Indira Canteen: ಗೃಹ ಸಚಿವರ ಕ್ಷೇತ್ರದಲ್ಲೇ ಕಾಂಗ್ರೆಸ್ ಕನಸಿನ ಯೋಜನೆಗೆ ಬೀಗ

Indira Canteen Lock: ಇಂದಿರಾ ಕ್ಯಾಂಟಿನ್ ಅನ್ನು ಬೆಂಗಳೂರಿನ ರಿವರ್ಸ್ ಏಜೆಸ್ಸಿ ನಡೆಸುತ್ತಿದೆ. ಸಂಬಳ ಕೊಡದ ಬಗ್ಗೆ ಮಾಧ್ಯಮಗಳ ಮುಂದೆ ಹೋಗುತ್ತೀವಿ ಅಂತಾ ಹೇಳಿದ್ರೆ.. ಅವರ ಹತ್ರನೇ ಸಂಬಳ ತಗೊಳಿ ಅಂತಾ ಬೆದರಿಕೆ ಹಾಕ್ತಾರಂತೆ ಗುತ್ತಿಗೆದಾರ.. 

Written by - Yashaswini V | Last Updated : Aug 11, 2023, 01:46 PM IST
  • ಗೃಹ ಸಚಿವರ ಕ್ಷೇತ್ರದಲ್ಲೇ ಕಾಂಗ್ರೆಸ್ ಕನಸಿನ ಯೋಜನೆಗೆ ಬೀಗ
  • ಏಜೆನ್ಸಿ ಪಡೆದವರ ಎಟವಟ್ಟಿಗೆ ಬೀದಿಗೆ ಬಿದ್ದ ಹತ್ತಾರು ಕುಟುಂಬ
  • ಸಂಬಳ ಇಲ್ಲದೆ ಇಂದಿರಾ ಕ್ಯಾಂಟೀನ್ ಗೆ ಬೀಗ ಜಡಿದ ಸಿಬ್ಬಂದಿ
Indira Canteen: ಗೃಹ ಸಚಿವರ ಕ್ಷೇತ್ರದಲ್ಲೇ ಕಾಂಗ್ರೆಸ್ ಕನಸಿನ ಯೋಜನೆಗೆ ಬೀಗ title=

Indira Canteen Lock:  ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಕಾಂಗ್ರೆಸ್ ಕನಸಿನ ಯೋಜನೆ ಇಂದಿರಾ ಕ್ಯಾಂಟೀನ್ ನಂಬಿಕೊಂಡಿದ್ದ ಹತ್ತಾರು ಕುಟುಂಬಗಳು ಸದ್ಯ ಬೀದಿಗೆ ಬಿದ್ದಿವೆ.  ಗೃಹ ಸಚಿವರ ಕ್ಷೇತ್ರದಲ್ಲೇ ಕಾಂಗ್ರೆಸ್ ಕನಸಿನ ಯೋಜನೆಗೆ ಬೀಗ ಹಾಕಲಾಗಿದ್ದು ನೊಂದವರು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ್ದಾರೆ..  ಏನಿದು ಕಾರ್ಮಿಕರ ಕಹಾನಿ ಅಂತಿರಾ... ಈ ಸ್ಟೋರಿ ಒಮ್ಮೆ ಓದಿ... 

ಬಹುಷಃ ಇಲ್ಲಿ ನೇತು ಹಾಕಿರೋ ಬೋರ್ಡ್ ನೋಡಿದ್ರೆ ಗೊತ್ತಾಗುತ್ತೆ. ಈ ಬೋರ್ಡ್ ಅನ್ನು ಯಾಕೆ ಹಾಕಿದ್ದಾರೆ ಅನ್ನೋದು.. ಹೌದು.. ಏಳು ತಿಂಗಳಿಂದ ಸಂಬಳ ಇಲ್ಲ.. ಕ್ಯಾಂಟೀನ್ ಮುಚ್ಚಲಾಗಿದೆ.. ಈಥರ ಬೋರ್ಡ್ ಹಾಕಿರೋದು ಗೃಹ ಸಚಿವ ಡಾಜಿ.ಪರಮೇಶ್ವರ್ ತವರು ಕ್ಷೇತ್ರ ಕೊರಟಗೆರೆಯಲ್ಲಿ. ನಿತ್ಯ ನೂರಾರು ಮಂದಿ ಹಸಿದವರ ಹೊಟ್ಟೆ ತುಂಬಿಸುತಿದ್ದ ಇಂದಿರಾ ಕ್ಯಾಂಟೀನ್ ಗೆ ಬೀಗ ಜಡಿಯಲಾಗಿದೆ. ಕಾರಣ ಇಲ್ಲಿ ಬೆವರು ಹರಿಸಿ ದುಡಿಯುವ ಇಂದಿರಾ ಕ್ಯಾಂಟಿನ್ ಸಿಬ್ಬಂದಿಗಳಿಗೆ ಕೆಲವು ತಿಂಗಳಿಂದ ಸಂಬಳವೇ ಆಗಿಲ್ಲ. ಇದರಿಂದ ಸಂಬಳ ಇಲ್ಲದೆ ಕಾರ್ಮಿಕರು ಮೌನ ಪ್ರತಿಭಟನೆಗೆ ಇಳಿದಿದ್ದಾರೆ.

