Umpiring Controversy in Indian Cricket: ಕ್ರಿಕೆಟ್ ಮೈದಾನದಲ್ಲಿ ಅಂಪೈರಿಂಗ್ ಬಗ್ಗೆ ವಿವಾದಗಳು ಹೆಚ್ಚಾಗಿ ಉದ್ಭವಿಸುತ್ತವೆ. ಇಂತಹದ್ದೊಂದು ವಿವಾದವನ್ನು ಭಾರತ ಕ್ರಿಕೆಟ್ ತಂಡದ ನಾಯಕಿ ತಮ್ಮ ಹೇಳಿಕೆಯ ಮೂಲಕ ಸೃಷ್ಟಿಸಿದ್ದಾರೆ. ಅಂಪೈರಿಂಗ್ ಬಗ್ಗೆ ಸಾರ್ವಜನಿಕವಾಗಿ ಪ್ರಶ್ನೆಗಳನ್ನು ಎತ್ತಿದ್ದಾರೆ. ಇದೀಗ ಈ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಬಾಂಗ್ಲಾದೇಶ ವಿರುದ್ಧ ಶನಿವಾರ ನಡೆದ ಮೂರನೇ ಏಕದಿನ ಪಂದ್ಯದ ವೇಳೆ ಭಾರತೀಯ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅಂಪೈರಿಂಗ್ ಬಗ್ಗೆ ಟೀಕಿಸಿದ್ದಾರೆ. ಮೀರ್‌ಪುರದಲ್ಲಿ ನಡೆದ ಈ ಪಂದ್ಯ ಟೈ ಆಗಿತ್ತು. ಹರ್ಮನ್‌ಪ್ರೀತ್ ಇದನ್ನು 'ಅತ್ಯಂತ ನಿರಾಶಾದಾಯಕ' ಎಂದು ಬಣ್ಣಿಸಿದ್ದಾರೆ.
ಇದನ್ನೂ ಓದಿ: ಕೊಹ್ಲಿಯನ್ನ ಸಾವಿರ ಕೋಟಿ ಒಡೆಯ ಮಾಡಿದ್ದೇ ಈತ! ರೋಹಿತ್-ಸಲ್ಮಾನ್’ಗೂ ನೆಂಟ ಈ ಕೋಟ್ಯಾಧಿಪತಿ
ಮೂರು ODIಗಳ ಸರಣಿಯ ಕೊನೆಯ ಪಂದ್ಯದಲ್ಲಿ 4 ವಿಕೆಟ್ ಗೆ 225 ರನ್ ಗಳಿಸಿದ ನಂತರ, ಬಾಂಗ್ಲಾದೇಶವು 49.3 ಓವರ್‌ಗಳಲ್ಲಿ ಅದೇ ಸ್ಕೋರ್ ಗೆ ಭಾರತದ ಇನ್ನಿಂಗ್ಸ್ ಅನ್ನು ಕಟ್ಟಿಹಾಕಿತು. ಗುರಿ ಬೆನ್ನಟ್ಟಿದ ಭಾರತ ತಂಡ ಒಂದು ಬಾರಿಗೆ 4 ವಿಕೆಟ್‌ಗೆ 191 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದರೂ ನಂತರ ತಂಡ 34 ರನ್‌ಗಳ ಒಳಗೆ ಕೊನೆಯ 6 ವಿಕೆಟ್‌ಗಳನ್ನು ಕಳೆದುಕೊಂಡಿತು.
'ಅಂಪೈರಿಂಗ್‌ನಿಂದ ಆಶ್ಚರ್ಯ...'
ಪಂದ್ಯದ ನಂತರ ಹರ್ಮನ್ ಪ್ರೀತ್ ಮಾತನಾಡಿ, “ಈ ಸರಣಿಯಿಂದ ನಾವು ಸಾಕಷ್ಟು ಕಲಿಯಬೇಕಾಗಿದೆ. ಕ್ರಿಕೆಟ್ ಹೊರತಾಗಿ, ಅಂಪೈರಿಂಗ್‌ನಿಂದ ನನಗೆ ಆಶ್ಚರ್ಯವಾಗಿದೆ. ಮುಂದಿನ ಬಾಂಗ್ಲಾದೇಶ ಪ್ರವಾಸದಲ್ಲಿ ನಾವು ಅಂತಹ ವಿಷಯಗಳಿಗೆ (ಕಳಪೆ ಅಂಪೈರಿಂಗ್) ಸಿದ್ಧರಾಗಿ ಬರಬೇಕು ಎಂದು ನಾನು ಭಾವಿಸುತ್ತೇನೆ. ಈ ಕ್ಯಾಚ್‌ನ ನಿರ್ಧಾರದಿಂದ ಜೆಮಿಮಾ ಮತ್ತು ಮೇಘನಾ ಇಬ್ಬರೂ ಅತೃಪ್ತರಾಗಿದ್ದರು” ಎಂದು ಹೇಳಿದ್ದಾರೆ.
