Viral News: 41 ವರ್ಷದ ಮಹಿಳೆಯನ್ನು ವರಿಸಿದ 16 ವರ್ಷದ ಬಾಲಕ!

Viral Wedding News: ದುಬಾರಿ ಉಡುಪಿನಲ್ಲಿ ಅದ್ಭುತವಾಗಿ ಕಾಣುತ್ತಿರುವ ಈ ದಂಪತಿ ಮದುವೆಯ ಉಂಗುರವನ್ನು ಧರಿಸಿರುವುದನ್ನು ನೀವು ಕಾಣಬಹುದಾಗಿದೆ.

Written by - Puttaraj K Alur | Last Updated : Aug 11, 2023, 06:40 PM IST
  • ಕೇವಲ 16 ವರ್ಷದ ಬಾಲಕ 41 ವರ್ಷದ ಮಹಿಳೆಯನ್ನು ಮದುವೆಯಾಗಿದ್ದಾನೆ
  • ಇಂಡೋನೇಷಿಯಾದ ಪಶ್ಚಿಮ ಕಲಿಮಂಟನ್ ಪ್ರಾಂತ್ಯದಲ್ಲಿ ವಿವಾಹವಾದ ಜೋಡಿ
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ಜೋಡಿಯ ಫೋಟೋಗಳು
Viral News: 41 ವರ್ಷದ ಮಹಿಳೆಯನ್ನು ವರಿಸಿದ 16 ವರ್ಷದ ಬಾಲಕ! title=
41 Loves 16

ನವದೆಹಲಿ: ಪ್ರೀತಿಗೆ ವಯಸ್ಸಿನ ಅಂತರ, ಜಾತಿ-ಧರ್ಮ ಇದ್ಯಾವುದು ಲೆಕ್ಕಕ್ಕೆ ಬರುವುದಿಲ್ಲ. ಪ್ರೀತಿ ಕುರುಡು ಅಂತಾರಲ್ಲ ಹಾಗೆ. ಅನೇಕರು ಯಾವುದನ್ನೂ ಲೆಕ್ಕಿಸದೆ ತಮಗೆ ಇಷ್ಟಬಂದವರನ್ನು ಮದುವೆಯಾಗುತ್ತಾರೆ.

ಪೋಷಕರ ವಿರೋಧದ ನಡುವೆಯೂ ಅಂತರ್ಜಾತಿ, ಅಂತರ್ಧಮಿಯ ವಿವಾಹವಾಗುತ್ತಾರೆ. ಪ್ರಪಂಚದಲ್ಲಿ ಚಿತ್ರ-ವಿಚಿತ್ರವಾಗಿ ಮದುವೆಗಳಾದ ನಿದರ್ಶನಗಳಿವೆ. ಅದೇ ರೀತಿಯ ವಿಚಿತ್ರ ಮದುವೆಯ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಕೊರೊನಾದಿಂದ ಬಳಲಿ ಬೆಂಂಡಾಗಿದ್ದ ಜನರಿಗೆ ಮತ್ತೊಂದು ಶಾಕಿಂಗ್ ಸುದ್ದಿ..!

ಕೇವಲ 16 ವರ್ಷದ ಬಾಲಕನೊಬ್ಬ ಶಾಲೆಗೆ ಕೊಂಚಕಾಲ ಗುಡ್‍ಬೈ ಹೇಳಿ 41 ವರ್ಷದ ಮಹಿಳೆಯನ್ನು ಮದುವೆಯಾಗಿದ್ದಾರೆ. ಜುಲೈ 30ರಂದು ಇವರು ಇಂಡೋನೇಷಿಯಾದ ಪಶ್ಚಿಮ ಕಲಿಮಂಟನ್ ಪ್ರಾಂತ್ಯದಲ್ಲಿ ಈ ಜೋಡಿ ವಿವಾಹವಾಗಿದ್ದಾರೆ. ಇದೀಗ ಈ ಜೋಡಿ ಮದುವೆಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.   

ದುಬಾರಿ ಉಡುಪಿನಲ್ಲಿ ಅದ್ಭುತವಾಗಿ ಕಾಣುತ್ತಿರುವ ಈ ದಂಪತಿ ಮದುವೆಯ ಉಂಗುರವನ್ನು ಧರಿಸಿರುವುದನ್ನು ನೀವು ಕಾಣಬಹುದಾಗಿದೆ. ಈ ಜೋಡಿಯ ಚಿತ್ರಗಳನ್ನು ನೋಡಿದ ಅನೇಕರು ಇವರಿಬ್ಬರು ತಾಯಿ ಮತ್ತು ಮಗನಂತೆ ಕಾಣುತ್ತಾರೆಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಪ್ರೀತಿ ಕುರುಡು ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ ಎಂದು ಕಾಮೆಂಟ್ ಮಾಡಿದ್ದಾರೆ.   

ಇದನ್ನೂ ಓದಿ: Viral News: ಕ್ಯಾನ್ಸರ್‌ನಿಂದ ಬಾಲ್ಯದ ಗೆಳಯನೊಂದಿಗೆ ಮದುವೆಯಾದ 10 ವರ್ಷದ ಬಾಲಕಿ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News