World news : ವಿಮಾನದಲ್ಲಿ ಪ್ರಯಾಣಿಸುವಾಗ 14 ವರ್ಷದ ಬಾಲಕಿಯ ಬಳಿ ಹಸ್ತಮೈಥುನ ಮಾಡಿಕೊಂಡಿದ್ದಕ್ಕಾಗಿ 33 ವರ್ಷದ ಭಾರತೀಯ-ಅಮೆರಿಕನ್ ವೈದ್ಯನನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್ಬಿಐ) ಬಂಧಿಸಿದೆ.
ಕಳೆದ ವರ್ಷ ಮೇ ತಿಂಗಳಲ್ಲಿ ಹೊನೊಲುಲುವಿನಿಂದ ಬೋಸ್ಟನ್ಗೆ ತೆರಳುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ ಎಂದು ಯುಎಸ್ ಅಟಾರ್ನಿ ಕಚೇರಿ ತಿಳಿಸಿದೆ. ಮಸಾಚುಸೆಟ್ಸ್ ನಿಂದ ಡಾ. ಸುದೀಪ್ತ ಮೊಹಾಂತಿ ಅವರನ್ನು ಕಳೆದ ಗುರುವಾರ (ಆ.10) ಎಫ್ ಬಿಐ ಬಂಧಿಸಿತ್ತು. ವರದಿಗಳ ಪ್ರಕಾರ, ಬಂಧನಕ್ಕೊಳಗಾದ ಮೊಹಾಂತಿ ಅವರು ಬೋಸ್ಟನ್ನಲ್ಲಿರುವ ಬೆತ್ ಇಸ್ರೇಲ್ ಡೀಕಾನೆಸ್ ಮೆಡಿಕಲ್ ಸೆಂಟರ್ನಲ್ಲಿ ಪ್ರಾಥಮಿಕ ಚಿಕಿತ್ಸಾ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಇದನ್ನೂ ಓದಿ: ಬಾಂಬ್ ಬೆದರಿಕೆಯ ನಂತರ ಐಫೆಲ್ ಟವರ್ ತೆರವು
ಅವರು ಕಳೆದ ವರ್ಷ ವಿಮಾನದಲ್ಲಿ ಪ್ರಯಾಣಿಸಿದ್ದರು. ಅದೇ ವಿಮಾನದಲ್ಲಿ 14 ವರ್ಷದ ಬಾಲಕಿ ತನ್ನ ಅಜ್ಜಿಯರೊಂದಿಗೆ ಪ್ರಯಾಣಿಸುತ್ತಿದ್ದಳು. ಡಾ.ಮೊಹಂತಿ ಪಕ್ಕದ ಸೀಟಿನಲ್ಲಿ ಹುಡುಗಿ ಕುಳಿತಿದ್ದಳು. ಹಾರಾಟದ ಅರ್ಧದಾರಿಯಲ್ಲೇ, ಸುದೀಪ್ತ ಕುತ್ತಿಗೆಯ ವರೆಗೆ ಬೇಡ್ ಶೀಟ್ ಹೊದ್ದುಕೊಂಡು ಹಸ್ತ ಮೈಥುನ ಕ್ರಿಯೆ ನಡೆಸುವಾಗ ಆ ಯುವತಿ ಅದನ್ನು ಗಮನಿಸಿದ್ದಾರೆ. ಅಲ್ಲದೆ, ಸ್ವಲ್ಪ ಸಮಯದ ನಂತರ, ಹೊದಿಕೆ ನೆಲದ ಮೇಲಿತ್ತು. ಮೊಹಾಂತಿ ಹಸ್ತಮೈಥುನ ಮಾಡುತ್ತಿದ್ದ ದೃಶ್ಯ ಕಂಡಿತ್ತು. ಆಗ ಆ ಬಾಲಕಿ ವಿಮಾನದಲ್ಲಿ ಖಾಲಿ ಇದ್ದ ಸೀಟಿಗೆ ಶಿಫ್ಟ್ ಆಗಿದ್ದಳು ಎನ್ನಲಾಗಿದೆ.
ಬಾಸ್ಟನ್ಗೆ ಬಂದಿಳಿದ ನಂತರ, ಹುಡುಗಿ ಘಟನೆಯ ಬಗ್ಗೆ ತನ್ನ ಕುಟುಂಬಕ್ಕೆ ತಿಳಿಸಿದಳು. ಬಾಲಕಿಯ ಕಡೆಯವರು ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದರೆ, ವಿಚಾರಣೆ ವೇಳೆ ಡಾ.ಮೊಹಂತಿ ಆರೋಪವನ್ನು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ಆ ನಿಟ್ಟಿನಲ್ಲಿ ಡಾ.ಮೊಹಂತಿ ಅವರು ಕಳೆದ ಅ. 10ರಂದು ಫೆಡರಲ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ವಿಮಾನದಲ್ಲಿ ಹದಿಹರೆಯದ ಹುಡುಗಿಯ ಮುಂದೆ ಅಸಭ್ಯ ಕೃತ್ಯಗಳನ್ನು ಎಸಗಿದ್ದು ಬಯಲಾಗಿತ್ತು.
ಇದನ್ನೂ ಓದಿ: ʻಚಂದ್ರಯಾನ 3ʼ ಗೆ ʻಲೂನಾ 25ʼ ಪೈಪೋಟಿ, 47 ವರ್ಷಗಳ ನಂತರ ಮೊದಲ ಬಾರಿಗೆ ಚಂದ್ರನತ್ತ ರಷ್ಯಾ !
ಈ ಆರೋಪ ಸಾಭೀತಾದ ಹಿನ್ನೆಲೆ ವೈದ್ಯನಿಗೆ 90 ದಿನಗಳ ಜೈಲು ಶಿಕ್ಷೆ, ಒಂದು ವರ್ಷದವರೆಗೆ ಮೇಲ್ವಿಚಾರಣೆಯ ಬಿಡುಗಡೆ ಮತ್ತು $ 5,000 ವರೆಗೆ ದಂಡ ವಿಧಿಸಲಾಗಿತ್ತು. ನಂತರ ಅವರನ್ನು 18 ವರ್ಷದೊಳಗಿನ ಜನರು ಮತ್ತು ಸಭೆಯ ಸ್ಥಳಗಳಿಂದ ದೂರವಿರುವುದು ಸೇರಿದಂತೆ ಷರತ್ತುಗಳೊಂದಿಗೆ ವೈಯಕ್ತಿಕ ಗುರುತಿನ ಮೇಲೆ ಬಿಡುಗಡೆ ಮಾಡಲಾಯಿತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