ರಶ್ಮಿಕಾ ʼದಿ ಗರ್ಲ್‌ಫ್ರೆಂಡ್‌ʼ ಫಸ್ಟ್‌ ಲುಕ್‌ ಔಟ್‌..! ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ ಕಿರಿಕ್‌ ಬೆಡಗಿಯ 24ನೇ ಸಿನಿಮಾ 

Rahul Ravindran : ಸೌತ್‌ ಸಿನಿರಂಗದ ಬಹುಬೇಡಿಕೆಯ ನಟಿಯರಲ್ಲಿ ನ್ಯಾಷುನಲ್‌ ಕ್ರಶ್‌ ರಶ್ಮಿಕಾ ಕೂಡ ಒಬ್ಬರು. ಸದ್ಯ ಬಾಲಿವುಡ್‌ನ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸುಮಾರು ಏಳು ವರ್ಷಗಳಿಂದ ತಮ್ಮ ನಟನೆಯ ಮೂಲಕ ಸಿನಿರಸಿಕರನ್ನು ರಂಜಿಸುತ್ತಿರುವ ಸುಂದರಿ ಇದೀಗ ತಮ್ಮ 24ನೇ ಸಿನಿಮಾದ ಟೈಟಲ್‌ ಹಾಗೂ ಫಸ್ಟ್‌ ಲುಕ್‌ ರಿವೀಲ್‌ ಮಾಡಿದ್ದಾರೆ.

Written by - Krishna N K | Last Updated : Oct 22, 2023, 04:18 PM IST
  • ನಟಿ ರಶ್ಮಿಕಾ 24ನೇ ಸಿನಿಮಾದ ಫಸ್ಟ್‌ ಲುಕ್‌ ರಿಲೀಸ್‌
  • ದಿ ಗರ್ಲ್‌ ಫ್ರೇಂಡ್‌ ಸಿನಿಮಾದಲ್ಲಿ ರಶ್ಮಿಕಾ ನಟನೆ
  • ರಾಹುಲ್‌ ರವಿಂದ್ರನ್‌ ನಿರ್ದೇಶನದ ದಿ ಗರ್ಲ್‌ಫ್ರೇಂಡ್‌ ಚಿತ್ರ
ರಶ್ಮಿಕಾ ʼದಿ ಗರ್ಲ್‌ಫ್ರೆಂಡ್‌ʼ ಫಸ್ಟ್‌ ಲುಕ್‌ ಔಟ್‌..! ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ ಕಿರಿಕ್‌ ಬೆಡಗಿಯ 24ನೇ ಸಿನಿಮಾ  title=
the girlfriend movie

Rashmika The Girlfriend movie : ಏಳು ವರ್ಷದ ಸಿನಿಜರ್ನಿಯಲ್ಲಿ 23 ಹಿಟ್‌ ಸಿನಿಮಾಗಳನ್ನು ನೀಡಿರುವ ರಶ್ಮಿಕಾ ಸಧ್ಯ ತಮ್ಮ 24ನೇ ಸಿನಿಮಾ ʼದಿ ಗರ್ಲ್‌ಫ್ರೆಂಡ್‌ʼ ಫಸ್ಟ್‌ ಲುಕ್‌ ಹಂಚಿಕೊಂಡಿದ್ದಾರೆ. ರಶ್ಮಿಕಾ ನೀರಿನಲ್ಲಿ ಮುಳುಗಿರುವ ದೃಶ್ಯ ಫಸ್ಟ್‌ ಲುಕ್‌ನಲ್ಲಿದ್ದು, ಸಖತ್‌ ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ. ʼದಿ ಗರ್ಲ್‌ಫ್ರೆಂಡ್‌ʼ ಥ್ರಿಲರ್‌ ಲವ್‌ ಸ್ಟೋರಿಯಾಗಿದೆ. 

ಈ ಚಿತ್ರದ ಟೈಟಲ್‌ ಹಾಗು ಫಸ್ಟ್‌ ಲುಕ್‌ ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, "ಇಡೀ ಜಗತ್ತೇ ಅದ್ಬುತ ಪ್ರೇಮ ಕಥೆಗಳಿಂದ ಕೂಡಿದೆ. ಆದರೆ ಆ ಪ್ರೇಮಕಥೆಗಳಲ್ಲಿ ಕೆಲವನ್ನು ನೋಡಿರುವುದಕ್ಕೂ ಹಾಗು ಕೇಳಿರುವುದಕ್ಕೂ ಸಾಧ್ಯವಿಲ್ಲ. ಅಂತಹುದರಲ್ಲಿ ʼದಿ ಗರ್ಲ್‌ಫ್ರೆಂಡ್‌ʼ ಸಹ ಹೌದು." ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ.

 
 
 
 

 
 
 
 
 
 
 
 
 
 
 

A post shared by Rashmika Mandanna (@rashmika_mandanna)

ಇದನ್ನೂ ಓದಿ: ಅನುಷ್ಕಾ ಶರ್ಮಾನ ಮದುವೆ ಆಗ್ಬೇಕು ಅಂದುಕೊಂಡಿದ್ದೆ ಆದ್ರೆ, ಕೊಹ್ಲಿ..! ನಟ ರಣಬೀರ್‌ ಶಾಕಿಂಗ್‌ ಹೇಳಿಕೆ

ನಾಲ್ಕು ವರ್ಷಗಳ ನಂತರ ನಟ, ನಿರ್ದೇಶಕ ರಾಹುಲ್‌ ರವೀಂದ್ರನ್‌ ʼದಿ ಗರ್ಲ್‌ಫ್ರೆಂಡ್‌ʼ ಚಿತ್ರದ ಮೂಲಕ ಕಮ್‌ಬ್ಯಾಕ್‌ ಮಾಡಿದ್ದಾರೆ. ಅಲ್ಲದೆ ಈ ಸಿನಿಮಾಗೆ ರಾಹುಲ್‌ ಆಕ್ಷನ್‌ ಕಟ್‌ ಹೇಳಿದ್ದಾರೆ. ಅಲ್ಲು ಅರವಿಂದ್‌ರವರ ಗೀತಾ ಆರ್ಟ್ಸ್‌ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಹೀಶಮ್‌ ಅಬ್ದುಲ್‌ ವಹಾಬ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಿಶನ್‌ ವಸಂತ್‌ ಛಾಯಾಗ್ರಹಣ ಇದೆ.
 
ಸಧ್ಯ ರಶ್ಮಿಕಾ ನಟನೆಯ ಅನಿಮಲ್‌, ರೇನ್‌ಬೋ, D 51, ಛವ್ವಾ, ಪುಷ್ಪ 2: ದಿ ರೂಲ್‌ ಸಿನಿಮಾ ತೆರೆಮೇಲೆ ಬರಲು ರೆಡಿಯಾಗಿವೆ. ಇದರ ಜೊತೆಗೆ ರಶ್ಮಿಕಾ ಗೀತಾ ಗೋವಿಂದಂ, ಡಿಯರ್‌ ಕಾರ್ಮೇಡ್‌ ಸಿನಿಮಾಗಳ ನಂತರ ಮತ್ತೆ ವಿಜಯ್‌ ದೇವರಕೊಂಡ ಜೊತೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಟಾಕ್‌ ಸಹ ಇದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News