಯೇ ಕೋಕೋ ಪೌಡರ್ ನ್ನು ಚಾಕಲೇಟ್ ತಯಾರಿಕೆಯಲ್ಲಿ ಬಳಸಲಾಗುತ್ತದೆ.
ಇದನ್ನೂ ಓದಿ: Desi Chicken: ನಾಟಿ ಕೋಳಿ ರುಚಿ ಮಾತ್ರವಲ್ಲ.. ಆರೋಗ್ಯಕ್ಕೂ ಉತ್ತಮ ಔಷಧಿ..!
ಕೋಕೋದಲ್ಲಿ ಪಾಲಿಫಿನಾಲ್ ಅಂಶ ಇರುವುದರಿಂದ ರಕ್ತ ಸಂಚಲನಕ್ಕೆ ಸಹಕಾರಿಯಾಗಿದೆ. ಇದರ ಸೇವನೆಯಿಂದ ಮೆದುಳಿನ ಆರೋಗ್ಯವನ್ನು ವೃದ್ದಿಸುತ್ತದೆ. ಇದರಲ್ಲಿನ ಉತ್ಕರ್ಷಣಗಳು ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ನೈಟ್ರಿಕ್ ಆಕ್ಸೈಡ್ ಉತ್ಪಾದಿಸಿ ರಕ್ತನಾಳಗಳ ವಿಶ್ರಾಂತಿ ಗೆ ಸಹಾಯಕವಾಗಿದೆ. ಕೋಕೋ ಪೌಡರ್ ಪ್ರೊಸೈನಿಡಿನ್, ಕ್ಯಾಟೆಚಿನ್ ಮತ್ತು ಎಪಿಕಾಟೆಚಿನ್ನಂತಹ ಫ್ಲೇವನಾಯ್ಡ್ಗಳ ಅಂಶ ಹೆಚ್ಚಿರುವುದರಿಂದ ಹೃದಯದ ಆರೋಗ್ಯಕ್ಕೆ ಸಹಕಾರಿಯಾಗಿದೆ.
ಇದನ್ನೂ ಓದಿ: ದುಬಾರಿಯಾಗಿ ದುನಿಯಾ ಆಳುತ್ತಿರುವ ʼಟೊಮೆಟೋʼ ಆರೋಗ್ಯಕ್ಕೆ ಎಷ್ಟು ಒಳ್ಳೆಯದು..?
ರಕ್ತ ಹೆಪ್ಪುಗಟ್ಟುವಿಕೆ ತಡೆಯುವಿಕೆ, ಪಾರ್ಶ್ವವಾಯು ಅಥವಾ ಹೃದಯ ವೈಫಲ್ಯವನ್ನು ತಡೆಯುತ್ತದೆ. ಕೋಕೋ ಹಣ್ಣಿನಲ್ಲಿ ಸಕ್ಕರೆ ಮತ್ತು ಕೊಬ್ಬಿನಾಂಶ ಹೆಚ್ಚಿರುವುದರಿಂದ ಇದು ಮಧುಮೇಹ, ತೂಕ ಇಳಿಕೆಗೆ ಬಯಸುವರು ಇದರ ಸೇವನೆಯಿಂದ ದೂರ ಇರಬೇಕು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.