Big Records in IND vs PAK: ಏಷ್ಯಾ ಕಪ್ ಹೈ ವೋಲ್ಟೇಜ್ ಪಂದ್ಯವು ಭಾರತ ಮತ್ತು ಪಾಕಿಸ್ತಾನ ನಡುವೆ ಇಂದು ಅಂದರೆ ಸೆಪ್ಟೆಂಬರ್ 2 ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ. ಟೀಂ ಇಂಡಿಯಾದ ಕಮಾಂಡ್ ಓಪನರ್ ರೋಹಿತ್ ಶರ್ಮಾ ಅವರಲ್ಲಿದ್ದರೆ, ಪಾಕಿಸ್ತಾನದ ನಾಯಕತ್ವವನ್ನು ಬಾಬರ್ ಅಜಮ್ ನಿರ್ವಹಿಸುತ್ತಿದ್ದಾರೆ. ಈ ಪಂದ್ಯದಲ್ಲಿ ಒಂದಲ್ಲ ಮೂರು ಮೆಗಾ ದಾಖಲೆಗಳು ಗಮನ ಸೆಳೆಯಲಿವೆ.
ಇದನ್ನೂ ಓದಿ: ಯಶ್ ಇನ್‌ಸ್ಟಾದಲ್ಲಿ ಫಾಲೋ ಮಾಡುವ ಆ ಇಬ್ಬರು ಸ್ಪೆಷಲ್ ವ್ಯಕ್ತಿಗಳು ಇವರು
ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ತಂಡವು 2023 ರ ಏಷ್ಯಾ ಕಪ್ ಅನ್ನು ಗೆಲುವಿನೊಂದಿಗೆ ಪ್ರಾರಂಭಿಸಿತು. ಮುಲ್ತಾನ್ ನಲ್ಲಿ ನಡೆದ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ಶಿಶು ನೇಪಾಳವನ್ನು 238 ರನ್ ಗಳ ಬೃಹತ್ ಅಂತರದಿಂದ ಸೋಲಿಸಿತು. ಇದು ಏಕದಿನ ಮಾದರಿಯಲ್ಲಿ ತವರಿನಲ್ಲಿ ಪಾಕಿಸ್ತಾನ ಸಾಧಿಸಿದ ಅತಿ ದೊಡ್ಡ ಗೆಲುವಾಗಿದೆ. ಇದೀಗ ಪಾಕಿಸ್ತಾನದ ಮುಂದೆ ಭಾರತಕ್ಕೆ ಕಠಿಣ ಸವಾಲು ಎದುರಾಗಲಿದೆ. ಭಾರತ ಈ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದೊಂದಿಗೆ ತನ್ನ ಅಭಿಯಾನ ಆರಂಭಿಸಲಿದೆ.
ಮುರಿಯುವುದೇ ಶತಕಗಳ ದಾಖಲೆ?
ಭಾರತ ಮತ್ತು ಪಾಕಿಸ್ತಾನ ನಡುವಿನ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳ ವಿಷಯದಲ್ಲಿ ಶ್ರೇಷ್ಠ ಸಚಿನ್ ತೆಂಡೂಲ್ಕರ್ ಮುಂಚೂಣಿಯಲ್ಲಿದ್ದಾರೆ. ಸಚಿನ್ ಪಾಕಿಸ್ತಾನ ವಿರುದ್ಧ 5 ಏಕದಿನ ಶತಕ ಬಾರಿಸಿದ್ದಾರೆ. ಪಾಕಿಸ್ತಾನದ ಸಲ್ಮಾನ್ ಬಟ್ ಕೂಡ ಅಷ್ಟೇ ಶತಕ ಬಾರಿಸಿದ್ದಾರೆ. ಎರಡನೇ ಸ್ಥಾನದಲ್ಲಿ 3 ಆಟಗಾರರು ತಲಾ 4 ಶತಕಗಳನ್ನು ಬಾರಿಸಿದ್ದಾರೆ. ಸಚಿನ್ ಹೊರತುಪಡಿಸಿ, ಪಾಕಿಸ್ತಾನ ವಿರುದ್ಧದ ಏಕದಿನ ಪಂದ್ಯಗಳಲ್ಲಿ 2 ಶತಕಗಳಿಗಿಂತ ಹೆಚ್ಚು ಶತಕಗಳನ್ನು ಗಳಿಸಲು ಯಾವುದೇ ಭಾರತೀಯರಿಗೆ ಸಾಧ್ಯವಾಗಿಲ್ಲ. ಪಾಕಿಸ್ತಾನ ವಿರುದ್ಧದ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಲಾ 2 ಶತಕ ಸಿಡಿಸಿದ್ದಾರೆ. ಇದೀಗ ಏಷ್ಯಾಕಪ್ ಪಂದ್ಯದಲ್ಲಿ ರೋಹಿತ್ ಅಥವಾ ವಿರಾಟ್ ಶತಕ ಪೂರೈಸಿದರೆ, ಸಚಿನ್ ನಂತರ ಏಕದಿನದಲ್ಲಿ ಪಾಕಿಸ್ತಾನ ವಿರುದ್ಧ 2 ಶತಕಗಳಿಗಿಂತ ಹೆಚ್ಚು ಶತಕ ಬಾರಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.
