ಬಳ್ಳಾರಿ : ಶತಮಾನಗಳಿಂದ ಈ ನಾಗರಿಕ ಸಮಾಜದಲ್ಲಿ ಮಂಗಳಮುಖಿಯರು ಎಲ್ಲ ರೀತಿಯ ಅವಮಾನ, ಲೈಂಗಿಕ ದೌರ್ಜನ್ಯ, ಕಿರುಕುಳ, ನಿರ್ಲಕ್ಷ್ಯ ಸಹಿಸಿಕೊಂಡು ಬಂದಿದ್ದಾರೆ. ಇನ್ನು ಇದನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ. ಹುಟ್ಟಿದ ಮನೆಯಲ್ಲಿ ಬದುಕಲು ಆಗಲ್ಲ. ಬಾಡಿಗೆ ಮನೆ ಕೇಳಿದರೆ ಯಾರೂ ಕೊಡಲ್ಲ. ಸಮಾಜದಲ್ಲಿ ಗಂಡು-ಹೆಣ್ಣು ಇರುವಂತೆ ಮಂಗಳಮುಖಿಯರದ್ದೂ ಒಂದು ವರ್ಗ.
ಸಮಾಜದ ಮುಖ್ಯವಾಹಿನಿಯಲ್ಲಿ ಬದುಕಲು ಬಿಡಿ ಎಂಬುದು ಅವರ ಆಗ್ರಹ. ಬಸ್ ಸ್ಟ್ಯಾಂಡ್ನಲ್ಲೋ, ಫುಟ್ಪಾತ್ನಲ್ಲೋ ಮಲಗಿದರೆ ಪೊಲೀಸರು, ರೌಡಿಗಳು, ಬೀದಿ ಕಾಮಣ್ಣರ ನಡುವೆ ನಲುಗಿ ಹೋಗಿದ್ದಾರೆ. ಇಂತಹ ಘಟನೆಗಳ ನಡುವೆ ಮಂಗಳಮುಖಿಯರೊಬ್ಬರು ಅಪರೂಪದ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.
ಗಣಿನಾಡು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಚೋರನೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ರಾಜ್ಯದಲ್ಲಿಯೇ ಮೊದಲ ಬಾರಿ ಮಂಗಳಮುಖಿಯೊಬ್ಬರು ಆಯ್ಕೆಯಾಗಿದ್ದಾರೆ. ಚೋರನೂರು ಗ್ರಾಮ ಪಂಚಾಯ್ತಿಗೆ ಅಧ್ಯಕ್ಷರಾಗಿ ಅಂಜೀನಮ್ಮ ತಿಪ್ಪೇಸ್ವಾಮಿ ಇವರು ಚೋರನೂರು ಗ್ರಾಮದ ಅನುಸೂಚಿತ ಜಾತಿ ಮೀಸಲಾತಿಯಡಿಯಲ್ಲಿ 2ನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾದ್ದಾರೆ. ಉಪಾಧ್ಯಕ್ಷರಾಗಿ ಶ್ರೀಮತಿ ಗೀತಾ ಗಂಡ ಬಿ ಹನುಮಂತಪ್ಪ ಅನುಸೂಚಿತ ಪಂಗಡ ಮಹಿಳ ಮಿಸಲಾತಿಯಡಿಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ಗ್ರಾಮದ ಜನತೆ ನನ್ನನ್ನು ಗೆಲ್ಲಿಸಿದ್ದಾರು. ಅದೇ ರೀತಿಯಾಗಿ ಈಗ ಗ್ರಾಮ ಪಂಚಾಯಿತಿಯ ಎಲ್ಲ ಸದಸ್ಯರು ವಿರೋಧವಾಗಿ ನನ್ನನ್ನು ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿದ್ದಾರೆ. ಗ್ರಾಮದ ಜನತೆಗೆ ಉತ್ತಮ ಸೇವೆ ಸಲ್ಲಿಸಲು ಹಾಗೂ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲು ಶ್ರಮಿಸುವೆ ಎಂದು ನೂತನ ಗ್ರಾಮ ಪಂಚಾಯತಿ ಅಧ್ಯಕ್ಷೆ ಅಂಜಿನಮ್ಮ ತಿಳಿಸಿದ್ದಾರೆ.
