ಒಂದೇ ತಿಂಗಳು ಬರುವ ಗ್ಯಾಸ್ ಎರಡು ತಿಂಗಳವರೆಗೆ ಬಳಸಬೇಕೇ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

Kitchen Hacks: ಗ್ಯಾಸ್ ಬಳಕೆ ಮಾಡುವ ಮುನ್ನ ಅದರ ಬರ್ನರ್‌ ಶುಚಿಯಾಗಿಟ್ಟುಕೊಳ್ಳಿ. ಒಂದು ವೇಳೆ ಶುಚಿ ಮಾಡದೆ ಇದ್ದರೆ ಪೈಪ್ ಮೂಲಕ  ಗ್ಯಾಸ್ ಸರಿಯಾಗಿ ಬರದೇ ಬ್ಲಾಕ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಎರಡು ವಾರಕ್ಕೆ ಒಮ್ಮೆಯಾದರೂ ಗ್ಯಾಸ್ ಬರ್ನರ್‌ ಅನ್ನು ಸ್ವಚ್ಛ ಮಾಡುವುದು ಒಳ್ಳೆಯದು.

Written by - Bhavishya Shetty | Last Updated : Oct 9, 2023, 04:49 PM IST
    • ಸದ್ಯ ದಿನೇ ದಿನೇ ದಿನಬಳಕೆ ವಸ್ತುಗಳ ಬೆಲೆ ಗಗನಮುಖಿಯಾಗುತ್ತಿದೆ
    • ಗ್ಯಾಸ್ ಸಿಲಿಂಡರ್ ಬೆಲೆಯಲ್ಲೂ ತೀರ ಬೆಲೆ ಏರಿಕೆಯಾಗುತ್ತಿದೆ
    • ಗ್ಯಾಸ್ ಬಳಕೆ ಮಾಡುವ ಮುನ್ನ ಅದರ ಬರ್ನರ್‌ ಶುಚಿಯಾಗಿಟ್ಟುಕೊಳ್ಳಿ
ಒಂದೇ ತಿಂಗಳು ಬರುವ ಗ್ಯಾಸ್ ಎರಡು ತಿಂಗಳವರೆಗೆ ಬಳಸಬೇಕೇ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ title=
Gas Usage Tips

Kitchen Hacks: ಸದ್ಯ ದಿನೇ ದಿನೇ ದಿನಬಳಕೆ ವಸ್ತುಗಳ ಬೆಲೆ ಗಗನಮುಖಿಯಾಗುತ್ತಿದೆ. ತಿನಿಸುಗಳಿಂದ ಹಿಡಿದು ಅದನ್ನು ಬೇಯಿಸಲು ಬಳಸುವ ಗ್ಯಾಸ್ ಸಿಲಿಂಡರ್ ಬೆಲೆಯಲ್ಲೂ ತೀರ ಬೆಲೆ ಏರಿಕೆಯಾಗುತ್ತಿದೆ. ಈ ಹೊರೆಯನ್ನು ಕಡಿಮೆ ಮಾಡುವ ಸಲುವಾಗಿ ನಾವಿಂದು ನಿಮಗೆ ಸುಲಭ ಸಲಹೆಯನ್ನು ನೀಡಲಿದ್ದೇವೆ.

ಇದನ್ನೂ ಓದಿ: CWC 2023: ಆರೆಂಜ್ ಜರ್ಸಿಯಲ್ಲಿ ಪಂದ್ಯ ಆಡಲಿದೆ ಭಾರತ...! ಯಾವ ತಂಡದ ವಿರುದ್ಧ? ಇಲ್ಲಿದೆ ಮಾಹಿತಿ   

ಗ್ಯಾಸ್ ಬಳಕೆ ಮಾಡುವ ಮುನ್ನ ಅದರ ಬರ್ನರ್‌ ಶುಚಿಯಾಗಿಟ್ಟುಕೊಳ್ಳಿ. ಒಂದು ವೇಳೆ ಶುಚಿ ಮಾಡದೆ ಇದ್ದರೆ ಪೈಪ್ ಮೂಲಕ  ಗ್ಯಾಸ್ ಸರಿಯಾಗಿ ಬರದೇ ಬ್ಲಾಕ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಎರಡು ವಾರಕ್ಕೆ ಒಮ್ಮೆಯಾದರೂ ಗ್ಯಾಸ್ ಬರ್ನರ್‌ ಅನ್ನು ಸ್ವಚ್ಛ ಮಾಡುವುದು ಒಳ್ಳೆಯದು.

ಇನ್ನು ಕೆಲವೊಂದು ಧಾನ್ಯಗಳನ್ನು ಬೇಯಿಸುವಾಗ ಎಚ್ಚರ ವಹಿಸಿ, ಉದಾಹರಣೆಗೆ ಅಕ್ಕಿ ಬೇಯಿಸಲು ತುಂಬಾ ಸಮಯ ಬೇಕಾಗುತ್ತದೆ. ಹೀಗಾಗಿ ಕೆಲವೊಂದು ಧಾನ್ಯಗಳು ಅಥವಾ ಅಕ್ಕಿಯನ್ನು ಮುಂಚಿತವಾಗಿ ನೀರಿನಲ್ಲಿ ನೆನೆಸಿಟ್ಟರೆ, ಇದರಿಂದ ಗ್ಯಾಸ್ ಉಳಿತಾಯ ಮಾಡಬಹುದು.

ಕುಕ್ಕರ್, ಪಾತ್ರೆ ಇತ್ಯಾದಿಗಳನ್ನು ತೊಳೆದು ನೇರವಾಗಿ ಅಡುಗೆ ಮಾಡಿದರೆ ಗ್ಯಾಸ್ ಹೆಚ್ಚು ಖಾಲಿಯಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಹೌದು… ತಕ್ಷಣ ಪಾತ್ರೆಗಳನ್ನು ತೊಳೆದು ಒಲೆಯ ಮೇಲೆ ಇಟ್ಟರೆ, ಆ ಪಾತ್ರೆ ಬಿಸಿಯಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ, ಇದರಿಂದ ಗ್ಯಾಸ್ ವೆಚ್ಚವಾಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ:ನವೆಂಬರ್’ನಲ್ಲಿ ಈ ರಾಶಿಯವರ ಕದ ತಟ್ಟಲಿದೆ ಅದೃಷ್ಟ: ಸುಖದ ಸುಪ್ಪತ್ತಿಗೆ, ಬರಿದಾಗದಷ್ಟು ಸಂಪತ್ತು ಕರುಣಿಸುವಳು ತಾಯಿ ಮಹಾಲಕ್ಷ್ಮೀ

ಇನ್ನು ಅನೇಕ ಜನರು ಕುಕ್ಕರ್ ಬದಲಿಗೆ ಇತರ ಪಾತ್ರೆಗಳನ್ನು ಬಳಸುತ್ತಾರೆ. ಆದರೆ ಗ್ಯಾಸ್ ಬಳಸಿ ಅಡುಗೆ ಮಾಡುವವರು ಹೆಚ್ಚಾಗಿ ಪ್ರೆಶರ್ ಕುಕ್ಕರ್‍ ಬಳಸಿದರೆ ಉತ್ತಮ. ಇದರಿಂದ ಗ್ಯಾಸ್ ಖರ್ಚು ಕಡಿಮೆ ಬಳಕೆ ಮಾಡಬಹುದು.  

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News