ಮಹೇಂದ್ರ ಸಿಂಗ್ ಧೋನಿ (ಎಂಎಸ್ ಧೋನಿ), ಸೌರವ್ ಗಂಗೂಲಿ, ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ಮೊಹಮ್ಮದ್ ಅಜರುದ್ದೀನ್ ಮತ್ತು ನವಜೋತ್ ಸಿಂಗ್ ಸಿಧು ಪಾಕಿಸ್ತಾನ ವಿರುದ್ಧ ತಲಾ 2 ಶತಕಗಳನ್ನು ಗಳಿಸಿದ್ದಾರೆ.
ಬುಮ್ರಾಗೆ ದಾಖಲೆ ಸೃಷ್ಟಿಯ ಅವಕಾಶ:
ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಕೂಡ ದೊಡ್ಡ ದಾಖಲೆ ಮಾಡುವ ಅವಕಾಶ ಹೊಂದಿದ್ದಾರೆ. ಬುಮ್ರಾ ಇತ್ತೀಚೆಗೆ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಮೈದಾನಕ್ಕೆ ಮರಳಿದ್ದರು. ಸುಮಾರು ಒಂದು ವರ್ಷದಿಂದ ದೂರ ಉಳಿದಿದ್ದ ಬುಮ್ರಾ ನಾಯಕನಾಗಿ ಕಣಕ್ಕಿಳಿದಿದ್ದರು.
ಪಾಕಿಸ್ತಾನದ ವಿರುದ್ಧದ ಏಕದಿನ ಏಷ್ಯಾಕಪ್’ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರಲ್ಲಿ ಇದುವರೆಗೆ 4 ಪಂದ್ಯಗಳಲ್ಲಿ 15 ವಿಕೆಟ್’ಗಳನ್ನು ಪಡೆದಿರುವ ಶ್ರೀಲಂಕಾದ ಲಸಿತ್ ಮಾಲಿಂಗ ಅಗ್ರಸ್ಥಾನದಲ್ಲಿದ್ದಾರೆ. ಹಿರಿಯ ಸ್ಪಿನ್ನರ್ ಅನಿಲ್ ಕುಂಬ್ಳೆ (4 ಪಂದ್ಯಗಳಲ್ಲಿ 7 ವಿಕೆಟ್) ಪಾಕಿಸ್ತಾನ ವಿರುದ್ಧದ ಏಕದಿನ ಏಷ್ಯಾಕಪ್’ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಆಟಗಾರ. ಸಕ್ರಿಯ ಆಟಗಾರರಲ್ಲಿ ಬುಮ್ರಾ (2 ಪಂದ್ಯಗಳಲ್ಲಿ 4 ವಿಕೆಟ್) ಮಾತ್ರ ಇದ್ದಾರೆ. ಬುಮ್ರಾ ಇನ್ನೂ 4 ವಿಕೆಟ್ ಪಡೆದರೆ ಕುಂಬ್ಳೆ ದಾಖಲೆ ಮುರಿಯಲಿದ್ದಾರೆ.
ಇದನ್ನೂ ಓದಿ: ಮಾಲ್ಡೀವ್ಸ್‌ನಲ್ಲಿ ಮಿಲ್ಕಿ ಬ್ಯೂಟಿ ತಮ್ಮನ್ನಾ ಮಸ್ತಿ..! ಫೋಟೋಸ್ ನೋಡಿ
ಗಂಗೂಲಿ ದಾಖಲೆ ಮೇಲೆ ಕಣ್ಣು:
ಇದಲ್ಲದೇ ಮಾಜಿ ನಾಯಕ ಸೌರವ್ ಗಂಗೂಲಿ ದಾಖಲೆ ಕೂಡ ಮುರಿಯುವ ಹಂತದಲ್ಲಿದೆ. ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಪಂದ್ಯದಲ್ಲಿ ರೋಹಿತ್ ಶತಕ ಪೂರೈಸಿದರೆ, ಏಕದಿನ ಏಷ್ಯಾಕಪ್’ನಲ್ಲಿ ನಾಯಕನಾಗಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಗಂಗೂಲಿಯನ್ನು ಹಿಂದಿಕ್ಕಲಿದ್ದಾರೆ. ನಾಯಕನಾಗಿ ಧೋನಿ ಏಷ್ಯಾಕಪ್’ನಲ್ಲಿ 14 ಪಂದ್ಯಗಳಲ್ಲಿ 579 ರನ್ ಗಳಿಸಿದ್ದರೆ, ಗಂಗೂಲಿ 9 ಪಂದ್ಯಗಳಲ್ಲಿ 400 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ ಇದುವರೆಗೆ 5 ಪಂದ್ಯಗಳಲ್ಲಿ 317 ರನ್ ಗಳಿಸಿದ್ದಾರೆ. ರೋಹಿತ್ ಇನ್ನೂ 84 ರನ್ ಗಳಿಸಿದರೆ ಗಂಗೂಲಿಯನ್ನು ಹಿಂದಿಕ್ಕಲಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.