ಬೆಂಗಳೂರು: ಇರುವ ರಾಜ್ಯಾಧ್ಯಕ್ಷ ಕೆಲಸ ಮಾಡದೆ, ಹೊಸ ರಾಜ್ಯಾಧ್ಯಕ್ಷ ಸಿಗದೆ, ವಿಪಕ್ಷ ನಾಯಕನ ಆಯ್ಕೆ ಮಾಡಲಾಗದೆ, ಆಂತರಿಕ ಕಲಹ ನಿಭಾಯಿಸಲಾಗದೆ, ಹೈಕಮಾಂಡ್ ತಿರಸ್ಕಾರದಿಂದ ವಿಲವಿಲ ಒದ್ದಾಡುತ್ತಿರುವ ಬಿಜೆಪಿಗೆ ಯಾವ ಹೋಲಿಕೆ ಸೂಕ್ತವಾಗಬಹುದು ಎಂದು ಕಾಂಗ್ರೆಸ್ ಪಶ್ನಿಸಿದೆ. ಈ ಬಗ್ಗೆ ಶುಕ್ರವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಬಿಜೆಪಿ ಒಂದು ರೀತಿ ಯಜಮಾನನಿಲ್ಲದ ಮನೆ, ಡ್ರೈವರ್ ಇಲ್ಲದ ಡಕೋಟಾ ಇಂಜಿನ್, ನಾವಿಕನಿಲ್ಲದ ನೌಕೆ ಮತ್ತು ಅಂಪೈರ್ ಇಲ್ಲದ WWF ವೇದಿಕೆಯಾಗಿದೆ’ ಎಂದು ಟೀಕಿಸಿದೆ.
‘ಚುನಾವಣೆ ನಂತರ ಬಿಜೆಪಿಯ ಸ್ಥಿತಿ ಬಿರುಗಾಳಿಗೆ ಸಿಲುಕಿದ ನಾವಿಕನಿಲ್ಲದ ನೌಕೆಯಂತಾಗಿದೆ. ಒಂದೆಡೆ ಒಬ್ಬರಿಗೊಬ್ಬರು ಹತ್ಯೆಗೆ ಷಡ್ಯಂತ್ರ ರೂಪಿಸುವವರು, ಮತ್ತೊಂದೆಡೆ ಒಬ್ಬರಿಗೊಬ್ಬರು ರಾಜಕೀಯವಾಗಿ ಸಮಾಧಿ ತೋಡುವವರು, ಇನ್ನೊಂದೆಡೆ ಒಳಗೊಳಗೇ ಕುದಿಯುವವರು!’ ಎಂದು ಕಾಂಗ್ರೆಸ್ ಕುಟುಕಿದೆ.
ಇರುವ ರಾಜ್ಯಾಧ್ಯಕ್ಷ ಕೆಲಸ ಮಾಡದೆ, ಹೊಸ ರಾಜ್ಯಾಧ್ಯಕ್ಷ ಸಿಗದೆ, ವಿಪಕ್ಷ ನಾಯಕನ ಆಯ್ಕೆ ಮಾಡಲಾಗದೆ, ಆಂತರಿಕ ಕಲಹ ನಿಭಾಯಿಸಲಾಗದೆ, ಹೈಕಮಾಂಡ್ ತಿರಸ್ಕಾರದಿಂದ ವಿಲವಿಲ ಒದ್ದಾಡುತ್ತಿರುವ @BJP4Karnataka ಗೆ ಯಾವ ಹೋಲಿಕೆ ಸೂಕ್ತವಾಗಬಹುದು..
🔹ಯಜಮಾನನಿಲ್ಲದ ಮನೆ !
🔹ಡ್ರೈವರ್ ಇಲ್ಲದ ಡಕೋಟಾ ಇಂಜಿನ್ !
🔹ನಾವಿಕನಿಲ್ಲದ ನೌಕೆ !
🔹ಅಂಪೈರ್…— Karnataka Congress (@INCKarnataka) August 18, 2023
ಇದನ್ನೂ ಓದಿ: ಕಾಲ ಮಿತಿಯಲ್ಲಿ ಕೆಲಸ ಆಗಬೇಕು-ಕೆಲಸಗಳು, ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಸಿಎಂ ಖಡಕ್ ಸೂಚನೆ
‘ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಪಿತೂರಿಗಾರರ ಬಗ್ಗೆ ದೂರು ನೀಡಿದರೂ ಕ್ರಮವಿಲ್ಲ ಎಂದು ಗೋಳಾಡುತ್ತಿದ್ದಾರೆ. ಕ್ರಮ ತೆಗೆದುಕೊಳ್ಳಬೇಕಾದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವಧಿ ಮೀರಿದ ಔಷಧದಂತೆ ನಿರುಪಯೋಗಿ ಆಗಿದ್ದಾರೆ, ಶಾಡೋ ಅಧ್ಯಕ್ಷ ಪ್ರಹ್ಲಾದ್ ಜೋಶಿ ನಾಪತ್ತೆಯಾಗಿದ್ದಾರೆ! ಬಿಜೆಪಿಗೆ ಆಂತರಿಕ ಕಲಹ ನಿಭಾಸಲು ಒಬ್ಬ ರಾಜ್ಯಾಧ್ಯಕ್ಷ, ಸರ್ಕಾರವನ್ನು ಎದುರಿಸಲು ಒಬ್ಬ ವಿಪಕ್ಷ ನಾಯಕ ಸಿಗದಷ್ಟು ದಿವಾಳಿಯಾಗಿಯೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಮೇಲ್ದರ್ಜೆಗೇರಿಸಲು ಕ್ರಮ
ನಾಮಕಾವಸ್ಥೆಯಂತಿದ್ದ ಗ್ರಾಮಪಂಚಾಯ್ತಿಗಳ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳನ್ನು “ಅರಿವು ಕೇಂದ್ರ“ಗಳಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗಿದೆ. ಡಿಜಿಟಲ್ ಕಲಿಕಾ ಸಾಮಗ್ರಿಗಳು, ವೃತ್ತಿಪರ ಮಾರ್ಗದರ್ಶನಕ್ಕೆ ವ್ಯವಸ್ಥೆ, ಸಂವಿಧಾನ ಶಿಕ್ಷಣ ವ್ಯವಸ್ಥೆ, ವಿಶೇಷಚೇತನ ಸ್ನೇಹಿ ತಾಂತ್ರಿಕತೆ ಮತ್ತು ನುರಿತ ತಜ್ಞರಿಂದ ಕಾರ್ಯಗಾರ. ಗ್ರಾಮೀಣ ಜನರ ಜ್ಞಾನಾರ್ಜನೆಗೆ ಸಕಲ ರೀತಿಯಲ್ಲಿ ಸಜ್ಜುಗೊಂಡ ಅರಿವು ಕೇಂದ್ರಗಳ ಕಾರ್ಯ ಚಟುವಟಿಕೆಯ ಅವಧಿಯನ್ನು 6-8ಗಂಟೆಗೆ ವಿಸ್ತರಿಸಿ ಮೇಲ್ವಿಚಾರಕರ ಕನಿಷ್ಠ ವೇತನವನ್ನು 15,196 ರೂ.ಗಳಿಗೆ ಹೆಚ್ಚಿಸಲಾಗಿದೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಕೊಡಗು ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ, 3.5 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಪತ್ತೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.