1 ಎಸೆತದಲ್ಲಿ 13 ರನ್…! ಕ್ರಿಕೆಟ್ ಲೋಕದಲ್ಲೇ ಅಸಾಧ್ಯ ದಾಖಲೆ ಬರೆದು ಅಬ್ಬರಿಸಿದ ಸ್ಟಾರ್ ದಾಂಡಿಗ- ಹೇಗೆ ಗೊತ್ತಾ?

Mitchell Santner impossible achievement: ನ್ಯೂಜಿಲೆಂಡ್ ಇನ್ನಿಂಗ್ಸ್‌ನ ಅಂತಿಮ ಎಸೆತದಲ್ಲಿ ಈ ದಾಖಲೆ ನಿರ್ಮಾಣವಾಗಿದೆ. ಬಾಸ್ ಡಿ ಲೀಡೆ ಎಸೆತದಲ್ಲಿ ನ್ಯೂಜಿಲೆಂಡ್’ನ ಕ್ರಿಕೆಟಿಗ ಮಿಚೆಲ್ ಸ್ಯಾಂಟ್ನರ್ 13 ರನ್ ಕಲೆ ಹಾಕಿದ್ದಾರೆ. ಅಷ್ಟಕ್ಕೂ ಅದ್ಹೇಗೆ ಸಾಧ್ಯ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಸಂಪೂರ್ಣ ವಿವರ.

Written by - Bhavishya Shetty | Last Updated : Oct 10, 2023, 06:13 PM IST
    • ನ್ಯೂಜಿಲೆಂಡ್ ಮತ್ತು ನೆದರ್ಲ್ಯಾಂಡ್ಸ್ ನಡುವೆ ವಿಶ್ವಕಪ್ 2023 ಪಂದ್ಯ
    • ಒಂದೇ ಎಸೆತದಲ್ಲಿ 13 ರನ್ ಗಳಿಸಿದ ಆಟಗಾರ
    • ಅಸಾಧ್ಯವಾದ ಸಾಧನೆಯನ್ನು ಓರ್ವ ಕ್ರಿಕೆಟಿಗ ಮಾಡಿದ್ದಾರೆ.
1 ಎಸೆತದಲ್ಲಿ 13 ರನ್…! ಕ್ರಿಕೆಟ್ ಲೋಕದಲ್ಲೇ ಅಸಾಧ್ಯ ದಾಖಲೆ ಬರೆದು ಅಬ್ಬರಿಸಿದ ಸ್ಟಾರ್ ದಾಂಡಿಗ- ಹೇಗೆ ಗೊತ್ತಾ? title=
Mitchell Santner

Mitchell Santner impossible achievement: ಕಳೆದ ದಿನ ಅಂದರೆ ಅಕ್ಟೋಬರ್ 10ರಂದು ನ್ಯೂಜಿಲೆಂಡ್ ಮತ್ತು ನೆದರ್ಲ್ಯಾಂಡ್ಸ್ ನಡುವೆ ವಿಶ್ವಕಪ್ 2023 ಪಂದ್ಯ ನಡೆದಿತ್ತು. ಈ ವೇಳೆ ಒಂದೇ ಎಸೆತದಲ್ಲಿ 13 ರನ್ ಗಳಿಸಿ ಅಸಾಧ್ಯವಾದ ಸಾಧನೆಯನ್ನು ಓರ್ವ ಕ್ರಿಕೆಟಿಗ ಮಾಡಿದ್ದಾರೆ.

ಇದನ್ನೂ ಓದಿ: ENG vs BAN: ವಿಶ್ವಕಪ್‌ನಲ್ಲಿ ಬಾಂಗ್ಲಾ ವಿರುದ್ಧ ಶತಕ ಬಾರಿಸಿದ ಡೇವಿಡ್ ಮಲನ್...!   

