ODI World Cup 2023: ODI ವಿಶ್ವಕಪ್ ಮುಂದಿನ ತಿಂಗಳು ಅಕ್ಟೋಬರ್ 5 ರಿಂದ ಪ್ರಾರಂಭವಾಗಲಿದ್ದು, ಭಾರತವು ಆತಿಥ್ಯ ವಹಿಸಲಿದೆ. ಸದ್ಯ ಈ ಬಾರಿಯ ಐಸಿಸಿ ಟೂರ್ನಿಗೆ ಎಲ್ಲಾ ತಂಡಗಳು ತಯಾರಿಯಲ್ಲಿ ನಿರತವಾಗಿವೆ. ಭಾರತ ತಂಡ ಆಸ್ಟ್ರೇಲಿಯದೊಂದಿಗೆ ತನ್ನ ಆತಿಥೇಯ ಏಕದಿನ ಸರಣಿಯನ್ನು ಆಡುತ್ತಿದೆ. ಆದರೆ ಈ ಎಲ್ಲದರ ಮಧ್ಯೆ ಶ್ರೀಲಂಕಾ ಪಾಳಯದ ಇಬ್ಬರು ಕ್ರಿಕೆಟಿಗರು ಸೇರಿ ಒಟ್ಟು 11 ಆಟಗಾರರು ಇಡೀ ಟೂರ್ನಿಯಿಂದ ಹೊರಗುಳಿದಿದ್ದಾರೆ.
ಇದನ್ನೂ ಓದಿ: ಬಲಶಾಲಿ ಶನಿಯಿಂದ ಬೆಳಗಲಿದೆ ಈ ರಾಶಿಯವರ ಜೀವನ! 2027ರವರೆಗೆ ಉಜ್ವಲ ಭವಿಷ್ಯ-ಕೋಟ್ಯಾಧಿಪತಿ ಸುಯೋಗ
ಶ್ರೀಲಂಕಾದ ಆಲ್ ರೌಂಡರ್ ವನಿಂದು ಹಸರಂಗಾ ಮತ್ತು ದುಷ್ಮಂತ ಚಮೀರ ಗಾಯದಿಂದ ಬಳಲುತ್ತಿದ್ದು, 2023ರ ODI ವಿಶ್ವಕಪ್’ನಿಂದ ಹೊರಗುಳಿದಿದ್ದಾರೆ. ಮಾಧ್ಯಮ ವರದಿಯ ಪ್ರಕಾರ, ಭಾರತದಲ್ಲಿ ನಡೆಯಲಿರುವ ಈ ಐಸಿಸಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ವನಿಂದು ಹಸರಂಗಾ ಮತ್ತು ದುಷ್ಮಂತ ಚಮೀರ ಭಾಗವಾಗಲು ಸಾಧ್ಯವಾಗುವುದಿಲ್ಲ. ಮಂಡಿರಜ್ಜು ಗಾಯದಿಂದಾಗಿ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ.
ಹಸರಂಗ ಅವರ ಬದಲಿ ಆಟಗಾರನನ್ನು ಘೋಷಿಸಲು ಶ್ರೀಲಂಕಾ ಕ್ರಿಕೆಟ್’ಗೆ ಇನ್ನೂ ನಾಲ್ಕು ದಿನಗಳಿವೆ. ವಿಶ್ವಕಪ್’ಗೆ ಅಂತಿಮ ತಂಡವನ್ನು ಸೆಪ್ಟೆಂಬರ್ 28 ರೊಳಗೆ ಸಲ್ಲಿಸಲು ಅವಕಾಶವಿದೆ.
ದಸುನ್ ಶನಕ ಶ್ರೀಲಂಕಾ ತಂಡದ ನಾಯಕತ್ವ ವಹಿಸಲಿದ್ದಾರೆ. ಅವರ ನಾಯಕತ್ವದಲ್ಲಿ ತಂಡವು ಏಷ್ಯಾಕಪ್-2023ರ ಫೈನಲ್’ವರೆಗೆ ಪ್ರಯಾಣಿಸಿತ್ತು. ಅಕ್ಟೋಬರ್ 7 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಾವಳಿಯಲ್ಲಿ ಶ್ರೀಲಂಕಾ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಇದಾದ ಬಳಿಕ ನವೆಂಬರ್ 2ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆತಿಥೇಯ ಭಾರತವನ್ನು ಎದುರಿಸಲಿದೆ.
11 ಆಟಗಾರರು ವಿಶ್ವಕಪ್’ನಿಂದ ಹೊರಕ್ಕೆ!
ಸದ್ಯ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಒಟ್ಟು 11 ಆಟಗಾರರು ವಿಶ್ವಕಪ್’ಗೆ ಅಲಭ್ಯವಾಗುತ್ತಿದ್ದಾರೆ. ಈ ಕೆಳಗೆ ಗಾಯಗೊಂಡಿರುವ ಆಟಗಾರರ ಪಟ್ಟಿಯನ್ನು ನೀಡಲಾಗಿದೆ.
- ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ)
- ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ ತಂಡದ ಆಟಗಾರ)
- ಮಿಚೆಲ್ ಸ್ಟಾರ್ಕ್: (ಆಸ್ಟ್ರೇಲಿಯಾ ವೇಗಿ)
- ಟಿಮ್ ಸೌಥಿ: (ನ್ಯೂಜಿಲೆಂಡ್ ಆಟಗಾರ)
- ಮಹೀಶ್ ತೀಕ್ಷಣ: (ಶ್ರೀಲಂಕಾದ ಸ್ಪಿನ್ನರ್)
- ದುಷ್ಮಂತ ಚಮೀರ: (ಶ್ರೀಲಂಕಾ ವೇಗಿ)
- ವನಿಂದು ಹಸರಂಗ: (ಶ್ರೀಲಂಕಾ ಆಲ್ ರೌಂಡರ್)
- ನಸೀಮ್ ಶಾ: (ಪಾಕಿಸ್ತಾನದ ವೇಗಿ)
- ಹ್ಯಾರಿಸ್ ರೌಫ್: (ಪಾಕ್ ತಂಡದ ವೇಗಿ)
- ಅನ್ರಿಕ್ ನೋಕಿಯ: (ಸೌತ್ ಆಫ್ರಿಕಾ ವೇಗಿ)
- ಅಕ್ಷರ್ ಪಟೇಲ್: (ಟೀಂ ಇಂಡಿಯಾ ಆಲ್ ರೌಂಡರ್)
ಇದನ್ನೂ ಓದಿ: Dina Bhavishya: ಈ ರಾಶಿಯವರಿಗೆ ಮಹಾದೇವನ ವಿಶೇಷ ಆಶೀರ್ವಾದದಿಂದ ಇಂದು ವ್ಯವಹಾರದಲ್ಲಿ ಗರಿಷ್ಠ ಲಾಭ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