ನಟಿ ರೇಖಾ ಜೀವನದ ಕಣ್ಣೀರ ಕಥೆ.. ಚಪ್ಪಲಿಯಿಂದ ಹೊಡೆಯಲು ಬಂದ ಅತ್ತೆ, ಪತಿ ಆತ್ಮಹತ್ಯೆ!

Rekha Love Affairs: ವರದಿಗಳ ಪ್ರಕಾರ ರೇಖಾ ಅವರು ನಟ ವಿನೋದ್ ಮೆಹ್ರಾ ಅವರನ್ನು ವಿವಾಹವಾಗಿದ್ದರು. ವಿನೋದ್ ಮೆಹ್ರಾ ಈಗಾಗಲೇ ಎರಡು ಮದುವೆ ಆಗಿದ್ದರು. ರೇಖಾ ಅವರ ಮೂರನೇ ಹೆಂಡತಿಯಾದರು.  

Written by - Chetana Devarmani | Last Updated : Jul 30, 2023, 01:17 PM IST
  • ರೇಖಾ ಅವರು ನಟ ವಿನೋದ್ ಮೆಹ್ರಾ ಅವರನ್ನು ವಿವಾಹವಾಗಿದ್ದರು
  • ಚಪ್ಪಲಿಯಿಂದ ಹೊಡೆಯಲು ಬಂದ ಅತ್ತೆ, ಪತಿ ಆತ್ಮಹತ್ಯೆ!
  • ಯಾವ ಸಿನಿಮಾ ಕಥೆಗೂ ಕಮ್ಮಿಯಿಲ್ಲ ನಟಿ ರೇಖಾ ಜೀವನ
ನಟಿ ರೇಖಾ ಜೀವನದ ಕಣ್ಣೀರ ಕಥೆ.. ಚಪ್ಪಲಿಯಿಂದ ಹೊಡೆಯಲು ಬಂದ ಅತ್ತೆ, ಪತಿ ಆತ್ಮಹತ್ಯೆ!   title=
Rekha

Rekha Love Affairs: ರೇಖಾ ಜೀವನ ಯಾವ ಸಿನಿಮಾ ಕಥೆಗೂ ಕಮ್ಮಿಯಿಲ್ಲ. ಬಾಲಿವುಡ್‌ನ ಎವರ್‌ಗ್ರೀನ್ ನಟಿ ರೇಖಾ ಅವರು ತಮ್ಮ ಚಲನಚಿತ್ರಗಳ ಬಗ್ಗೆ ಮಾತ್ರವಲ್ಲದೆ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಸಾಕಷ್ಟು ಚರ್ಚೆಯಲ್ಲಿದ್ದರು. ಅಮಿತಾಬ್ ಬಚ್ಚನ್ ಅವರೊಂದಿಗಿನ ನಿಕಟ ಸಂಬಂಧದಿಂದಾಗಿ ರೇಖಾ ಅವರ ಹೆಸರು ಒಂದು ಕಾಲದಲ್ಲಿ ಪ್ರಚಾರದಲ್ಲಿತ್ತು. ಅಮಿತಾಬ್‌ ಆಗ  ಜಯಾ ಬಚ್ಚನ್ ಅವರನ್ನು ಮದುವೆಯಾಗಿದ್ದರು. ರೇಖಾ ಮತ್ತು ಅಮಿತಾಬ್ ಅವರ ಸಂಬಂಧವು ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ. ಅದೇ ಹೊತ್ತಿಗೆ ನಂತರದ ದಿನಗಳಲ್ಲಿ ರೇಖಾ ಅವರ ವೈಯಕ್ತಿಕ ಬದುಕಿನಲ್ಲೂ ಅಲ್ಲೋಲ ಕಲ್ಲೋಲ ಉಂಟಾಯಿತು.

