ಶಿವಸೇನಾ ಹಿಂದುತ್ವ ಬಿಜೆಪಿ ಹಿಂದುತ್ವಕ್ಕಿಂತ ಭಿನ್ನ- ಆದಿತ್ಯ ಠಾಕ್ರೆ

ಹಿಂದುತ್ವವು ಶಿವಸೇನೆಯ ಸಿದ್ಧಾಂತಗಳಲ್ಲಿ ಒಂದು ಆದರೆ ಅದು ಬಿಜೆಪಿ ಹಿಂದುತ್ವಕ್ಕಿಂತ ಭಿನ್ನವಾಗಿದೆ ಎಂದು ಯುವಸೇನಾ ಆದಿತ್ಯ ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ. 

Last Updated : May 19, 2019, 08:22 PM IST
ಶಿವಸೇನಾ ಹಿಂದುತ್ವ ಬಿಜೆಪಿ ಹಿಂದುತ್ವಕ್ಕಿಂತ ಭಿನ್ನ- ಆದಿತ್ಯ ಠಾಕ್ರೆ title=
file photo

ನವದೆಹಲಿ: ಹಿಂದುತ್ವವು ಶಿವಸೇನೆಯ ಸಿದ್ಧಾಂತಗಳಲ್ಲಿ ಒಂದು ಆದರೆ ಅದು ಬಿಜೆಪಿ ಹಿಂದುತ್ವಕ್ಕಿಂತ ಭಿನ್ನವಾಗಿದೆ ಎಂದು ಯುವಸೇನಾ ಆದಿತ್ಯ ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ. 

ಯುವ ಲೇಖಕಿ ಗುರ್ಮೇಹರ್ ಕೌರ್ರಿಂದ ರಚಿಸಲ್ಪಟ್ಟ "ದಿ ಯಂಗ್ ಅಂಡ್ ದಿ ರೆಸ್ಟ್ಲೆಸ್" ಎಂಬ ಪುಸ್ತಕದಲ್ಲಿ  ಓಮರ್ ಅಬ್ದುಲ್ಲಾ, ಸಚಿನ್ ಪೈಲಟ್, ಆದಿತ್ಯ ಠಾಕ್ರೆ ಮತ್ತು ಶೆಹ್ಲಾ ರಶೀದ್ ಅವರಂತಹ ದೇಶದ ಯುವ ರಾಜಕಾರಣಿಗಳ ಸಂದರ್ಶನ ಮಾಡಲಾಗಿದೆ.

ಈ ಪುಸ್ತಕದಲ್ಲಿ ಲೇಖಕಿ ಗುರ್ಮೇಹರ್ ಕೌರ್ ಗೆ ನೀಡಿರುವ ಸಂದರ್ಶನದಲ್ಲಿ ಆದಿತ್ಯ ಠಾಕ್ರೆ "...ಸಾಮಾನ್ಯವಾಗಿ, ಶಿವಸೇನೆಯಂತಹ ಪಕ್ಷವು ಬಲಪಂಥೀಯ ಎಂದು ಪರಿಗಣಿಸಲ್ಪಡುತ್ತದೆ, ಆದ್ದರಿಂದ ಹಿಂದೂತ್ವ ನಮ್ಮ ಸಿದ್ಧಾಂತಗಳಲ್ಲಿ ಒಂದಾಗಿದೆ ಆದರೆ ಅದು ಬಿಜೆಪಿಯ ಹಿಂದುತ್ವಕ್ಕಿಂತ ಬಹಳ ಭಿನ್ನವಾಗಿದೆ." ನಮ್ಮದು ಬಲಪಂಥೀಯ ಕೇಂದ್ರವಾದಿ ಸಿದ್ದಾಂತ, ಆದ್ದರಿಂದ ನಾವು ರಾತ್ರಿ ಜೀವನ, ವಿದ್ಯುತ್ ಬಸ್ಸುಗಳು ಮತ್ತು ಪ್ಲಾಸ್ಟಿಕ್ ಮಾಲಿನ್ಯದಂತಹ ವಿಷಯಗಳ ಬಗ್ಗೆ  ಮಾತನಾಡುತ್ತೇವೆ. ನಿಮಗೆ ಗೊತ್ತಿದೆ, ನಾವು ಸಂಪೂರ್ಣವಾಗಿ ವಿಭಿನ್ನವಾಗಿ ಮಾತನಾಡುತ್ತೇವೆ "ಎಂದು ಠಾಕ್ರೆ ಹೇಳಿದರು.

ಶಿವಸೇನೆ ಯುವ ವಿಭಾಗದ ಮುಖ್ಯಸ್ಥರಾಗಿರುವ ಆದಿತ್ಯ ಠಾಕ್ರೆ ಮಹಾರಾಷ್ಟ್ರದಲ್ಲಿ ಪ್ಲ್ಯಾಸ್ಟಿಕ್ ನಿಷೇಧ, ಮುಂಬೈಯಲ್ಲಿ 24x7 ನೈಟ್ ಲೈಫ್ ನಂತಹ ವಿಚಾರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರು.

Trending News