ಅರ್ಜುನ್ ಕಪೂರ್ ಹುಟ್ಟುಹಬ್ಬದಂದು ಪ್ರೀತಿಯ ಮುದ್ರೆ ಒತ್ತಿದ ಮಲೈಕಾ ಆರೋರಾ..!

ಹಲವು ಊಹಾಪೋಹಗಳಿಗೆ ಕಾರಣವಾಗಿದ್ದ ಅರ್ಜುನ್ ಕಪೂರ್ ಹಾಗೂ ಮಲೈಕಾ ಆರೋರಾ ನಡುವಿನ ಸಂಬಂಧಕ್ಕೆ ಈಗ ಅಧಿಕೃತ ಮುದ್ರೆ ಬಿದ್ದಿದೆ.

Last Updated : Jun 27, 2019, 03:37 PM IST
ಅರ್ಜುನ್ ಕಪೂರ್ ಹುಟ್ಟುಹಬ್ಬದಂದು ಪ್ರೀತಿಯ ಮುದ್ರೆ ಒತ್ತಿದ ಮಲೈಕಾ ಆರೋರಾ..!  title=
Photo courtesy: Instagram

ನವದೆಹಲಿ: ಹಲವು ಊಹಾಪೋಹಗಳಿಗೆ ಕಾರಣವಾಗಿದ್ದ ಅರ್ಜುನ್ ಕಪೂರ್ ಹಾಗೂ ಮಲೈಕಾ ಆರೋರಾ ನಡುವಿನ ಸಂಬಂಧಕ್ಕೆ ಈಗ ಅಧಿಕೃತ ಮುದ್ರೆ ಬಿದ್ದಿದೆ.

ಹೌದು, ಅದು ಹೇಗೆ ಗೊತ್ತಾ?...ಇನ್ಸ್ಟಾಗ್ರಾಂನಲ್ಲಿ ಸದಾ ಆಕ್ಟಿವ್ ಆಗಿರುವ ಮಲೈಕಾ ಆರೋರಾ ಈಗ 34ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅವರು ಇಬ್ಬರು ಜೊತೆಯಾಗಿರುವ ಫೋಟೋವೊಂದನ್ನು ಪೋಸ್ಟ್ ಮಾಡಿ ಹುಟ್ಟುಹಬ್ಬದ ಶುಭಾಶಯ ಕೋರುವುದರ ಮೂಲಕ  ತಮ್ಮ ಪ್ರೀತಿಯ ಕತೆಗೆ ಅಧಿಕೃತ ಮುದ್ರೆ ಒತ್ತಿದಂತಾಗಿದೆ.

 
 
 
 

 
 
 
 
 
 
 
 
 

Happy bday my crazy,insanely funny n amazing @arjunkapoor ... love n happiness always

A post shared by Malaika Arora (@malaikaaroraofficial) on

ಸದ್ಯ ಇಬ್ಬರು ನ್ಯೂಯಾರ್ಕ್ ನಲ್ಲಿ ರುವ ಜೋಡಿಗಳು ಫೋಟೋದಲ್ಲಿ  ಪರಸ್ಪರ ಕೈ ಹಿಡಿದುಕೊಂಡಿದ್ದಾರೆ. ಇನ್ಸ್ಟಾಪೋಸ್ಟ್ ನಲ್ಲಿ  '  ಕ್ರೇಜಿ, ಹಾಸ್ಯ ಹಾಗೂ ಅದ್ಬುತಗುಣವನ್ನು ಹೊಂದಿರುವ ನನ್ನ ಅರ್ಜುನ್ ಕಪೂರ್ ಗೆ ಹುಟ್ಟುಹಬ್ಬದ ಶುಭಾಶಯಗಳು' ಎಂದು ಶುಭಕೋರಿದ್ದಾರೆ. ಈ ಪೋಸ್ಟ್ ಶೇರ್ ಆದ ಕೆಲವೇ ಗಂಟೆಗಳಲ್ಲಿ ಭಾರಿ ವೈರಲ್ ಆಗಿದ್ದು, ಇದಕ್ಕೆ ಸಾಕಷ್ಟು ಜನರು ಟ್ರೋಲ್ ಕೂಡ ಮಾಡಿದ್ದಾರೆ. ಕಾಮೆಂಟ್ ವೊಂದರಲ್ಲಿ ಅಬ್ ತೋ ಶಾದಿ ಕರ್ ಲೋ(ಈಗಲಾದರೂ ಮದುವೆ ಮಾಡಿಕೊಳ್ಳಿ) ಎಂದು ಬರೆದುಕೊಂಡಿದ್ದಾರೆ.

ಅರ್ಬಾಜ್ ಖಾನ್ ಜೊತೆ ಸಂಭಂದ ಕಡಿದುಕೊಂಡ ನಂತರ ಮಲೈಕಾ ಆರೋರಾ ತಮಗಿಂತಲೂ ಕಿರಿಯನಾಗಿರುವ ಅರ್ಜುನ್ ಕಪೂರ್ ಜೊತೆ ಆಗಾಗ ಕಾಣಿಸಿಕೊಳ್ಳುತ್ತಿದ್ದರು. ಇದು ಸಾಕಷ್ಟು ಊಹಾಪೋಹ ಗಳನ್ನು ಸೃಷ್ಟಿ ಮಾಡಿತ್ತು. ಇತ್ತೀಚಿಗೆ ಸ್ವತಃ ಅರ್ಜುನ್ ಕಪೂರ್ ಅವರು ಈ ವಿಚಾರವಾಗಿ ಸ್ಪಷ್ಟೀಕರಣ ನೀಡಿ ಇಬ್ಬರ ನಡುವಿನ ಪ್ರೀತಿ ವಿಚಾರವಾಗಿ ಸುಳಿವನ್ನು ನೀಡಿದ್ದರು. ಅಲ್ಲದೆ ಎರಡು ಜೋಡಿಗಳು ಮಾಲ್ಡಿವ್ಸ್ ಕೂಡ ಜೊತೆಯಾಗಿ ಪ್ರವಾಸಕ್ಕೆ ಹೋಗಿದ್ದರು. 

 

Trending News