ಚಿಕ್ಕಿನಾ ಇಷ್ಟ ಪಟ್ಟು ತಿಂತಿರಾ ! ತಿನ್ನುವ ಮೊದಲು ಒಮ್ಮೆ ಈ ವಿಡಿಯೋ ನೋಡಿ

ಚಿಕ್ಕಿ ತಯಾರು ಮಾಡುವ ವಿಡಿಯೋವನ್ನು ಲಕ್ಷ್ಮಿಕುಂಜಿ ಎಂಬವರು ತಮ್ಮ  Instagram ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ.  ಚಿಕ್ಕಿ ತಯಾರಿಸಿರುವ ರೀತಿಗೆ ಜನರು ಆಶ್ಚರ್ಯ ಪಡುತ್ತಿದ್ದಾರೆ. 

Written by - Ranjitha R K | Last Updated : Nov 1, 2023, 04:37 PM IST
  • ಚಿಕ್ಕಿನಾ ಇಷ್ಟ ಪಟ್ಟು ತಿಂತಿರಾ
  • ವೈರಲ್ ಆದ ವಿಡಿಯೋ ನೋಡಿ ಬೆಚ್ಚಿಬಿದ್ದ ಜನ
  • ತಿನ್ನುವ ಮೊದಲು ಒಮ್ಮೆ ಈ ವಿಡಿಯೋ ನೋಡಿ
ಚಿಕ್ಕಿನಾ ಇಷ್ಟ ಪಟ್ಟು ತಿಂತಿರಾ ! ತಿನ್ನುವ ಮೊದಲು ಒಮ್ಮೆ ಈ ವಿಡಿಯೋ ನೋಡಿ  title=

ಬೆಂಗಳೂರು : ಚಿಕ್ಕಿ ಅಂದರೆ ಅದೊಂದು ಸಾಂಪ್ರದಾಯಿಕ ಭಾರತೀಯ ಮಿಠಾಯಿ. ಕಡಲೆಬೀಜ ಮತ್ತು ಬೆಲ್ಲದಿಂದ ಇದನ್ನು ತಯಾರಿಸಲಾಗುತ್ತದೆ. ಇನ್ನು ಈ ಚಿಕ್ಕಿಯನ್ನು ಬೇರೆ ಬೇರೆ ಬಗೆಯಲ್ಲಿ ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ಎಲ್ಲರೂ ಚಿಕ್ಕಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಅದರಲ್ಲೂ ಚಳಿಗಾಲದಲ್ಲಿ ಚಿಕ್ಕಿಗೆ ಸ್ವಲ್ಪ ಬೇಡಿಕೆ ಹೆಚ್ಚೇ ಇರುತ್ತದೆ.  ಕಡಲೆಬೀಜ ಹೊರತುಪಡಿಸಿ ಹುರಿಗಡ್ಲೆ, ಎಳ್ಳು, ಮಂಡಕ್ಕಿ, ಅವಲಕ್ಕಿ, ಅಥವಾ ಒಣಕೊಬ್ಬರಿಯನ್ನು ಒಳಗೊಂಡಂತೆ, ಇನ್ನೂ ಅನೇಕ ವಸ್ತುಗಳನ್ನು ಬಳಸಿ ಚಿಕ್ಕಿಯನ್ನು ತಯಾರಿಸಲಾಗುತ್ತದೆ. 

 ಚಿಕ್ಕಿ ತಯಾರಿಸುವ ಕಾರ್ಖಾನೆ:
 ಚಿಕ್ಕಿ ತಯಾರು ಮಾಡುವ ವಿಡಿಯೋವನ್ನು ಲಕ್ಷ್ಮಿಕುಂಜಿ ಎಂಬವರು ತಮ್ಮ  Instagram ಪೇಜ್ ನಲ್ಲಿ  ಹಂಚಿಕೊಂಡಿದ್ದಾರೆ. ಇದರಲ್ಲಿ ಬೆಲ್ಲ ಮತ್ತು ಕಡಲೆಕಾಯಿ ಮಿಶ್ರಣವನ್ನು ಬರಿ ನೆಲದ ಮೇಲೆ ಹರಡಿರುವುದನ್ನು ಕಾಣಬಹುದು. ಬೆಲ್ಲ ಮತ್ತು ಶೇಂಗಾ ಹರಡಿದ ಕಡೆ ಕಾರ್ಮಿಕರು ಬರಿಗಾಲಿನಲ್ಲಿ ನಡೆಯುವುದನ್ನು ಕೂಡಾ ಇಲ್ಲಿ ಕಾಣಬಹುದು. ಅಲ್ಲೇ ಇದನ್ನು ಅಚ್ಚಿಗೆ ಹಾಕಲಾಗುತ್ತದೆ. ಬರೀ ಗೈಯ್ಯ ಲ್ಲಿಯೇ ಅಚ್ಚಿಗೆ ಹಾಕಿ ಅದನ್ನು ಸಮ ಮಾಡಲಾಗುತ್ತದೆ. ಅಚ್ಚಿನಿಂದ ತೆಗೆದು ಮತ್ತೆ ನೆಲದ ಮೇಲೆ ಬಿಸಾಡಲಾಗುತ್ತದೆ.

