ವಿಶ್ವ ಭೂಮಿ ದಿನಕ್ಕೆ ಗೂಗಲ್‌ನಿಂದ ವಿಶೇಷ ಡೂಡಲ್!

ಗೂಗಲ್ ವಿಶೇಷ ಡೂಡಲ್ ಮೂಲಕ ವಿಶ್ವ ಭೂ ದಿನ 2019 ಅನ್ನು ಆಚರಿಸುತ್ತಿದೆ.   

Last Updated : Apr 22, 2019, 11:49 AM IST
ವಿಶ್ವ ಭೂಮಿ ದಿನಕ್ಕೆ ಗೂಗಲ್‌ನಿಂದ ವಿಶೇಷ ಡೂಡಲ್! title=

ನವದೆಹಲಿ: ಇಂದು ವಿಶ್ವ ಭೂಮಿ ದಿನ. ಪ್ರತಿ ವರ್ಷ ಏಪ್ರಿಲ್ 22ರಂದು ವಿಶ್ವಾದ್ಯಂತ ಭೂಮಿ ದಿನವನ್ನು ಆಚರಿಸಲಾಗುತ್ತದೆ. ಇದಕ್ಕಾಗಿ ಗೂಗಲ್ ವಿಶೇಷ ಡೂಡಲ್ ಮೂಲಕ ವಿಶ್ವ ಭೂ ದಿನ 2019 ಅನ್ನು ಆಚರಿಸುತ್ತಿದೆ. 

ಈ ಡೂಡಲ್ ನಲ್ಲಿ ಆರು ಸ್ಲೈಡ್ ಗಳಿದ್ದು, ಅಪರೂಪದ ಜೀವಿಗಳನ್ನು ಚಿತ್ರಿಸಲಾಗಿದೆ. ಅದರಲ್ಲಿ ಅಲೆಮಾರಿ ಕಡಲಕೋಳಿ, ಕೋಸ್ಟಲ್ ರೆಡ್‌ವುಡ್‌, ಪೆಡೊಫ್ರೈನ್ ಅಮಾವೆನ್ಸಿಸ್, ಅಮೆಜಾನ್ ವಾಟರ್‌ ಲಿಲ್ಲಿ, ಕೋಲಾಕಂತ್ ಮತ್ತು ಡೀಪ್ ಕೇವ್‌ ಸ್ಪ್ರಿಂಗ್‌ಟೇಲ್ ಜೀವಿಗಳ ಆರು ಚಿತ್ರಗಳನ್ನು ಸ್ಲೈಡ್ ಶೋ ಮೂಲಕ ತೋರಿಸಲಾಗಿದೆ. ಹಾಗೆಯೇ ಈ ಅಪರೂಪದ ಜೀವಿಗಳ ಬಗ್ಗೆ ಸಂಕ್ಷಿಪ್ತ ವಿವರಣೆಯನ್ನೂ ನೀಡಲಾಗಿದೆ.

ಕಳೆದ 21 ವರ್ಷಗಳಿಂದ ವಿಶ್ವ ಭೂಮಿ ದಿನದಂದು ವಿಶೇಷ ಡೂಡಲ್ ಅರ್ಪಿಸುತ್ತಿರುವ ಗೂಗಲ್ ಸಾಕಷ್ಟು ಕುತೂಹಲಕಾರಿ ವಿಷಯಗಳನ್ನು ಜನತೆಗೆ ತಿಳಿಸುವ ಪ್ರಯತ್ನ ಮಾಡುತ್ತಿದೆ. 

ವಿಶ್ವ ಭೂಮಿ ದಿನದ ಗೂಗಲ್ ಡೂಡಲ್ ವೀಕ್ಷಣೆಗೆ ಇಲ್ಲಿ ಕ್ಲಿಕ್ ಮಾಡಿ.

 

Trending News