ಇದನ್ನೂ ಓದಿ: ಫ್ರೆಂಡ್ಸ್ ಜೊತೆ ದಾಸನ ಜಾಲಿ ಟ್ರಿಪ್..ಬ್ರಿಟನ್‌ನಲ್ಲಿ ದರ್ಶನ್‌ ಮೋಜು ಮಸ್ತಿ..ಪೋಟೋಸ್‌ ವೈರಲ್‌

ಹೌದು, ವರದಿಗಳ ಪ್ರಕಾರ ರೇಖಾ ನಟ ವಿನೋದ್ ಮೆಹ್ರಾ ಅವರನ್ನು ವಿವಾಹವಾಗಿದ್ದರು. ವಿನೋದ್ ಮೆಹ್ರಾ ಈಗಾಗಲೇ ಎರಡು ಮದುವೆ ಆಗಿದ್ದರು. ಆದರೆ ಎರಡೂ ವಿವಾಹಗಳೂ ವಿಫಲವಾಗಿತ್ತು. ರೇಖಾ ಅವರ ಮೂರನೇ ಹೆಂಡತಿಯಾದರು. ಆದರೆ, ಇಲ್ಲೂ ರೇಖಾಗೆ ಸವಾಲುಗಳು ಕಡಿಮೆಯಾಗಿರಲಿಲ್ಲ. ಮದುವೆಯ ನಂತರ ಮೊದಲ ಬಾರಿಗೆ ರೇಖಾ ತನ್ನ ಅತ್ತೆಯ ಮನೆಗೆ ಬಂದಾಗ, ಆಕೆಯ ಅತ್ತೆ ಅವಳನ್ನು ಹೊಡೆಯಲು ಚಪ್ಪಲಿ ಎತ್ತಿದರು ಎಂದು ಹೇಳಲಾಗುತ್ತದೆ. ಈ ಘಟನೆಯಿಂದ ರೇಖಾಗೆ ನೋವುಂಟಾಗಿದ್ದಲ್ಲದೆ ವಿನೋದ್ ಮೆಹ್ರಾ ಅವರೊಂದಿಗಿನ ಸಂಬಂಧದ ಮೇಲೂ ಪರಿಣಾಮ ಬೀರಿತು. ಮದುವೆಯಾದ ಕೆಲವೇ ದಿನಗಳಲ್ಲಿ ರೇಖಾ ಮತ್ತು ವಿನೋದ್ ಮೆಹ್ರಾ ಬೇರ್ಪಟ್ಟರು ಎಂದು ಹೇಳಲಾಗುತ್ತದೆ.

ರೇಖಾ ಅವರ ವೈಯಕ್ತಿಕ ಜೀವನದಲ್ಲಿ ಆಗಿರುವ ಏರುಪೇರಿಗೆ ಸಂಬಂಧಿಸಿದ ಇನ್ನೊಂದು ಘಟನೆ ಇದೆ. ನಟಿ 1990 ರಲ್ಲಿ ಉದ್ಯಮಿ ಮುಖೇಶ್ ಅಗರ್ವಾಲ್ ಅವರನ್ನು ವಿವಾಹವಾದರು, ಆದರೆ ಮದುವೆಯಾದ 7 ತಿಂಗಳ ನಂತರ ಮುಕೇಶ್ ಆತ್ಮಹತ್ಯೆ ಮಾಡಿಕೊಂಡರು. ಸುದ್ದಿ ಪ್ರಕಾರ, ಮುಖೇಶ್ ಖಿನ್ನತೆಗೆ ಒಳಗಾಗಿದ್ದರು, ಇದರಿಂದಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತದೆ. ಆದರೆ, ಮುಖೇಶ್ ಹೋದ ನಂತರ ರೇಖಾ ಮರು ಮದುವೆಯಾಗಿರಲಿಲ್ಲ.

ಇದನ್ನೂ ಓದಿ:  RRR 2 ಸಿನಿಮಾ ಶೂಟಿಂಗ್‌ ಬಗ್ಗೆ ಹೊರಬಿತ್ತು ಬಿಗ್‌ ಅಪ್‌ಡೇಟ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News