ಈತ ಧೋನಿಯ ಫೇವರೇಟ್ ಬೌಲರ್.. ಹುಟ್ಟಿದ್ದು ಪಾಕ್’ನಲ್ಲಿ, ಆಡಿದ್ದು ದ.ಆಫ್ರಿಕಾ ಪರ, ಮದುವೆಯಾಗಿದ್ದು ಭಾರತದ ಮಾಡೆಲ್ ಜೊತೆ…!

CSK spinner Imran Tahir Profile: ಇಮ್ರಾನ್ ತಾಹಿರ್ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದ್ದ ವಿಶ್ವಕಪ್‌ ಪಂದ್ಯಾವಳಿಗಾಗಿ ಪಾಕಿಸ್ತಾನದ ಅಂಡರ್-19 ತಂಡಕ್ಕೆ ಆಯ್ಕೆಯಾಗಿದ್ದರು. ಅದು 1998ರಲ್ಲಿ.

Written by - Bhavishya Shetty | Last Updated : Sep 2, 2023, 08:43 AM IST
    • ವಿಭಿನ್ನ ಮಟ್ಟದಲ್ಲಿ ಹೆಸರು ಮಾಡಿದ ಆಟಗಾರ ಇಮ್ರಾನ್ ತಾಹಿರ್
    • ಪಾಕಿಸ್ತಾನ ಮೂಲದ ಇಮ್ರಾನ್ ತಾಹಿರ್ ಕ್ರಿಕೆಟ್ ಆಡಿದ್ದು ದಕ್ಷಿಣ ಆಫ್ರಿಕಾ ಪರ
    • ಪಾಕಿಸ್ತಾನದ ಅಂಡರ್-19 ತಂಡಕ್ಕೆ ಆಯ್ಕೆಯಾಗಿದ್ದರು. ಅದು 1998ರಲ್ಲಿ
ಈತ ಧೋನಿಯ ಫೇವರೇಟ್ ಬೌಲರ್.. ಹುಟ್ಟಿದ್ದು ಪಾಕ್’ನಲ್ಲಿ, ಆಡಿದ್ದು ದ.ಆಫ್ರಿಕಾ ಪರ, ಮದುವೆಯಾಗಿದ್ದು ಭಾರತದ ಮಾಡೆಲ್ ಜೊತೆ…! title=
Imran Tahir Profile

CSK spinner Imran Tahir Profile: ಡೇಲ್ ಸ್ಟೇಯ್ನ್, ಮೊರ್ನೆ ಮೊರ್ಕೆಲ್ ಮತ್ತು ವೆರ್ನಾನ್ ಫಿಲಾಂಡರ್ ಅವರಂತಹ ದಿಗ್ಗಜ ಬೌಲರ್‌’ಗಳ ಜೊತೆಗೆ ಆಡುತ್ತಲೇ ವಿಭಿನ್ನ ಮಟ್ಟದಲ್ಲಿ ಹೆಸರು ಮಾಡಿದ ಆಟಗಾರ ಇಮ್ರಾನ್ ತಾಹಿರ್. ಪಾಕಿಸ್ತಾನ ಮೂಲದ ಇಮ್ರಾನ್ ತಾಹಿರ್ ಕ್ರಿಕೆಟ್ ಆಡಿದ್ದು ದಕ್ಷಿಣ ಆಫ್ರಿಕಾ ಪರ. ಅದಕ್ಕೂ ಮುನ್ನ ಇಮ್ರಾನ್ ತಾಹಿರ್ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದ್ದ ವಿಶ್ವಕಪ್‌ ಪಂದ್ಯಾವಳಿಗಾಗಿ ಪಾಕಿಸ್ತಾನದ ಅಂಡರ್-19 ತಂಡಕ್ಕೆ ಆಯ್ಕೆಯಾಗಿದ್ದರು. ಅದು 1998ರಲ್ಲಿ.

ಇದನ್ನೂ ಓದಿ: 2 ಬಾರಿ ರೋಹಿತ್ ಶರ್ಮಾ ಔಟ್ ಆಗಲು ಕಾರಣನಾದ ಈ ಆಟಗಾರನಿಗೆ ತಂಡದಲ್ಲಿ ಸ್ಥಾನ!

