ನವದೆಹಲಿ: ವರುಣ್ ಧವನ್ ತನ್ನ ಹುಟ್ಟುಹಬ್ಬದಂದು ಗೆಳತಿ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುವ ಯೋಜನೆಯನ್ನು ಹೊಂದಿದ್ದರು.ಆದರೆ ಈಗ ಬಂದಿರುವ ಮಾಹಿತಿ ಪ್ರಕಾರ ಈಗ ಅವರು ನಿಶ್ಚಿತಾರ್ಥದ ಪ್ಲಾನ್ ನ್ನು ಕೈ ಬಿಟ್ಟಿದ್ದಾರೆ ಎಂದು ಹತ್ತಿರದ ಮೂಲಗಳು ತಿಳಿಸಿವೆ.
"ಕೂಲಿ ನಂಬರ್ 1 ನ್ನು ಘೋಷಿಸುವ ಯೋಜನೆ ಬಗ್ಗೆ ಕೇಳಿದ್ದೆವು.ಇದೇ ವೇಳೆ ವರುಣ್ ಧವನ್ ಗೆಳತಿ ನಟಾಷಾಳ ನಿಶ್ಚಿತಾರ್ಥದ ಕಾರ್ಯಕ್ರಮವು ಇತ್ತು ಆದರೆ ಕೊನೆಯ ಕ್ಷಣದಲ್ಲಿ ಈಗ ಈ ಯೋಜನೆಯನ್ನು ಬದಲಿಸಿರುವ ವರುಣ್ ಹುಟ್ಟುಹಬ್ಬದ ಪ್ರಯುಕ್ತ ತನ್ನ ಗೆಳತಿಯೊಂದಿಗೆ ವಿದೇಶಕ್ಕೆ ಹಾರಲಿದ್ದಾರೆ" ಎನ್ನುವ ಮಾಹಿತಿಯನ್ನು ಮೂಲಗಳು ತಿಳಿಸಿವೆ.
ಈ ಹಿನ್ನಲೆಯಲ್ಲಿ ವರುಣ್ ಧವನ್ ಮತ್ತು ನಟಾಷಾ ಅವರ ನಿಶ್ಚಿತಾರ್ಥ ಮತ್ತು ಮದುವೆಗೆ ತಾತ್ಕಾಲಿಕ ತಡೆ ನೀಡಲಾಗಿದೆ. ವರುಣ್ ಸದ್ಯ ಬ್ಯುಸಿಯಾಗಿದ್ದಾರೆ.ಆದ್ದರಿಂದ ಅವರು ತಮ್ಮ ವೇಳಾಪಟ್ಟಿಗೆ ಅನುಗುಣವಾಗಿ ನಿಶ್ಚಿತಾರ್ಥ ಮತ್ತು ಮದುವೆ ಸಮಯವನ್ನು ಮೀಸಲಿಡಬೇಕು.ಆದ್ದರಿಂದ ಅದು ಎದ್ದಿನಂತೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.