ಬೆಂಗಳೂರು: ನನಗೆ ಜಾತಿ ರಾಜಕಾರಣ ಗೊತ್ತಿಲ್ಲ. ಆದ ಕಾರಣ ನನ್ನ ಕ್ಷೇತ್ರದಲ್ಲಿ ಶೇ.99ರಷ್ಟು ಜನರ ಬೆಂಬಲ ಪಡೆದು ದಾಖಲೆ ಬರೆದಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ವಸಂತ ನಗರದಲ್ಲಿನ ಬಂಜಾರ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ನಾನು ಇದುವರೆಗೂ 9 ಚುನಾವಣೆಗಳನ್ನು ಎದುರಿಸಿ 8ರಲ್ಲಿ ಗೆದ್ದಿದ್ದೇನೆ. ಎಲ್ಲಾ ಸಮುದಾಯದವರು ನನ್ನ ಪರವಾಗಿ ನಿಂತ ಕಾರಣ 1.23 ಲಕ್ಷ ಮತಗಳನ್ನು ಪಡೆಯಲು ಕಾರಣವಾಯಿತು ಎಂದರು.
‘ನೀರಿನಿಂದ ಸ್ನಾನ ಮಾಡಿದವರು ಬಟ್ಟೆ ಬದಲಾಯಿಸುತ್ತಾರೆ, ಬೆವರಿನಿಂದ ಸ್ನಾನ ಮಾಡಿದವರು ಇತಿಹಾಸ ಬದಲಾಯಿಸುತ್ತಾರೆ’ ಎಂದು ಬಂಜಾರರ ಕುಲಗುರು ಸೇವಾಲಾಲ್ ಅವರು ಹೇಳಿದ್ದಾರೆ. ಅದರಂತೆ ನಮ್ಮ ಸರ್ಕಾರ ದುಡಿಯುವ ವರ್ಗಕ್ಕೆ ಗ್ಯಾರಂಟಿ ಯೋಜನೆಗಳನ್ನು ತಂದು ಗೌರವ ನೀಡಿದೆ, ಬದಲಾವಣೆ ತರಲು ಹೊರಟಿದೆ ಎಂದು ಹೇಳಿದರು. ಬಂಜಾರ ಸಮುದಾಯದ ಬದುಕು, ಬವಣೆ, ಸರಳ ಜೀವನವನ್ನು ಕಣ್ಣಾರೆ ಕಂಡಿದ್ದೇನೆ. ಬಂಜಾರ ಸಮುದಾಯ ಕಾಂಗ್ರೆಸ್ ಪಕ್ಷದ ಬೆನ್ನಿಗೆ ನಿಂತು ಅನೇಕ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳ ಗೆಲುವಿಗೆ ಕಾರಣರಾಗಿದ್ದೀರಿ, ನಿಮ್ಮ ಸಮುದಾಯದ ಏಳಿಗೆಗೆ ನಮ್ಮ ಸರ್ಕಾರ ಶ್ರಮಿಸುವುದು ಎಂದು ವಾಗ್ದಾನ ನೀಡಿದರು.
ಇದನ್ನೂ ಓದಿ: ಇದು ತುಘಲಕ್ ಸರ್ಕಾರ : ಶೋಭಾ ಕರಂದ್ಲಾಜೆ
‘ನಿಂಬೆಗಿಂ ಹುಳಿಯಿಲ್ಲ, ತುಂಬೆಗಿಂ ಕರಿದಿಲ್ಲ, ಶಂಬುಗಿಂ ದೇವರಿಲ್ಲ, ನಂಬಿಗೆಯಿಂದಧಿಕ ಗುಣವಿಲ್ಲ ದೈವವುಂ ಶುಭವಿಂದಿಲ್ಲ’ ಎಂದು ಸರ್ವಜ್ಞ ಹೇಳುತ್ತಾರೆ. ಅಂದರೆ ನಂಬಿಕೆಗಿಂತ ಹೆಚ್ಚು ದೇವರಿಲ್ಲ, ನನ್ನ ಅನುಭವದಲ್ಲಿ ಲಂಬಾಣಿ ಸಮುದಾಯ ನಂಬಿಕೆಗೆ, ದುಡಿಮೆಗೆ ಹೆಸರಾದವರು ಎಂದರು.
