ಗಗನಸಖಿಗೆ ʼನಿನ್ನ ರೇಟ್‌ ಎಷ್ಟು..ʼ ಎಂದು ಕೇಳಿದ ʼಅಕ್ರಂ ಅಹಮದ್ʼ ಎಂಬಾತನ ಬಂಧನ..!

ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಘಟನೆ ನಡೆದಿದ್ದು, ವಿದೇಶಿ ಪ್ರಜೆ ಅಕ್ರಂ ಅಹಮದ್ ಎಂಬಾತನನ್ನು ಬಂಧಿಸಲಾಗಿದೆ. ಈತ ಕಳೆದ ಆಗಸ್ಟ್ 18ರಂದು ಬ್ಯುಸಿನೆಸ್ ವಿಸಾದಡಿಯಲ್ಲಿ ಬೆಂಗಳೂರಿಗೆ ಬರುತ್ತಿದ್ದಾಗ ಈ ಕೃತ್ಯ ಎಸಗಿದ್ದಾನೆ. 

Written by - VISHWANATH HARIHARA | Edited by - Krishna N K | Last Updated : Aug 21, 2023, 01:05 PM IST
  • ವಿಮಾನದಲ್ಲಿ ಕೆಲ ಪ್ರಯಾಣಿಕರ ವರ್ತನೆ ಮಿತಿ‌ಮೀರುತ್ತಿದೆ‌.
  • ವಿಮಾನದಲ್ಲಿ ಧೂಮಪಾನ ಮಾಡೋದು, ಕಿರಿಕ್ ಮಾಡಿಕೊಳ್ಳುವವರ ಸಂಖ್ಯೆ ಜಾಸ್ತಿಯಾಗಿದೆ.
  • ಇದೀಗ ವಿದೇಶಿ ಪ್ರಯಾಣಿಕನೊಬ್ಬ ಗಗನ ಸಖಿಗೆ ಲೈಂಗಿಕ ಕಿರುಕುಳ ನೀಡಿ ಪೊಲೀಸರ ಅತಿಥಿಯಾಗಿದ್ದಾನೆ‌.
ಗಗನಸಖಿಗೆ ʼನಿನ್ನ ರೇಟ್‌ ಎಷ್ಟು..ʼ ಎಂದು ಕೇಳಿದ ʼಅಕ್ರಂ ಅಹಮದ್ʼ ಎಂಬಾತನ ಬಂಧನ..! title=

ಬೆಂಗಳೂರು : ವಿಮಾನದಲ್ಲಿ ಕೆಲ ಪ್ರಯಾಣಿಕರ ವರ್ತನೆ ಮಿತಿ‌ಮೀರುತ್ತಿದೆ‌. ವಿಮಾನದಲ್ಲಿ ಧೂಮಪಾನ ಮಾಡೋದು, ಕಿರಿಕ್ ಮಾಡಿಕೊಳ್ಳುವವರ ಸಂಖ್ಯೆ ಜಾಸ್ತಿಯಾಗಿದೆ. ಆದರೀಗ ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ವಿದೇಶಿ ಪ್ರಯಾಣಿಕನೊಬ್ಬ ವಿಮಾನದಲ್ಲಿ ಗಗನ ಸಖಿಗೆ ಲೈಂಗಿಕ ಕಿರುಕುಳ ನೀಡಿ ಪೊಲೀಸರ ಅತಿಥಿಯಾಗಿದ್ದಾನೆ‌.

