ಏಷ್ಯನ್ ಗೇಮ್ಸ್ 2023ರಲ್ಲಿ ಪದಕ ಗೆದ್ದ ಭಾರತೀಯ ಕ್ರೀಡಾಳುಗಳ ಸಂಪೂರ್ಣ ವಿವರ ಇಲ್ಲಿದೆ

medal list of India in Asian Games 2023: ಈ ಬಾರಿ 28 ಚಿನ್ನ, 38 ಬೆಳ್ಳಿ ಮತ್ತು 41 ಕಂಚಿನ ಪದಕಗಳನ್ನು ಭಾರತ ತನ್ನದಾಸಿಕೊಂಡಿದೆ. ಸದ್ಯ 2023ರ ಏಷ್ಯನ್‌ ಗೇಮ್ಸ್‌ ಪದಕ ಪಟ್ಟಿಯಲ್ಲಿ ಭಾರತವು 4ನೇ ಸ್ಥಾನಕ್ಕೇರಿದ್ದು, ಚೀನಾ, ಜಪಾನ್ ಮತ್ತು ಕೊರಿಯಾ ಮೊದಲ ಮೂರು ಸ್ಥಾನ ಪಡೆದುಕೊಂಡಿವೆ.

Written by - Bhavishya Shetty | Last Updated : Oct 8, 2023, 03:08 PM IST
    • ಚೀನಾದ ಹ್ಯಾಂಗ್‌’ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ 2023
    • ಭಾರತದ ಧ್ಯೇಯದಂತೆ ಈ ಬಾರಿ 100ಕ್ಕೂ ಹೆಚ್ಚು ಪದಕಗಳ ಗೆಲುವು
    • ಏಷ್ಯನ್‌ ಗೇಮ್ಸ್‌ ಪದಕ ಪಟ್ಟಿಯಲ್ಲಿ ಭಾರತಕ್ಕೆ 4ನೇ ಸ್ಥಾನ
ಏಷ್ಯನ್ ಗೇಮ್ಸ್ 2023ರಲ್ಲಿ ಪದಕ ಗೆದ್ದ ಭಾರತೀಯ ಕ್ರೀಡಾಳುಗಳ ಸಂಪೂರ್ಣ ವಿವರ ಇಲ್ಲಿದೆ title=
medal list of India in Asian Games 2023

medal list of India in Asian Games 2023: ಚೀನಾದ ಹ್ಯಾಂಗ್‌’ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ 2023ರಲ್ಲಿ ಭಾರತದ ಧ್ಯೇಯದಂತೆ ಈ ಬಾರಿ 28 ಚಿನ್ನ ಸೇರಿದಂತೆ ಒಟ್ಟು 107 ಪದಕಗಳನ್ನು ಗೆದ್ದುಕೊಂಡಿದೆ. ಈ ಐತಿಹಾಸಿಕ ಸಾಧನೆಯಿಂದಾಗಿ ಏಷ್ಯನ್‌ ಗೇಮ್ಸ್‌ ಇತಿಹಾಸದಲ್ಲೇ ಭಾರತ ಹೊಸ ಮೈಲಿಗಲ್ಲನ್ನು ತಲುಪಿದೆ.

ಈ ಬಾರಿ 28 ಚಿನ್ನ, 38 ಬೆಳ್ಳಿ ಮತ್ತು 41 ಕಂಚಿನ ಪದಕಗಳನ್ನು ಭಾರತ ತನ್ನದಾಸಿಕೊಂಡಿದೆ. ಸದ್ಯ 2023ರ ಏಷ್ಯನ್‌ ಗೇಮ್ಸ್‌ ಪದಕ ಪಟ್ಟಿಯಲ್ಲಿ ಭಾರತವು 4ನೇ ಸ್ಥಾನಕ್ಕೇರಿದ್ದು, ಚೀನಾ, ಜಪಾನ್ ಮತ್ತು ಕೊರಿಯಾ ಮೊದಲ ಮೂರು ಸ್ಥಾನ ಪಡೆದುಕೊಂಡಿವೆ.

ಇದನ್ನೂ ಓದಿ: ಪ್ರೇಮಂ 2 ಪ್ರೀತಿಯ ಕಥೆಯಲ್ಲಿ ಏರಿಳಿತಗಳು..!