ರುದ್ರಪ್ಪ ಲಮಾಣಿ ಅವರ ಜೊತೆ ಕ್ಷೇತ್ರದಲ್ಲಿ ಸಂಚಾರ ಮಾಡಿದ್ದೇನೆ, ಲಂಬಾಣಿ ಸಮುದಾಯದ ಭೂಮಿ, ತಾಂಡಾಗಳ ಸಮಸ್ಯೆಗಳನ್ನು ಶ್ರೀಘ್ರ ಪರಿಹರಿಸಲಾಗುವುದು. ಕೆಲವೊಬ್ಬರು ಸಚಿವ ಸ್ಥಾನ ಸಿಗಲಿಲ್ಲವೆಂದು ಹೇಳುತ್ತಿದ್ದರು. ಒಂದಲ್ಲ ಒಂದು ದಿನ ಅವಕಾಶ ಮನೆ ಬಾಗಿಲಿಗೆ ಬರುತ್ತದೆ. ಭೀಮಾ ನಾಯ್ಕ್ ಅವರು ಸೋತರು ಸಚಿವ ಸ್ಥಾನಕ್ಕಿಂತ ದೊಡ್ಡ ಹುದ್ದೆಯನ್ನು ಕೊಟ್ಟಿದ್ದೇವೆ. ಸಮುದಾಯದ ಅಭಿವೃದ್ಧಿಗೆ ನಾವು ಜೊತೆಗಿರುತ್ತೇವೆ. ಡಾ.ಉಮೇಶ್ ಜಾದವ್ ಅವರು ಸ್ವಲ್ಪ ಯಾಮಾರಿದರು, ಇಲ್ಲದಿದ್ದರೆ ಒಳ್ಳೆ ಸ್ಥಾನದಲ್ಲಿ ಇರಬಹುದಿತ್ತು, ಈಗ ಆ ಚರ್ಚೆ ಬೇಡ ಎಂದು ಹೇಳಿದರು.
ಇದನ್ನೂ ಓದಿ: ಮದಗಜ ಕಾದಾಟ: ಎದುರಾಳಿಯ ದಂತ ಚುಚ್ಚಿ ಆನೆ ಸಾವು
ಮುಖ್ಯಮಂತ್ರಿಗಳು ಲಂಬಾಣಿ ಸಮುದಾಯಕ್ಕೆ ಪಿಎಸ್ಇ ಸದಸ್ಯ ಸ್ಥಾನ ನೀಡಬೇಕೆಂದು ತೀರ್ಮಾನ ಮಾಡಿದ್ದಾರೆ. ಹೆಚ್ಚಿನ ಜನರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ, ಕೆಲವರಿಗೆ ಮಾತ್ರ ಕೆಲಸ ಮಾಡುವ ಅವಕಾಶ ದೊರೆಯುತ್ತದೆ. ಯಾರಿಗೆ ದೊರೆಯುತ್ತದೆ ನೋಡೋಣ. ರಾಜಕಾರಣ ಮಾಡುವವರು ಮಾಡುತ್ತಿರುತ್ತಾರೆ. ಆದರೆ ನಾವು-ನೀವು ಒಟ್ಟಿಗೆ ಕೆಲಸ ಮಾಡಿದರೆ ಕರ್ನಾಟಕವನ್ನು ಅಭಿವೃದ್ಧಿ ಪಥದ ಕಡೆಗೆ ತೆಗೆದುಕೊಂಡು ಹೋಗಬಹುದು ಎಂದು ಮನವಿ ಮಾಡಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.