ಆ ಬಳಿಕ ದಕ್ಷಿಣ ಆಫ್ರಿಕಾ ತಂಡದಲ್ಲಿ ಇಮ್ರಾನ್ ತಾಹಿರ್ ಸ್ಥಾನ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ರಾಬಿನ್ ಪೀಟರ್ಸನ್, “ನಾವು ಅಂಡರ್-19 ವಿಶ್ವಕಪ್‌’ನಲ್ಲಿ ಪಾಕಿಸ್ತಾನದ ವಿರುದ್ಧ ಆಡಿದಾಗ ನನಗೆ ನೆನಪಿದೆ. ಇಮ್ರಾನ್ ತಾಹಿರ್ ಹಿಂದೆ ಮತ್ತು ಈಗಲೂ ಗುಣಮಟ್ಟದ ಬೌಲರ್. ದಕ್ಷಿಣ ಆಫ್ರಿಕಾದಲ್ಲಿ ಆ ವಯಸ್ಸಿನಲ್ಲಿ ನಾವು ಅಂತಹ ಗುಣಮಟ್ಟದ ಬೌಲಿಂಗ್ ಅನ್ನು ಎದುರಿಸಿರಲಿಲ್ಲ. ನಾವು ಮೊದಲಿನಿಂದಲೂ ವೇಗದ ಬೌಲಿಂಗ್‌’ಗೆ ಹೆಸರುವಾಸಿಯಾಗಿದ್ದೇವೆ. ಇಮ್ರಾನ್ ತಾಹಿರ್ ವಿರುದ್ಧ ಆಡಿದಾಗ (ಆ ಸಂದರ್ಭದಲ್ಲಿ ಇಮ್ರಾನ್ ಪಾಕ್ ಪರ ಆಡುತ್ತಿದ್ದರು), ಯಾವುದೇ ಬ್ಯಾಟ್ಸ್‌ಮನ್ ಅವರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ” ಎಂದಿದ್ದರು.

ಇನ್ನು ಕ್ರಿಕೆಟ್ ವೃತ್ತಿಜೀವನ ಹೊರತುಪಡಿಸಿ, ಇಮ್ರಾನ್ ಅವರ ಲವ್ ಸ್ಟೋರಿ ಕೂಡ ಸಖತ್ ಇಂಟರೆಸ್ಟಿಂಗ್ ಆಗಿದೆ. 1988 ರಲ್ಲಿ, ಇಮ್ರಾನ್ ಪಾಕಿಸ್ತಾನದ ಅಂಡರ್-19 ತಂಡದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಿದರು. ಈ ವೇಳೆ ಇಮ್ರಾನ್ ತಾಹಿರ್ ಸುಮಯ್ಯಾ ದಿಲ್ದಾರ್ ಅವರನ್ನು ಭೇಟಿಯಾದರು. ಸುಮೈಯಾ ದಿಲ್ದಾರ್ ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಮಹಿಳೆ. ಇಮ್ರಾನ್ ತಾಹಿರ್ ಅವರನ್ನು ಮದುವೆಯಾಗುವ ಮೊದಲು, ಅವರು ವೃತ್ತಿಪರ ರೂಪದರ್ಶಿಯಾಗಿದ್ದರು. ಇಮ್ರಾನ್ ತಾಹಿರ್ ಮೊದಲ ನೋಟದಲ್ಲೇ ಸುಮೈಯಾ ದಿಲ್ದಾರ್ ಅವರನ್ನು ಪ್ರೀತಿಸುತ್ತಿದ್ದರು, ಆದರೆ ಸುಮೈಯಾ ಅವರನ್ನು ಸ್ನೇಹಿತನಂತೆ ನೋಡಿದ್ದರು.

ಇಮ್ರಾನ್ ಮದುವೆಗೂ ಮುನ್ನ ಸುಮಯ್ಯಾ ಜತೆ ಬಹಳ ದಿನ ಡೇಟಿಂಗ್ ನಡೆಸಿದ್ದರು. ಇದಾದ ಬಳಿಕ 2006ರಲ್ಲಿ ಇಮ್ರಾನ್ ಸುಮೈಯಾ ಮದುವೆಯಾಗಲು ನಿರ್ಧರಿಸಿ, ದಕ್ಷಿಣ ಆಫ್ರಿಕಾಗೆ ತೆರಳಿದ್ದರು. 2007 ರಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ ಬಳಿಕ, ಇಮ್ರಾನ್ ತಾಹಿರ್ ಸುಮೈಯಾ ಅವರನ್ನು ವಿವಾಹವಾದರು. ಇದರ ನಂತರ, ಅವರ ಜೀವನದಲ್ಲಿ ಒಂದು ಮಹತ್ವದ ತಿರುವು ಬಂದಿತು. ಅದುವೇ ದಕ್ಷಿಣ ಆಫ್ರಿಕಾದಲ್ಲಿ ಮೂರು ವರ್ಷಗಳ ಕಾಲ ಕಳೆದ ನಂತರ, 2011 ರಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ: IND vs PAK: 3 ಶ್ರೇಷ್ಠ ದಾಖಲೆಗಳ ಮೇಲೆ ರೋಹಿತ್, ಬುಮ್ರಾ ಕಣ್ಣು

ಐಸಿಸಿ ವಿಶ್ವಕಪ್‌’ನಲ್ಲಿ ದಕ್ಷಿಣ ಆಫ್ರಿಕಾ ಪರ 39 ವಿಕೆಟ್‌’ಗಳನ್ನು ಪಡೆದ ಏಕೈಕ ಕ್ರಿಕೆಟಿಗ ಇಮ್ರಾನ್ ತಾಹಿರ್. ಇಮ್ರಾನ್ ತಾಹಿರ್ ದಕ್ಷಿಣ ಆಫ್ರಿಕಾ ಪರ 20 ಟೆಸ್ಟ್, 107 ODI ಮತ್ತು 38 T20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಕ್ರಮವಾಗಿ 57, 173 ಮತ್ತು 63 ವಿಕೆಟ್’ಗಳನ್ನು ಪಡೆದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News