VIRAL VIDEO: ಕುಡಿದ ಮತ್ತಿನಲ್ಲಿ ಗೂಳಿಯ ಕೊಂಬು ಹಿಡಿದ ವ್ಯಕ್ತಿಗೆ ಆಗಿದ್ದೇನು..?

Viral Video: ‘ಇರಲಾರದವರು ಇರುವೆ ಬಿಟ್ಟುಕೊಂಡರು’ ಎಂಬ ಗಾದೆಯಂತೆ ಈ ವ್ಯಕ್ತಿ ಸುಮ್ಮನೆ ಇದ್ದ ಗೂಳಿಗೆ ಕಾಟ ಕೊಟ್ಟಿದ್ದಾನೆ. ಪರಿಣಾಮ ಕೋಪಗೊಂಡ ಗೂಳಿ ಆತನನ್ನು ತನ್ನ ಕೊಂಬಿನಿಂದ ತಿವಿದು ಮೇಲಕ್ಕೆ ಎತ್ತಿ ಬೀಸಾಡದೆ.

Written by - Puttaraj K Alur | Last Updated : Oct 22, 2023, 08:14 AM IST
  • ‘ಇರಲಾರದವರು ಇರುವೆ ಬಿಟ್ಟುಕೊಂಡರು’ ಎಂಬಂತೆ ಗೂಳಿಗೆ ತೊಂದರೆ ನೀಡಿದ ಭೂಪ
  • ಕುಡಿದ ಮತ್ತಿನಲ್ಲಿ ತೊಂದರೆ ಕೊಟ್ಟ ವ್ಯಕ್ತಿಯನ್ನು ಮೇಲಕ್ಕೆ ಎತ್ತಿ ಬೀಸಾಡಿದ ಗೂಳಿ
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ಗೂಳಿಯ ವಿಡಿಯೋ
VIRAL VIDEO: ಕುಡಿದ ಮತ್ತಿನಲ್ಲಿ ಗೂಳಿಯ ಕೊಂಬು ಹಿಡಿದ ವ್ಯಕ್ತಿಗೆ ಆಗಿದ್ದೇನು..? title=
ಗೂಳಿ ಜೊತೆ ಗುಮ್ಮಿಸಿಕೊಂಡ ಭೂಪ!

ನವದೆಹಲಿ: ಸೋಷಿಯಲ್​ ಮೀಡಿಯಾದಲ್ಲಿ ಪ್ರತಿದಿನ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವು ಜನರ ಗಮನ ಸೆಳೆದರೆ, ಇನ್ನೂ ಕೆಲವು ಜನರ ಜನರ ಮೊಗದಲ್ಲಿ ಮಂದಹಾಸ ಮೂಡಿಸುತ್ತವೆ. ವೈರಲ್ ವಿಡಿಯೋಗಳು ಇಂದು ಅತ್ಯಂತ ಜನಪ್ರಿಯವಾಗಿವೆ. ಫನ್ನಿ ಫನ್ನಿ ವಿಡಿಯೋಗಳು ಜನರಿಗೆ ಹೆಚ್ಚು ಇಷ್ಟವಾಗುತ್ತವೆ. ಈ ರೀತಿಯ ಮತ್ತೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಗೂಳಿ ಜೊತೆಗೆ ಸೆಣಸಾಡಲು ಹೋಗಿ ಅವಾಂತರ ಮಾಡಿಕೊಂಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಕುಡಿದ ನಶೆಯಲ್ಲಿದ್ದ ಆ ವ್ಯಕ್ತಿ ನಡುರಸ್ತೆಯಲ್ಲಿ ಸುಮ್ಮನೆ ನಿಂತಿದ್ದ ಗೂಳಿ ಬಳಿ ಹೋಗಿ ಅದರ ಕೊಂಬು ಹಿಡಿಯಲು ಯತ್ನಿಸಿದ್ದಾನೆ. ಹಲವಾರು ಬಾರಿ ಕೊಂಬು ಹಿಡಿಯಲು ಯತ್ನಿಸಿದ ವ್ಯಕ್ತಿಯ ವರ್ತನಯಿಂದ ಗೂಳಿಗೆ ಕಡುಕೋಪ ಬಂದಿದೆ.

ಇದನ್ನೂ ಓದಿ: ಡಿಎ ಏರಿಕೆ ಬಳಿಕ ಒಂದೂವರೆ ಪಟ್ಟು ಹೆಚ್ಚಳವಾಗುವುದು ಸರ್ಕಾರಿ ನೌಕರರ ವೇತನ ! ಹೀಗಿರುವುದು ಲೆಕ್ಕಾಚಾರ

‘ಇರಲಾರದವರು ಇರುವೆ ಬಿಟ್ಟುಕೊಂಡರು’ ಎಂಬ ಗಾದೆಯಂತೆ ಈ ವ್ಯಕ್ತಿ ಸುಮ್ಮನೆ ಇದ್ದ ಗೂಳಿಗೆ ಕಾಟ ಕೊಟ್ಟಿದ್ದಾನೆ. ಪರಿಣಾಮ ಕೋಪಗೊಂಡ ಗೂಳಿ ಆತನನ್ನು ತನ್ನ ಕೊಂಬಿನಿಂದ ತಿವಿದು ಮೇಲಕ್ಕೆ ಎತ್ತಿ ಬೀಸಾಡದೆ. ಪರಿಣಾಮ ನೆಲಕ್ಕೆ ಬಿದ್ದ ವ್ಯಕ್ತಿಯ ನಶೆ ಇಳಿದುಹೋಗಿದೆ. ಕೂಡಲೇ ಆತ ಗೂಳಿಯ ಸಹವಾಸ ಸಾಕು ಅಂತಾ ರಸ್ತೆ ಬದಿ ತೆರಳಿ ಕುಳಿತುಕೊಂಡಿದ್ದಾನೆ.   

 
 
 
 

 
 
 
 
 
 
 
 
 
 
 

A post shared by Raj Sony (@sonyboy1931)

sonyboy1931 ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು, ಅನೇಕರು ಶೇರ್ ಸಹ ಮಾಡಿದ್ದಾರೆ. ಕುಡಿದ ನಶೆಯಲ್ಲಿ ಗೂಳಿ ಜೊತೆ ಗುಮ್ಮಿಸಿಕೊಂಡ ವ್ಯಕ್ತಿಯ ಸ್ಥಿತಿಯನ್ನು ಕಂಡು ಅನೇಕರು ಫನ್ನಿ ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ.   

ಇದನ್ನೂ ಓದಿ: ಇನ್ಮುಂದೆ ಭಾರತದಲ್ಲಿಯೇ ತಯಾರಾಗಲಿದೆ ಗೂಗಲ್ ಪಿಕ್ಸಲ್..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News