Harmanpreet Kaur Hits The Stumps With Her Bat In Anger After On-Field Umpire Rules Her LBW In 3rd ODI pic.twitter.com/09SVb8mF8C
— Nibraz Ramzan (@nibraz88cricket) July 22, 2023
ಭಾರತದ ನಾಯಕಿ ಆನ್-ಫೀಲ್ಡ್ ಅಂಪೈರ್‌ಗಳಾದ ಮುಹಮ್ಮದ್ ಕಮ್ರುಜ್ಜಮನ್ ಮತ್ತು ತನ್ವೀರ್ ಅಹ್ಮದ್ ಅವರನ್ನು ಟೀಕಿಸಿದ್ದಾರೆ. ಈ ಇಬ್ಬರೂ ಅಂಪೈರ್‌ಗಳು ಬಾಂಗ್ಲಾ ಮೂಲದವರು ಎಂಬುದನ್ನು ಇಲ್ಲಿ ಗಮನಿಸಲೇಬೇಕು.
ಹರ್ಮನ್‌ಪ್ರೀತ್ ಮಾತು ಮುಂದುವರೆಸಿ, “ಬಾಂಗ್ಲಾದೇಶ ನಿಜವಾಗಿಯೂ ಉತ್ತಮವಾಗಿ ಬ್ಯಾಟಿಂಗ್ ಮಾಡಿತ್ತು. ಪರಿಸ್ಥಿತಿಗಳಿಗೆ ಅನುಗುಣವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಓಡುತ್ತಾ ರನ್ ಕಲೆ ಹಾಕಿದ್ದಾರೆ. ನಾವು ಬ್ಯಾಟಿಂಗ್ ಮಾಡುವಾಗ ನಮ್ಮ ಆಟವನ್ನು ಚೆನ್ನಾಗಿ ನಿಯಂತ್ರಿಸಿದ್ದೇವೆ, ಆದರೆ ನಾನು ಮೊದಲೇ ಹೇಳಿದಂತೆ, ಅತ್ಯಂತ ಕಳಪೆ ಅಂಪೈರಿಂಗ್ ಪಂದ್ಯದ ದಿಕ್ಕನ್ನು ಬದಲಾಯಿಸಿತು. ಅಂಪೈರ್‌ಗಳು ನೀಡಿದ ಕೆಲವು ನಿರ್ಧಾರಗಳಿಂದ ನಾವು ನಿಜವಾಗಿಯೂ ನಿರಾಶೆಗೊಂಡಿದ್ದೇವೆ” ಎಂದು ಕಿಡಿಕಾರಿದ್ದಾರೆ.
ಇನ್ನು ಈ ಪಂದ್ಯ ಟೈ ಆದ ಕಾರಣ ಭಾರತ ತಂಡ ಏಕದಿನ ಸರಣಿಯನ್ನು ಆತಿಥೇಯ ದೇಶದೊಂದಿಗೆ ಹಂಚಿಕೊಳ್ಳಬೇಕಾಯಿತು. ಆದರೆ ಅಂಪೈರ್ ವಿರುದ್ಧದ ಸಿಟ್ಟಿನಿಂದ ಹರ್ಮನ್‌ಪ್ರೀತ್ ತಾಳ್ಮೆ ಕಳೆದುಕೊಂಡು, ಬ್ಯಾಟ್’ನಿಂದ ವಿಕೆಟ್’ಗೆ ಹೊಡೆದಿದ್ದಾರೆ.
ಇದನ್ನೂ ಓದಿ: Team Indiaದ ಈ ಆಟಗಾರನ 13 ವರ್ಷಗಳ ಸುದೀರ್ಘ ವೃತ್ತಿಜೀವನ ಅಂತ್ಯ!
ಇನ್ನು ನಾಯಕಿಯ ಕೋಪಕ್ಕೆ ಕಾರಣವಾದ ನಿಜ ಅಂಶ ಇಲ್ಲಿದೆ ನೋಡಿ. ಬಾಂಗ್ಲಾ ಬೌಲರ್ ನಹಿದಾ ಅಖ್ತರ್ ಎಸೆತದಲ್ಲಿ ಹರ್ಮನ್ ಪ್ರೀತ್ ವಿರುದ್ಧ ಔಟ್’ಗೆ ಮನವಿ ಸಲ್ಲಿಸಲಾಯಿತು. ಬಾಂಗ್ಲಾ ಮನವಿಯನ್ನು ಔಟ್ ಎಂದು ಫಿಲ್ಡ್ ಅಂಪೈರ್ ಪ್ರಕಟಿಸಿದರು. ಆದರೆ ಚೆಂಡು ಹರ್ಮನ್ ಅವರ ಪ್ಯಾಡ್‌ಗೆ ತಾಗಿ ಸ್ಲಿಪ್ ಫೀಲ್ಡರ್’ಗೆ ಹೋಗಿತ್ತು. ಇದರಿಂದ ಕೋಪಗೊಂಡ ಹರ್ಮನ್‌ಪ್ರೀತ್, ತಮ್ಮ ಬ್ಯಾಟ್ ಅನ್ನು ವಿಕೆಟ್‌ಗೆ ಹೊಡೆದಿದ್ದಾರೆ. ಪರಿಣಾಮ ಸ್ಟಂಪ್ ಚದುರಿ ಹೋಗಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.