ಇದನ್ನೂ ಓದಿ-"ಸರಕಾರದ ದುಡ್ಡು ಸಾರ್ವಜನಿಕರ ದುಡ್ಡೇ ಆಗಿರುವುದರಿಂದ ಅದನ್ನು ಇತಿಮಿತಿಯಲ್ಲಿ ಬಳಸಬೇಕು"
ಚೋರುನೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಮಂಗಳಮುಖಿ ಸಿ. ಅಂಜಿನಮ್ಮ ಅವರು ಸಾಕಷ್ಟು ಕನಸುಗಳು ಹಂಚಿಕೊಂಡಿದ್ದಾರೆ. ನನ್ನ ಮೇಲೆ ಭರವಸೆ ಇಟ್ಟು ನನ್ನನ್ನು ಗೆಲ್ಲಿಸಿದ್ದಾರೆ. ನಾಲ್ಕು ಜನಕ್ಕೆ ಒಳ್ಳೆಯದಾಗುವಂತಹ ಕೆಲಸಗಳನ್ನು ಮಾಡುವ ಗುರಿ ಇದೆ.
ಇತ್ತೀಚೆಗೆ ಬಾಗಲಕೋಟೆಯಲ್ಲಿ ನಡೆದ ಮಂಗಳಮುಖಿಯವರ ಸಂಘದ ಸಭೆಯಲ್ಲಿ ನಾನು ಭಾಗವಹಿಸಿದ್ದೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಂಗಳಮುಖಿಯರು ಭಾಗವಹಿಸಬಹುದು ಎಂದು ತಿಳಿಸಿದ್ದಾರೆ. ನಾನು ನನ್ನ ಕೈಲಾದ ಸಹಾಯವನ್ನು ನನ್ನ ಸಮುದಾಯಕ್ಕೂ ಮಾಡುವೆ ಎಂದಿದ್ದಾರೆ.
ಸಂಡೂರು ತಾಲೂಕಿನ ಚೋರುನೂರಿನವರಾದ ಅಂಜಿನಮ್ಮ ಅವರ ಮೂಲ ಹೆಸರು ಸಿ. ಅಂಜಿನಪ್ಪ, ಮಂಗಳಮುಖಿಯಾದ ಮೇಲೆ ಇವರ ಹೆಸರು ಸಿ. ಅಂಜಿನಮ್ಮ ಎಂದಾಗಿದೆ. ಸಿ. ತಿಪ್ಪೇಸ್ವಾಮಿ ಹಾಗೂ ತಿಪ್ಪಮ್ಮನವರ ಮಗಳಾದ ಇವರಿಗೆ ಮೂವರು ಸಹೋದರರು ಹಾಗೂ ಇಬ್ಬರು ಸಹೋದರಿಯರು ಇದ್ದಾರೆ. ಅಂಜಿನಮ್ಮ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಅವಿರೋಧಕ್ಕೆ ಆಯ್ಕೆಯಾಗಿದಕ್ಕೆ ಚೋರಾನೂರು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.ಚೋರಾನೂರು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ-ಓಂ ಸಿನಿಮಾ ತರ ರೌಡಿಸಂ ಬಿಡಿಸಿ ಒಳ್ಳೆ ಜೀವನ ನಡೆಸಲು ಮುಂದಾಗಿದ್ದ ಸಿದ್ದಾಪುರ ಮಹೇಶನ ಹೆಂಡತಿ..!
ಸಮಾಜದಲ್ಲಿ ನಿರಂತರ ಶೋಷಣೆಗೆ ಒಳಗಾಗಿ ಸಾಕಷ್ಟು ನೋವುಗಳು ಮಂಗಳಮುಖಿಯರು ಅನುಭವಿಸುತ್ತಿದ್ದಾರೆ. ರೇಷನ್ ಕಾರ್ಡ್ ಇಲ್ಲ, ಮನೆ ಇಲ್ಲ. ಸರಕಾರ ಕಿಂಚಿತ್ತು ಸೌಲಭ್ಯ ಕೊಡುವುದಿರಲಿ ನಮ್ಮನ್ನು ಮನುಷ್ಯರು ಎಂದೇ ಪರಿಗಣಿಸಿಲ್ಲ.
ಹಾಗಾದ್ರೆ ನಾವು ಯಾರು? ನಾವು ಎಲ್ಲಿ ಬದುಕಬೇಕು? ನಮಗೊಂದು ಐಡೆಂಟಿಟಿ ಯಾಕಿಲ್ಲ?' ನಾವೂ ಇದೇ ಸಮಾಜದಲ್ಲಿ ಇದ್ದೀವಿ ಎಂದು ಪ್ರಶ್ನಿಸಿಕೊಳ್ಳುವ ಇತರೆ ಮಂಗಳಮುಖಿಯರಿಗೆ ಇಂದು ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೇರಿ ಇತರ ಮುಂಗಳಮುಖಿಯರಿಗೆ ಮಾದರಿಯಾಗಿದ್ದಾರೆ ಅಂಜಿನಮ್ಮ. ಅವರು ಮುಂದಿನ ಕಾರ್ಯ ಚಟುವಟಿಕೆಗಳು ಉತ್ತಮವಾಗಿರಲಿ ಎಂದು ಆಶಿಸೋಣ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.