ಪದಕ ಗೆದ್ದ ಭಾರತೀಯ ಕ್ರೀಡಾಳುಗಳ ಸಂಪೂರ್ಣ ವಿವರ:

ಬಿಲ್ಲುಗಾರಿಕೆ (Archery)

ಸಂಯುಕ್ತ ಪುರುಷರ ವೈಯಕ್ತಿಕ: ಓಜಸ್ ಡಿಯೋಟಾಲೆ- ಚಿನ್ನ, ಅಭಿಷೇಕ್ ವರ್ಮಾ- ಬೆಳ್ಳಿ

ಸಂಯುಕ್ತ ಮಹಿಳಾ ವೈಯಕ್ತಿಕ: ಜ್ಯೋತಿ ಸುರೇಖಾ ವೆನ್ನಂ- ಚಿನ್ನ, ಅದಿತಿ ಸ್ವಾಮಿ-ಕಂಚು

ಸಂಯುಕ್ತ ಪುರುಷರ ತಂಡ: ಚಿನ್ನ

ಸಂಯುಕ್ತ ಮಹಿಳಾ ತಂಡ: ಚಿನ್ನ

ಸಂಯುಕ್ತ ಮಿಶ್ರ ತಂಡ: ಚಿನ್ನ

ರಿಕರ್ವ್ ಪುರುಷರ ತಂಡ: ಬೆಳ್ಳಿ

ರಿಕರ್ವ್ ಮಹಿಳಾ ತಂಡ: ಕಂಚು

 

ಅಥ್ಲೆಟಿಕ್ಸ್

ಪುರುಷರ 3000ಮೀ ಸ್ಟೀಪಲ್‌ ಚೇಸ್: ಅವಿನಾಶ್ ಸೇಬಲ್- ಚಿನ್ನ

ಪುರುಷರ 4 x 400 ಮೀಟರ್ ರಿಲೇ: ಚಿನ್ನ

ಪುರುಷರ ಜಾವೆಲಿನ್ ಥ್ರೋ: ನೀರಜ್ ಚೋಪ್ರಾ ಚಿನ್ನ

ಪುರುಷರ ಶಾಟ್‌ಪುಟ್: ತಜಿಂದರ್‌ಪಾಲ್ ಸಿಂಗ್ ತೂರ್ - ಚಿನ್ನ

ಮಹಿಳೆಯರ 5000 ಮೀಟರ್‌ ಓಟ: ಪಾರುಲ್ ಚೌಧರಿ-ಚಿನ್ನ

ಮಹಿಳೆಯರ ಜಾವೆಲಿನ್ ಥ್ರೋ: ಅನ್ನು ರಾಣಿ-ಚಿನ್ನ

ಪುರುಷರ 10000 ಮೀಟರ್‌ ಓಟ: ಕಾರ್ತಿಕ್ ಕುಮಾರ್-ಬೆಳ್ಳಿ

ಪುರುಷರ 1500 ಮೀಟರ್‌ ಓಟ: ಅಜಯ್ ಕುಮಾರ್-ಬೆಳ್ಳಿ

ಪುರುಷರ 5000 ಮೀಟರ್‌ ಓಟ: ಅವಿನಾಶ್ ಸೇಬಲ್-ಬೆಳ್ಳಿ

ಪುರುಷರ 800 ಮೀಟರ್‌ ಓಟ: ಮೊಹಮ್ಮದ್ ಅಫ್ಸಲ್- ಬೆಳ್ಳಿ

ಪುರುಷರ ಡೆಕಾಥ್ಲಾನ್: ತೇಜಸ್ವಿನ್ ಶಂಕರ್-ಬೆಳ್ಳಿ

ಪುರುಷರ ಜಾವೆಲಿನ್ ಥ್ರೋ: ಕಿಶೋರ್ ಜೆನಾ- ಬೆಳ್ಳಿ

ಪುರುಷರ ಲಾಂಗ್ ಜಂಪ್: ಶ್ರೀಶಂಕರ್- ಬೆಳ್ಳಿ

ಮಹಿಳೆಯರ 100 ಮೀಟರ್‌ ಹರ್ಡಲ್ಸ್: ಜ್ಯೋತಿ ಯರ್ರಾಜಿ-ಬೆಳ್ಳಿ

ಮಹಿಳೆಯರ 1500 ಮೀಟರ್: ಹರ್ಮಿಲನ್ ಬೇನ್ಸ್-ಬೆಳ್ಳಿ

ಮಹಿಳೆಯರ 3000 ಮೀಟರ್ ಸ್ಟೀಪಲ್‌ಚೇಸ್: ಪಾರುಲ್ ಚೌಧರಿ-ಬೆಳ್ಳಿ

ಮಹಿಳೆಯರ 4x400ಮೀ ರಿಲೇ: ಬೆಳ್ಳಿ

ಮಹಿಳೆಯರ 800 ಮೀಟರ್: ಹರ್ಮಿಲನ್ ಬೇನ್ಸ್-ಬೆಳ್ಳಿ

ಮಹಿಳೆಯರ ಲಾಂಗ್ ಜಂಪ್: ಆನ್ಸಿ ಸೋಜನ್- ಬೆಳ್ಳಿ

 