ಇದನ್ನೂ ಓದಿ : Snake Video : ಹಾವು ಪೊರೆಬಿಡುವ ವಿಚಿತ್ರ ದೃಶ್ಯ ವೈರಲ್‌

ಕಾರ್ಖಾನೆಯಲ್ಲಿ ಚಿಕ್ಕಿ ತಯಾರಿಸುವ ವೀಡಿಯೊವನ್ನು ಇಲ್ಲಿ ವೀಕ್ಷಿಸಿ:

 

ಈ ವೈರಲ್ ವೀಡಿಯೋ ನೋಡಿ ಜನ ಬೆಚ್ಚಿಬಿದ್ದಿದ್ದಾರೆ :
ಈ ವೇಳೆ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಈ ವಿಡಿಯೋ ವೀಕ್ಷಿಸಿದ ಬಳಕೆದಾರರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.  ಚಿಕ್ಕಿ ತಯಾರಿಸಿರುವ ರೀತಿಗೆ ಜನರು ಆಶ್ಚರ್ಯ ಪಡುತ್ತಿದ್ದಾರೆ. 

ಇದನ್ನೂ ಓದಿ : ಸ್ಪೀಡ್ ಬ್ರೆಕರ್ ಮೇಲೆ ಇದ್ದಕ್ಕಿದ್ದಂತೆ ಗಾಳಿಯಲ್ಲಿ ಹಾರಿದ ಇ-ರಿಕ್ಷಾ... ವಿಡಿಯೋ ನೋಡಿ!

ಇಂಥಹ ಚಿಕ್ಕಿಯನ್ನು ತಿನ್ನುವ ಬದಲು ಗುಣಮಟ್ಟದ ಬೆಲ್ಲದ ಚಿಕ್ಕಿಯನ್ನು ಮನೆಯಲ್ಲಿಯೇ ತಯಾರಿಸಬಹುದು:
ಆದ್ದರಿಂದ ಕಳಪೆ ಗುಣಮಟ್ಟದ ಬೆಲ್ಲದ ಚಿಕ್ಕಿಯನ್ನು ಖರೀದಿಸುವ ಬದಲು ಮನೆಯಲ್ಲಿಯೇ ಮಾಡಿ ನೋಡಿ. 

ಅಗತ್ಯವಿರುವ ವಸ್ತುಗಳು:
ಕಡಲೆಬೀಜ - 1 ಕಪ್
ಎಳ್ಳು - 1/2 ಕಪ್
ಬೆಲ್ಲ - 1/2 ಕಪ್
ತುಪ್ಪ - 2 ಚಮಚ

ಇದನ್ನೂ ಓದಿ : ತನ್ನನ್ನು ರಕ್ಷಿಸಿದವನಿಗೆ ನಾಗಮಣಿ ನೀಡಿದನಂತೆ ನಾಗರಾಜ ! ಈ ವಿಡಿಯೋವನ್ನೂ ಒಮ್ಮೆ ನೀಡಿ

ಪಾಕವಿಧಾನ:
ಮೊದಲು ಕಡಲೆಬೀಜ ಮತ್ತು ಎಳ್ಳನ್ನು ಸ್ವಚ್ಛಗೊಳಿಸಿ ಮತ್ತು ಅವುಗಳನ್ನು ಬಾಣಲೆಯಲ್ಲಿ ಹಾಕಿ  ಚೆನ್ನಾಗಿ ಹುರಿದು ಪಕ್ಕಕ್ಕೆ ಇರಿಸಿ. ಈಗ ಅದೇ ಬಾಣಲೆಯಲ್ಲಿ ಬೆಲ್ಲ ಹಾಕಿ  ಪಾಕ ತಯಾರು ಮಾಡಿಕೊಳ್ಳಿ. ಪಾಕ ಸರಿಯಾದ ಸ್ಥಿರತೆಗೆ ಬಂದಾಗ ಅದಕ್ಕೆ ಹುರಿದ ಕಡಲೆಕಾಯಿ ಮತ್ತು ಎಳ್ಳು ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ಅಗಲವಾದ ಪ್ಯಾನ್ ಅನ್ನು ಗ್ರೀಸ್ ಮಾಡಿ ಮತ್ತು ಈ ಮಿಶ್ರಣವನ್ನು ಅದರಲ್ಲಿ ಸುರಿಯಿರಿ. ಮುಂದೆ, ಸಣ್ಣ ತುಂಡುಗಳಾಗಿ ಕತ್ತರಿಸಿ ತಣ್ಣಗಾಗಲು ಬಿಡಿ. ರುಚಿಯಾದ ಚಿಕ್ಕಿ ಸವಿಯಲು ರೆಡಿಯಾಗಿರುತ್ತದೆ. 

(ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಮತ್ತು ನೀಡಿರುವ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಕೊಳ್ಳಲಾಗಿದೆ. Zee ನ್ಯೂಸ್ ಇವುಗಳನ್ನು ಯಾವುದೇ ರೀತಿಯಲ್ಲಿ ಅನುಮೋದಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News