ಸಿಎಂ ರಿಂದ ವಿಕಲಚೇತನ ಫಲಾನುಭವಿಗಳಿಗೆ ಯಂತ್ರಚಾಲಿತ ದ್ಬಿಚಕ್ರವಾಹನ ವಿತರಣೆ

ಈ ವರ್ಷ 14 ಕೋಟಿ ವೆಚ್ಚದಲ್ಲಿ 108 ಫಲಾನುಭವಿಗಳಿಗೆ ದ್ವಿಚಕ್ರ ವಾಹನಗಳನ್ನು ವಿತರಣೆ ಮಾಡಿದ ರಾಜ್ಯ ಸರ್ಕಾರ.

Last Updated : Sep 11, 2017, 04:16 PM IST
ಸಿಎಂ ರಿಂದ ವಿಕಲಚೇತನ ಫಲಾನುಭವಿಗಳಿಗೆ ಯಂತ್ರಚಾಲಿತ ದ್ಬಿಚಕ್ರವಾಹನ ವಿತರಣೆ title=
Pic Courtesy : Twitter

ಬೆಂಗಳೂರು: ವಿಧಾನ ಸೌಧದ ಮುಂಭಾಗದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯಿಂದ ಇಂದು ನಡೆದ ಕಾರ್ಯಕ್ರಮದಲ್ಲಿ ಸಿಎಂ‌ ಸಿದ್ದರಾಮಯ್ಯರಿಂದ ಫಲಾನುಭವಿಗಳಿಗೆ ದ್ವಿಚಕ್ರವಾಹನ ವಿತರಣೆ ಮಾಡಲಾಯಿತು.

ಒಟ್ಟು 108 ಫಲಾನುಭವಿಗಳಿಗೆ ಈ ವರ್ಷ 14 ಕೋಟಿ ವೆಚ್ಚದಲ್ಲಿ 2000 ದ್ವೀಚಕ್ರ ವಾಹನ ವಿತರಣೆ ಮಾಡಲಾಯಿತು. ಇದರ ವಿಶೇಷತೆ ಎಂದರೆ ಈ ದ್ವಿಚಕ್ರ ವಾಹನಗಳು ಯಂತ್ರ ಚಾಲಿತ ದ್ವಿಚಕ್ರ ವಾಹನಗಳು.  

ಕಾರ್ಯಕ್ರಮದಲ್ಲಿ ಸಚಿವೆ ಉಮಾಶ್ರಿಗಾಗಿ ಕಾದ ಮುಖ್ಯಮಂತ್ರಿಗಳು ಎಲ್ರಿ ಮಿನಿಸ್ಟ್ರು, ನಾನು ಮೈಸೂರಿನಿಂದ ಬಂದಿದ್ದೇನೆ ಅವರು ಎಲ್ಲಿ ಹೋದರು ಎಂದು ಪ್ರಶ್ನಿಸಿದರು.

ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ ಸಚಿವೆ ಉಮಾಶ್ರಿ ಸಿಎಂ ಪಕ್ಕದಲ್ಲಿ ಕುಳಿತು, ತಡವಾಗಿ ಬಂದದ್ದಕ್ಕೆ ಸಮಜಾಯಿಷಿ ನೀಡಿದ್ದು ಕಂಡು ಬಂದಿತು.

Trending News