4x400ಮೀ ಮಿಶ್ರ ರಿಲೇ: ಬೆಳ್ಳಿ

ಪುರುಷರ 10000 ಮೀಟರ್: ಗುಲ್ವೀರ್ ಸಿಂಗ್- ಕಂಚು

ಪುರುಷರ 1500 ಮೀಟರ್: ಜಿನ್ಸನ್ ಜಾನ್ಸನ್- ಕಂಚು

ಪುರುಷರ ಟ್ರಿಪಲ್ ಜಂಪ್: ಪ್ರವೀಣ್ ಚಿತ್ರವೇಲ್- ಕಂಚು

ಮಹಿಳೆಯರ 3000 ಮೀಟರ್ ಸ್ಟೀಪಲ್‌ಚೇಸ್: ಪ್ರೀತಿ ಲಂಬಾ- ಕಂಚು

ಮಹಿಳೆಯರ 400 ಮೀಟರ್ ಹರ್ಡಲ್ಸ್: ವಿತ್ಯಾ ರಾಮರಾಜ್- ಕಂಚು

ಮಹಿಳೆಯರ ಡಿಸ್ಕಸ್ ಥ್ರೋ: ಸೀಮಾ ಪುನಿಯಾ- ಕಂಚು

ಮಹಿಳೆಯರ ಹೆಪ್ಟಾಥ್ಲಾನ್: ನಂದಿನಿ ಅಗಸರ - ಕಂಚು

ಮಹಿಳೆಯರ ಶಾಟ್ ಪುಟ್: ಕಿರಣ್ ಬಲಿಯಾನ್- ಕಂಚು

35 ಕಿಮೀ ಓಟದ ನಡಿಗೆ ಮಿಶ್ರ ತಂಡ: ಕಂಚು

 

ಬ್ಯಾಡ್ಮಿಂಟನ್

ಪುರುಷರ ಡಬಲ್ಸ್: ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ- ಚಿನ್ನ

ಪುರುಷರ ತಂಡ: ಬೆಳ್ಳಿ

ಪುರುಷರ ಸಿಂಗಲ್ಸ್: ಪ್ರಣಯ್ ಕಂಚು

 

ಬಾಕ್ಸಿಂಗ್ (Boxing)

ಮಹಿಳೆಯರ 75 ಕೆಜಿ: ಲೊವ್ಲಿನಾ ಬೊರ್ಗೊಹೈನ್- ಕಂಚು

ಪುರುಷರ +92 ಕೆಜಿ: ನರೇಂದರ್- ಕಂಚು

ಮಹಿಳೆಯರ 45-50 ಕೆಜಿ: ನಿಖತ್ ಜರೀನ್- ಕಂಚು

ಮಹಿಳೆಯರ 50-54 ಕೆಜಿ: ಪ್ರೀತಿ- ಕಂಚು

ಮಹಿಳೆಯರ 54-57 ಕೆಜಿ: ಪರ್ವೀನ್- ಕಂಚು

 

ಬ್ರಿಡ್ಜ್‌

ಪುರುಷರ ತಂಡ: ಬೆಳ್ಳಿ

 

ಕ್ಯಾನೋ ಸ್ಪ್ರಿಂಟ್

ಪುರುಷರ ಕ್ಯಾನೋ ಡಬಲ್ 1000 ಮೀಟರ್: ಕಂಚು

ಚೆಸ್

ಪುರುಷರ ತಂಡ: ಬೆಳ್ಳಿ

ಮಹಿಳಾ ತಂಡ: ಬೆಳ್ಳಿ

 

ಕ್ರಿಕೆಟ್

ಪುರುಷರ ತಂಡ: ಚಿನ್ನ

ಮಹಿಳಾ ತಂಡ: ಚಿನ್ನ

 

ಕುದುರೆ ಸವಾರಿ

ಡ್ರೆಸ್ಸೇಜ್ ತಂಡ: ಚಿನ್ನ

ಡ್ರೆಸ್ಸೇಜ್: ಅನುಷ್ ಅಗರ್ವಾಲಾ- ಕಂಚು

 

ಗಾಲ್ಫ್

ಮಹಿಳೆಯರ ವೈಯಕ್ತಿಕ: ಬೆಳ್ಳಿ- ಅದಿತಿ ಅಶೋಕ್

 