ನ್ಯೂಜಿಲೆಂಡ್ ಇನ್ನಿಂಗ್ಸ್‌ನ ಅಂತಿಮ ಎಸೆತದಲ್ಲಿ ಈ ದಾಖಲೆ ನಿರ್ಮಾಣವಾಗಿದೆ. ಬಾಸ್ ಡಿ ಲೀಡೆ ಎಸೆತದಲ್ಲಿ ನ್ಯೂಜಿಲೆಂಡ್’ನ ಕ್ರಿಕೆಟಿಗ ಮಿಚೆಲ್ ಸ್ಯಾಂಟ್ನರ್ 13 ರನ್ ಕಲೆ ಹಾಕಿದ್ದಾರೆ. ಅಷ್ಟಕ್ಕೂ ಅದ್ಹೇಗೆ ಸಾಧ್ಯ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಸಂಪೂರ್ಣ ವಿವರ.

ಇನ್ನಿಂಗ್ಸ್‌’ನಲ್ಲಿ ಕೇವಲ ಒಂದು ಬಾಲ್ ಉಳಿದಿರುವಾಗ, ಡಿ ಲೀಡೆ ಫುಲ್ ಟಾಸ್ ಬೌಲಿಂಗ್ ಮಾಡಿದರು. ಸ್ಯಾಂಟ್ನರ್ ಅದನ್ನು ಲಾಂಗ್-ಆನ್‌’ನಲ್ಲಿ ಸಿಕ್ಸರ್‌ ಬಾರಿಸಿದರು. ಆದರೆ ಈ ಎಸೆತವನ್ನು ಅಂಪೈರ್ ತ್ವರಿತವಾಗಿ ನೋ-ಬಾಲ್ ಎಂದು ನಿರ್ಣಯಿಸಿದರು. ಈ ಮೂಲಕ ನ್ಯೂಜಿಲೆಂಡ್‌’ಗೆ ಫ್ರೀ ಹಿಟ್ ಸಿಕ್ಕಿತು. ಸ್ಯಾಂಟ್ನರ್ ಮತ್ತೊಮ್ಮೆ ಸ್ಟ್ರೈಕ್‌’ನಲ್ಲಿದ್ದರು. ಮತ್ತೊಂದು ಬಾರಿ ಎಸೆದ ಬಾಲ್ ಕೂಡ ನೋ ಬಾಲ್ ಆಗಿತ್ತು. ಈ ಬಾಲ್ ಮೂಲಕ ಸ್ಯಾಂಟ್ನರ್ ಸಿಕ್ಸರ್ ಬಾರಿಸಿದ್ದರು. ನಂತರದ ಎಸೆತದಲ್ಲಿ ಒಂದು ರನ್ ಕಲೆ ಹಾಕಿ ಒಟ್ಟು 13 ರನ್ ಗಳಿಸಿದರು.

 

 

ಸೋಮವಾರ ಹೈದರಾಬಾದ್‌’ನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಮಿಚೆಲ್ ಸ್ಯಾಂಟ್ನರ್ ಅವರ ಬಿರುಸಿನ ಮೂಲಕ ನ್ಯೂಜಿಲೆಂಡ್‌’ಗೆ ನೆದರ್ಲೆಂಡ್ಸ್ ವಿರುದ್ಧ 99 ರನ್‌’ಗಳ ಗೆಲುವು ಲಭಿಸಿತು.

ಇದನ್ನೂ ಓದಿ: ಆಸ್ಪತ್ರೆಯಿಂದ ಶುಭ್‌ಮನ್ ಗಿಲ್ ಡಿಸ್ಚಾರ್ಜ್: ಮುಂದಿನ ಪಂದ್ಯದಲ್ಲಿ  ಹಿಡಿಯಲಿದ್ದಾರಾ ಬ್ಯಾಟ್ ?

ಸ್ಲಾಗ್ ಓವರ್‌ಗಳಲ್ಲಿ ಸ್ಯಾಂಟ್ನರ್ ಎರಡು ಸಿಕ್ಸರ್ ಮತ್ತು ಮೂರು ಬೌಂಡರಿಗಳನ್ನು ಬಾರಿಸಿ ಮೊತ್ತವನ್ನು ಹೆಚ್ಚಿಸಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News