ಮಾಲ್ಡೀವ್ಸ್ ನಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಘಟನೆ ನಡೆದಿದ್ದು, ವಿದೇಶಿ ಪ್ರಜೆ ಅಕ್ರಂ ಅಹಮದ್ ಎಂಬಾತನನ್ನು ಬಂಧಿಸಲಾಗಿದೆ. ಈತ ಕಳೆದ ಆಗಸ್ಟ್ 18ರಂದು ಬ್ಯುಸಿನೆಸ್ ವಿಸಾದಡಿಯಲ್ಲಿ ಬೆಂಗಳೂರಿಗೆ ಬರುತ್ತಿದ್ದ‌. ವಿಮಾನದಲ್ಲಿ ಪ್ರಯಾಣಿಸುವಾಗ ತನ್ನ ಕಣ್ಣಿಗೆ ಬಿದ್ದ ಗಗನಸಖಿ ತನ್ನ ಪಕ್ಕದಲ್ಲಿ ಹೋಗುತ್ತಿರುವಾಗ ಬೇಕಂತಲೇ ಮೈಮುಟ್ಟಿದ್ದಾನೆ.

ಇದನ್ನೂ ಓದಿ: ಮಿಯಾಮಿ ಫ್ಲೈಟ್‌ನಲ್ಲಿನ ಬಾತ್‌ರೂಮ್‌ನಲ್ಲಿ ಪೈಲಟ್ ಸಾವು.!...ಮುಂದೇನಾಯ್ತು ಗೊತ್ತಾ?

ನಂತರ ಕ್ಯಾಬಿನ್ ಕ್ರೂ ಯುವತಿಯನ್ನ ಕರೆದು ಬಿಯರ್ ಹಾಗೂ ಗೋಡಂಬಿ ಕೇಳಿದ್ದ.ಸರ್ವ್ ಮಾಡುವ ಸಂದರ್ಭದಲ್ಲಿ ''51 ವರ್ಷಗಳಿಂದಲೂ ನಿನ್ನಂತೆ ಇರುವ ಹುಡುಗಿಯನ್ನ ಹುಡುಕುತ್ತಿದ್ದೇನೆ, 10 ಡಾಲರ್ ಬದಲು 100 ಡಾಲರ್ ಕೊಡುತ್ತೇನೆ. ಉಳಿದ ಹಣ ನೀನೇ ಇಟ್ಟುಕೋ'' ಎಂದು ಆಕೆಯ ದೇಹವನ್ನ ಅಸಭ್ಯವಾಗಿ ಸ್ಪರ್ಶಿಸಿದ್ದ. ಮತ್ತೋರ್ವ ಮಹಿಳಾ ಸಿಬ್ಬಂದಿ ಹಣ ಕೇಳಲು ಹೋದಾಗ ಆರೋಪಿಯು ಹಣ ಹುಡುಕುವ ನೆಪದಲ್ಲಿ ತನ್ನ ಪ್ಯಾಂಟ್ ನೊಳಗೆ ಕೈ ಹಾಕಿಕೊಂಡು ಕೆಟ್ಟದಾಗಿ ವರ್ತಿಸಿದ್ದ. 

ವಿಮಾನ ಲ್ಯಾಂಡಿಂಗ್ ಸಂದರ್ಭದಲ್ಲಿಯೂ ಸಹ ಎರಡು ಮೂರು ಬಾರಿ ಆಸನದಿಂದ ಎದ್ದು ನಿಂತಿದ್ದು, ಕುಳಿತುಕೊಳ್ಳುವಂತೆ ಸೂಚಿಸಿದಾಗ ''ನನಗೆ ಒರಟು ವಸ್ತುಗಳು ಇಷ್ಟ, ನೀನು ತುಂಬಾ ಒರಟು'' ಎಂದು ಅಸಭ್ಯವಾಗಿ ವರ್ತಿಸಿದ್ದ. ಹೀಗಾಗಿ ನೊಂದ ಗಗನಸಖಿ ಘಟನೆಯ ಬಗ್ಗೆ ಏರ್ಪೋರ್ಟ್ ಭದ್ರತಾ ಸಿಬ್ಬಂದಿಯ ಗಮನಕ್ಕೆ ತಂದಿದ್ದಾಳೆ. ನಂತರ ಆರೋಪಿ ವಿರುದ್ಧ ದೇವನಹಳ್ಳಿ ಇಂಟರ್ನ್ಯಾಷನಲ್ ಏರ್ಪೋರ್ಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News