ಹಾಕಿ

ಪುರುಷರ ತಂಡ: ಚಿನ್ನ

ಮಹಿಳಾ ತಂಡ: ಕಂಚು

 

ಕಬಡ್ಡಿ

ಪುರುಷರ ತಂಡ: ಚಿನ್ನ

ಮಹಿಳಾ ತಂಡ: ಚಿನ್ನ

 

ರೋಲರ್ ಸ್ಕೇಟಿಂಗ್)

ಮಹಿಳೆಯರ ಸ್ಪೀಡ್ ಸ್ಕೇಟಿಂಗ್ 3000‌ ಮೀಟರ್ ರಿಲೇ ಓಟ: ಕಂಚು

ಪುರುಷರ ಸ್ಪೀಡ್ ಸ್ಕೇಟಿಂಗ್ 3000 ಮೀಟರ್ ರಿಲೇ ಓಟ: ಕಂಚು

 

ರೋಯಿಂಗ್‌

ಲೈಟ್‌’ವೈಟ್‌ ಪುರುಷರ ಡಬಲ್ ಸ್ಕಲ್ಸ್: ಬೆಳ್ಳಿ

ಪುರುಷರ ಎಂಟರ ತಂಡ: ಬೆಳ್ಳಿ

ಪುರುಷರ ನಾಲ್ಕರ ತಂಡ: ಕಂಚು

ಪುರುಷರ ಜೋಡಿ: ಕಂಚು

ಪುರುಷರ ಕ್ವಾಡ್ರುಪಲ್ ಸ್ಕಲ್ಸ್: ಕಂಚು

 

ಸೈಲಿಂಗ್

ಬಾಲಕಿಯರ ಡಿಂಗಿ ILCA 4: ಬೆಳ್ಳಿ - ನೇಹಾ ಠಾಕೂರ್

ಪುರುಷರ ಡಿಂಗಿ ILCA 7: ಕಂಚು - ವಿಷ್ಣು ಸರವಣನ್

ಪುರುಷರ ವಿಂಡ್‌ಸರ್ಫರ್ ಆರ್‌ಎಸ್ -ಎಕ್ಸ್: ಕಂಚು - ಇಯಾಬಾದ್ ಅಲಿ

 

ಸೆಪಕ್ಟಕ್ರಾ

ಮಹಿಳೆಯರ ರೆಗು: ಕಂಚು

 

ಶೂಟಿಂಗ್

10 ಮೀ ಏರ್ ಪಿಸ್ತೂಲ್ ತಂಡ ಪುರುಷರು: ಚಿನ್ನ

10 ಮೀ ಏರ್ ರೈಫಲ್ ತಂಡ ಪುರುಷರು: ಚಿನ್ನ

50 ಮೀ ರೈಫಲ್ 3 ಸ್ಥಾನಗಳ ತಂಡ ಪುರುಷರು: ಚಿನ್ನ

 

