Rain News: ತುಂಬಿ ಹರಿಯುವ ನದಿಗೆ ಹಾರಿ ಯುವಕನ ಹುಚ್ಚಾಟ

Rain in Shivamogga: ಯುವಕನೊಬ್ಬ ತುಂಗಾ ನದಿಯ ಹಳೆಯ ಸೇತುವೆಯ ಮೇಲಿನಿಂದ ಹೊಳೆಗೆ ಹಾರಿದ ಘಟನೆ ಜರುಗಿದೆ. ಯುವಕನ ಹುಚ್ಚಾಟ ಸುತ್ತಲಿದ್ದ ಜನರ ಆತಂಕಕ್ಕೆ ಕಾರಣವಾಗಿತ್ತು.   

Written by - Chetana Devarmani | Last Updated : Jul 26, 2023, 04:44 PM IST
  • ಶಿವಮೊಗ್ಗದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆ
  • ಧಾರಾಕಾರ ಮಳೆಯಿಂದ ತುಂಬಿ ಹರಿಯುತ್ತಿರುವ ತುಂಗಾ ನದಿ
  • ಶಿವಮೊಗ್ಗದಲ್ಲಿ ನದಿಗೆ ಹಾರಿ ಯುವಕನ ಹುಚ್ಚಾಟ
Rain News: ತುಂಬಿ ಹರಿಯುವ ನದಿಗೆ ಹಾರಿ ಯುವಕನ ಹುಚ್ಚಾಟ   title=

ಶಿವಮೊಗ್ಗ: ರಾಜ್ಯದಲ್ಲಿ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ಧಾರಾಕಾರ ಮಳೆಯಿಂದಾಗಿ ಹಲವು ನದಿಗಳು ತುಂಬಿ ಹರಿಯುತ್ತಿವೆ. ಶಿವಮೊಗ್ಗ ಜಿಲ್ಲೆಯಲ್ಲಿಯೂ ತುಂಗಾ ನದಿ ತುಂಬಿ ಹರಿಯುತ್ತಿದ್ದು, ಇದನ್ನು ನೋಡಲು ಜನರು ನದಿಯ ಬಳಿಗೆ ಬರುತ್ತಿದ್ದಾರೆ. ಈ ಮಧ್ಯೆ ಯುವಕನೊಬ್ಬ ತುಂಗಾ ನದಿಯ ಹಳೆಯ ಸೇತುವೆಯ ಮೇಲಿನಿಂದ ಹೊಳೆಗೆ ಹಾರಿದ ಘಟನೆ ಜರುಗಿದೆ. ಯುವಕನ ಹುಚ್ಚಾಟ ಸುತ್ತಲಿದ್ದ ಜನರ ಆತಂಕಕ್ಕೆ ಕಾರಣವಾಗಿತ್ತು. 

ಇದನ್ನೂ ಓದಿ: ಕರ್ನಾಟಕದಲ್ಲಿ ಒಳ ಹರಿವು ಮಟ್ಟ ಹೆಚ್ಚಳ; ಡ್ಯಾಂ ನೀರಿನ ಪ್ರಮಾಣದ ಇಲ್ಲಿದೆ ಇಂದಿನ ವಿವರ

ತುಂಬಿದ ನದಿಯಲ್ಲಿ ಈಜುವುದು ಪ್ರಾಣಕ್ಕೆ ಅಪಾಯಕಾರಿ. ವರುಣಾರ್ಭಟದ ಮಧ್ಯೆ ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಯುವಕ ಈ ದುಸ್ಸಾಹಸ ಜನರ ಆಕ್ರೋಶಕ್ಕೆ ಕಾರಣವಾಯಿತು. ನದಿಗೆ ಯುವಕ ಜಿಗಿದಿದ್ದನ್ನು ಕಂಡು, ಕೆಲವರು ಈತ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ ಎಂದು ಕೊಂಡರು. ಜನರು ಕಂಗಾಲಾಗಿ ನೋಡುವಾಗಲೇ ನದಿಗೆ ಹಾರಿದ್ದ ಯುವಕ ನದಿಯ ಮತ್ತೊಂದು ದಡದಿಂದ ಮೇಲಕ್ಕೆ ಬಂದಿದ್ದಾನೆ. 

ಯುವಕ ಹುಚ್ಚಾಟದಿಂದ ಅಸಮಾಧಾನಗೊಂಡ ಜನರು ಹತ್ತಿರದಲ್ಲಿದ್ದ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ಈ ಯುವಕ ಈಜು ಬಲ್ಲವನಾಗಿದ್ದು, ವಿಡಿಯೋ ಮಾಡುವ ಸಲುವಾಗಿ ನದಿಗೆ ಹಾರಿದ್ದಾನೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಹೆಂಡತಿ ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಾಟಕವಾಡಿದ್ದ  ಗಂಡನ ಬಂಧನ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News