ಇದನ್ನೂ ಓದಿ- ವಾಟ್ಸಾಪ್ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಸಾಧ್ಯ..ಇಲ್ಲಿದೆ ಅರ್ಜಿ ಸಲ್ಲಿಸುವ ಸುಲಭ ವಿಧಾನ..!

ಇಂದಿರಾ ಕ್ಯಾಂಟಿನ್ ಅನ್ನು ಬೆಂಗಳೂರಿನ ರಿವರ್ಸ್ ಏಜೆಸ್ಸಿ ನಡೆಸುತ್ತಿದೆ. ಸಂಬಳ ಕೊಡದ ಬಗ್ಗೆ ಮಾಧ್ಯಮಗಳ ಮುಂದೆ ಹೋಗುತ್ತೀವಿ ಅಂತಾ ಹೇಳಿದ್ರೆ.. ಅವರ ಹತ್ರನೇ ಸಂಬಳ ತಗೊಳಿ ಅಂತಾ ಬೆದರಿಕೆ ಹಾಕ್ತಾರಂತೆ ಗುತ್ತಿಗೆದಾರ.. ಏಜೆನ್ಸಿ ಮಾಲೀಕ ಉಡಾಫೆ ಉತ್ತರದ ಜೊತೆಗೆ  ಬೆದರಿಕೆಯ ಆರೋಪದಿಂದ ಕಂಗೆಟ್ಟಿರುವ ಸಿಬ್ಭಂದಿಗಳು ಕೊರಟಗೆರೆ ಪೊಲೀಸ್ ಠಾಣೆಗೆ ದೂರು ನೀಡಿ ಸಂಬಳ ಕೊಡಿಸುವಂತೆ ಮೊರೆ ಹೋಗಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಎಂಟು ಜಿಲ್ಲೆಗಳ ಇಂದಿರಾ ಕ್ಯಾಂಟೀನ್ ಗಳ ಗುತ್ತಿಗೆ ಪಡೆದಿರುವ  ಏಜೆನ್ಸಿ ಇದಾಗಿದೆ.  ಎಂಟು ಜಿಲ್ಲೆಗಳಿಂದ ಇಂದಿರಾ ಕ್ಯಾಂಟೀನ್ ಗಳ ಮೈಂಟೆನಸ್  ಕೋಟಿಗಟ್ಟಲೆ ಹಣ ಬಾಕಿ ಬರಬೇಕಿದೆ ಅನ್ನೋದು ಏಜೆನ್ಸಿ ಮಾಲೀಕ ಶಶಿಕುಮಾರ್ ಅಳಲು.. 

ಇದನ್ನೂ ಓದಿ- ಕೆಂಪೇಗೌಡ ಏರ್ಪೋರ್ಟಿನಲ್ಲಿ ತಲೆ ಎತ್ತಲಿದೆ ಇಂದಿರಾ ಕ್ಯಾಂಟೀನ್ 

ಗುತ್ತಿಗೆದಾರ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಅದ್ಕೆ ನಾನ್ ಸಂಬಳ ಕೊಟ್ಟಿಲ್ಲ. ಅಂತಾ ಸರ್ಕಾರದ ಮೇಲೆ ಬೊಟ್ಟು ಮಾಡಿದ್ದಾರೆ. ಸರ್ಕಾರ ಹಾಗೂ ಗುತ್ತಿಗೆದಾರರ ಜಟಾಪಟಿಯಿಂದ ಸಂಬಳ ಇಲ್ಲದೆ ಬೀದಿಗೆ ಬಿದ್ದಿರುವ ಕುಟುಂಬಕ್ಕೆ ನ್ಯಾಯ ಕೊಡಿಸೋರು ಯಾರು ಅಂತಾ ಕಣ್ಣಿರು ಹಾಕುತ್ತಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News