ಟ್ರ್ಯಾಪ್ ಟೀಮ್ ಮೆನ್: ಚಿನ್ನ

10 ಮೀ ಏರ್ ಪಿಸ್ತೂಲ್ ಮಹಿಳೆಯರು: ಪಾಲಕ್ -ಚಿನ್ನ

25 ಮೀ ಪಿಸ್ತೂಲ್ ತಂಡ ಮಹಿಳೆಯರು: ಚಿನ್ನ

50 ಮೀ ರೈಫಲ್ 3 ಸ್ಥಾನಗಳು ಮಹಿಳೆಯರು: ಸಿಫ್ಟ್ ಕೌರ್ ಸಮ್ರಾ-ಚಿನ್ನ

50 ಮೀ ರೈಫಲ್ 3 ಸ್ಥಾನಗಳು ಪುರುಷರು: ಐಶ್ವರಿ ಪ್ರತಾಪ್ ಸಿಂಗ್ ತೋಮರ್- ಬೆಳ್ಳಿ

ಸ್ಕೀಟ್ ಮೆನ್: ಬೆಳ್ಳಿ - ಅನಂತ್ ಜೀತ್ ಸಿಂಗ್

10 ಮೀ ಏರ್ ಪಿಸ್ತೂಲ್ ತಂಡ ಮಹಿಳೆಯರು: ಬೆಳ್ಳಿ

10 ಮೀ ಏರ್ ಪಿಸ್ತೂಲ್ ಮಹಿಳೆಯರು: ಇಶಾ ಸಿಂಗ್-ಬೆಳ್ಳಿ

10 ಮೀ ಏರ್ ರೈಫಲ್ ತಂಡ ಮಹಿಳೆಯರು: ಬೆಳ್ಳಿ

25 ಮೀ ಪಿಸ್ತೂಲ್ ಮಹಿಳೆಯರು: ಇಶಾ ಸಿಂಗ್-ಬೆಳ್ಳಿ

50 ಮೀ ರೈಫಲ್ 3 ಸ್ಥಾನಗಳ ತಂಡ ಮಹಿಳೆಯರು: ಬೆಳ್ಳಿ

ಟ್ರ್ಯಾಪ್ ಟೀಮ್ ಮಹಿಳೆಯರು: ಬೆಳ್ಳಿ

10 ಮೀ ಏರ್ ಪಿಸ್ತೂಲ್ ಮಿಶ್ರ ತಂಡ: ಬೆಳ್ಳಿ

10 ಮೀ ಏರ್ ರೈಫಲ್ ಪುರುಷರು: ಐಶ್ವರಿ ಪ್ರತಾಪ್ ಸಿಂಗ್ ತೋಮರ್- ಕಂಚ

25 ಮೀ ರ್ಯಾಪಿಡ್ ಫೈರ್ ಪಿಸ್ತೂಲ್ ತಂಡ ಪುರುಷರು: ಕಂಚು

 

ಸ್ಕೀಟ್ ಪುರುಷರ ತಂಡ: ಕಂಚು

ಟ್ರ್ಯಾಪ್ ಮೆನ್: ಚೆನೈ ಕೆಡಿ- ಕಂಚು

10 ಮೀ ಏರ್ ರೈಫಲ್ ಮಹಿಳೆಯರು: ರಮಿತಾ- ಕಂಚು

50 ಮೀ ರೈಫಲ್ 3 ಸ್ಥಾನಗಳು: ಆಶಿ ಚೌಸ್ಕಿ- ಕಂಚು

 

ಸ್ಕ್ವ್ಯಾಷ್

ಪುರುಷರ ತಂಡ: ಚಿನ್ನ

ಮಿಶ್ರ ಡಬಲ್ಸ್: ಚಿನ್ನ

ಪುರುಷರ ಸಿಂಗಲ್ಸ್: ಸೌರವ್ ಘೋಸಲ್- ಬೆಳ್ಳಿ

ಮಹಿಳಾ ತಂಡ: ಕಂಚು

ಮಿಶ್ರ ಡಬಲ್ಸ್: ಕಂಚು

ಟೇಬಲ್ ಟೆನ್ನಿಸ್

ಮಹಿಳೆಯರ ಡಬಲ್ಸ್: ಕಂಚು

 

ಟೆನಿಸ್

ಮಿಶ್ರ ಡಬಲ್ಸ್: ಚಿನ್ನ

ಪುರುಷರ ಡಬಲ್ಸ್: ಬೆಳ್ಳಿ

 

ಕುಸ್ತಿ

ಪುರುಷರ ಫ್ರೀಸ್ಟೈಲ್ 86 ಕೆಜಿ: ದೀಪಕ್ ಪುನಿಯಾ- ಬೆಳ್ಳಿ

ಪುರುಷರ ಫ್ರೀಸ್ಟೈಲ್ 57 ಕೆಜಿ: ಅಮನ್- ಕಂಚು

ಪುರುಷರ ಗ್ರೀಕೋ-ರೋಮನ್ 87 ಕೆಜಿ: ಸುನಿಲ್ ಕುಮಾರ್- ಕಂಚು

ಮಹಿಳೆಯರ ಫ್ರೀಸ್ಟೈಲ್ 53 ಕೆಜಿ: ಆಂಟಿಮ್ ಪಂಗಲ್- ಕಂಚು

ಮಹಿಳೆಯರ ಫ್ರೀಸ್ಟೈಲ್ 62 ಕೆಜಿ: ಸೋನಂ- ಕಂಚು

ಮಹಿಳೆಯರ ಫ್ರೀಸ್ಟೈಲ್ 76 ಕೆಜಿ: ಕಿರಣ್- ಕಂಚು

ವುಶು

ಮಹಿಳೆಯರ 60 ಕೆಜಿ: ರೋಶಿಬಿನಾ ದೇವಿ- ಬೆಳ್ಳಿ

ಇದನ್ನೂ ಓದಿ: ತೆಂಗಿನೆಣ್ಣೆ ಜೊತೆ ಈ ಗಿಡದ ಎಲೆಯನ್ನು ಬೆರೆಸಿ ತಲೆಗೆ ಹಚ್ಚಿ… ನಿಮಿಷಗಳಲ್ಲಿ ಶಾಶ್ವತವಾಗಿ ಕಪ್ಪಾಗುವುದು ಬಿಳಿಕೂದಲು!

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News