India vs South Africa : ತಮ್ಮ 35 ನೇ ಹುಟ್ಟುಹಬ್ಬದಂದು ವಿರಾಟ್ ಕೊಹ್ಲಿ ತನ್ನ ಅಭಿಮಾನಿಗಳಿಗೆ ಅದ್ಭುತ ಉಡುಗೊರೆಯನ್ನು ನೀಡಿದ್ದಾರೆ. ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ಅತಿ ಹೆಚ್ಚು ಏಕದಿನ ಶತಕಗಳ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ. ಇಡೀ ವಿಶ್ವವೇ ವಿರಾಟ್ ಕೊಹ್ಲಿ ಅವರ ಐತಿಹಾಸಿಕ ಶತಕವನ್ನು ಕೊಂಡಾಡುತ್ತಿದೆ. ಆದರೆ ಈ ಆಟಗಾರ ಮಾತ್ರ ಕೊಹ್ಲಿ ಸಾಧನೆ ಬಗ್ಗೆ ವಿಚಿತ್ರ ಹೇಳಿಕೆ ನೀಡಿದ್ದಾರೆ.
ವಿರಾಟ್ ಕೊಹ್ಲಿ ಐತಿಹಾಸಿಕ ಶತಕ :
ತನ್ನ ಅಭಿಮಾನಿಗಳಿಗೆ ಸಂತಸದಿಂದ ಸಂಭ್ರಮಿಸುವ ಮತ್ತೊಂದು ಅವಕಾಶವನ್ನು ಕೊಹ್ಲಿ ನಿನ್ನೆ ಪಂದ್ಯದ ಮೂಲಕ ನೀಡಿದ್ದಾರೆ. ನಿನ್ನೆ ದಕ್ಷಿಣ ಆಫ್ರಿಕಾದ ವಿರುದ್ದ ನಡೆದ ಪಂದ್ಯದಲ್ಲಿ ಕೊಹ್ಲಿ 101 ರನ್ಗಳ ಅಜೇಯ ಇನ್ನಿಂಗ್ಸ್ ಆಡಿದ್ದರು. ಕೊಹ್ಲಿ ಸಿಡಿಸಿದ ಈ ಶತಕ ಐತಿಹಾಸಿಕವಾಗಿದೆ. ಈ ಶತಕದ ಮೂಲಕ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಕೊಹ್ಲಿ ಬದಿಗಟ್ಟಿದ್ದಾರೆ. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ಎಲ್ಲಾ ಬ್ಯಾಟ್ಸ್ಮನ್ಗಳು ಕೊಹ್ಲಿ ಗಳಿಸಿರುವಷ್ಟು ರನ್ ಗಳಿಸಿಲ್ಲ. ಅಂದರೆ ನಿನ್ನೆಯ ಪಂದ್ಯದಲ್ಲಿ ಕೊಹ್ಲಿ ಗಳಿಸಿರುವ ರನ್ 101.
ಆದರೆ, ದಕ್ಷಿಣ ಆಫ್ರಿಕಾ ತಂಡದ ಎಲ್ಲಾ ಬ್ಯಾಟ್ಸ್ಮನ್ಗಳು
ಗಳಿಸಿರುವ ಒಟ್ಟು ರನ್ 83.
ಇದನ್ನೂ ಓದಿ : ಬ್ಯಾಟಿಂಗ್ ಮಧ್ಯೆಯೇ ರೋಹಿತ್ ರವಾನಿಸಿದ್ದರಂತೆ ಈ ಸಂದೇಶ ! ಗೆಲುವಿಗೆ ಕಾರಣವಾಗಿದ್ದೇ ಈ ಮಂತ್ರ ಎಂದ ಅಯ್ಯರ್
ನಾನೇಕೆ ಅವನನ್ನು ಅಭಿನಂದಿಸಲಿ ಎಂದ ಈ ಆಟಗಾರ :
ವಿರಾಟ್ ಕೊಹ್ಲಿ ಶತಕದ ಬಗ್ಗೆ ಶ್ರೀಲಂಕಾ ನಾಯಕ ಕುಸಾಲ್ ಮೆಂಡಿಸ್ ಅವರಲ್ಲಿ ಪ್ರಶ್ನಿಸಿದಾಗ ಅವರು ಬಹಳ ವಿಚಿತ್ರವಾಗಿ ಪ್ರತಿಕ್ರಿಯಿಸಿದ್ದಾರೆ. ವಿರಾಟ್ ಕೊಹ್ಲಿ ತಮ್ಮ 49 ನೇ ಏಕದಿನ ಶತಕವನ್ನು ಪೂರ್ಣಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಹ್ಲಿ ಅವರನ್ನು ಅಭಿನಂದಿಸುವಿರಾ ಎಂದು ಕೇಳಿರುವ ಪ್ರಶ್ನೆಗೆ, ನಾನೇಕೆ ಅವರನ್ನು ಅಭಿನಂದಿಸಲಿ' ಎಂದು ಕುಸಾಲ್ ಮೆಂಡಿಸ ನಗಲು ಆರಂಭಿಸಿದ್ದಾರೆ. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Journalist " Virat Just scored his 49th ODI ton. Do you like to congratulate him?"
Kusak Mendis" Why I would congratulate him"😭😭😭#INDvSA #INDvsSA #SAvIND #ViratKohli #CWC2023 pic.twitter.com/DAqh2oeO5e
— Out Of Context Cricket PK (@GemsOfCrickett) November 5, 2023
ಸೆಮಿಫೈನಲ್ನಿಂದ ಬಹುತೇಕ ಹೊರಬಿದ್ದಿರುವ ಶ್ರೀಲಂಕಾ :
ಶ್ರೀಲಂಕಾದ ವಿಶ್ವಕಪ್ 2023ರ ಪ್ರಯಾಣದ ಬಗ್ಗೆ ಮಾತನಾಡುವುದಾದರೆ, ತಂಡವು ಬಹುತೇಕ ಪಂದ್ಯಾವಳಿಯಿಂದ ಹೊರಗುಳಿಯುವ ಅಂಚಿನಲ್ಲಿದೆ. ದಸುನ್ ಶನಕ ಗಾಯದಿಂದ ಹೊರಗುಳಿದ ನಂತರ ಕುಸಾಲ್ ಮೆಂಡಿಸ್ ಶ್ರೀಲಂಕಾ ತಂಡದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಶ್ರೀಲಂಕಾ ಇದುವರೆಗೆ ಆಡಿರುವ 7 ಪಂದ್ಯಗಳಲ್ಲಿ 4ರಲ್ಲಿ ಜಯ ಸಾಧಿಸಿದ್ದು, ತಂಡ 4 ಅಂಕಗಳನ್ನು ಹೊಂದಿದ್ದು ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಮುಂದಿನ ಎರಡು ಪಂದ್ಯಗಳಲ್ಲಿ ತಂಡ ಗೆದ್ದರೂ ಸೆಮಿಫೈನಲ್ಗೆ ಅರ್ಹತೆ ಪಡೆಯುವ ಸಾಧ್ಯತೆ ತೀರಾ ಕಡಿಮೆ. ಸೆಮಿಫೈನಲ್ಗೆ ಅರ್ಹತೆ ಪಡೆಯಬೇಕಾದರೆ, ಶ್ರೀಲಂಕಾ ಇತರ ತಂಡಗಳ ಫಲಿತಾಂಶಗಳನ್ನು ಅವಲಂಬಿಸಬೇಕಾಗುತ್ತದೆ. ಇನ್ನು ನಾಳೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶ್ರೀಲಂಕಾ ಬಾಂಗ್ಲಾದೇಶದ ವಿರುದ್ಧ ಸೆಣೆಸಲಿದೆ. ಬಾಂಗ್ಲಾದೇಶ ತಂಡ ಈಗಾಗಲೇ ವಿಶ್ವಕಪ್ನಿಂದ ಹೊರಬಿದ್ದಿದೆ.
ಇದನ್ನೂ ಓದಿ : ದಾಖಲೆಗಾಗಿ ಕೊಹ್ಲಿ ನಿಧಾನವಾಗಿ ಆಡ್ತಾರಾ? ನಾಯಕ ರೋಹಿತ್ ಶರ್ಮಾ ಹೇಳಿದ್ದೇನು?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews