ಗ್ಯಾರಂಟಿ ಯೋಜನೆಗಳಷ್ಟೇ ಅಭಿವೃದ್ಧಿಗೂ ಆದ್ಯತೆ : ಎನ್ ಚಲುವರಾಯಸ್ವಾಮಿ

ಜನರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡುವುದು ಮಾತ್ರವಲ್ಲ ಅಭಿವೃದ್ಧಿ ಕಾಮಗಾರಿಗಳೂ ನಮ್ಮ ಸರ್ಕರ  ಅಷ್ಟೇ ಆದ್ಯತೆ ನೀಡುತ್ತಿದೆ ಎಂದು  ಹೇಳಿದರು.   

Written by - Zee Kannada News Desk | Last Updated : Nov 21, 2023, 03:13 PM IST
  • ಅಭಿವೃದ್ಧಿ ಕಾಮಗಾರಿಗಳೂ ಸರ್ಕರ ಆದ್ಯತೆ ನೀಡುತ್ತಿದೆ
  • ಜನರ ದಶಕದ ಕನಸು ಈಡೇರಿದೆ
  • ಸಚಿವ ಎನ್ ಚಲುವರಾಯಸ್ವಾಮಿ ಹೇಳಿಕೆ
ಗ್ಯಾರಂಟಿ  ಯೋಜನೆಗಳಷ್ಟೇ ಅಭಿವೃದ್ಧಿಗೂ ಆದ್ಯತೆ : ಎನ್ ಚಲುವರಾಯಸ್ವಾಮಿ title=
Chaluvarayaswamy

ಮಂಡ್ಯ : ಜನರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡುವುದು ಮಾತ್ರವಲ್ಲ ಅಭಿವೃದ್ಧಿ ಕಾಮಗಾರಿಗಳೂ ನಮ್ಮ ಸರ್ಕರ  ಅಷ್ಟೇ ಆದ್ಯತೆ ನೀಡುತ್ತಿದೆ  ಎಂದು ಕೃಷಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಮಂಡ್ಯ ನಗರದಲ್ಲಿ ಕೆರಗೋಡು ಮಂಡ್ಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಜನರ ಜೀವನ ಮಟ್ಟ ಸುಧಾರಣೆ ಹಾಗೂ ಭೌತಿಕ ಅಭಿವೃದ್ಧಿ ಎರೆಡೂ ರಾಜ್ಯ ಸರ್ಕಾರದ ಆದ್ಯತೆ. ಇಂದಿನ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನಮ್ಮ ಬದ್ದತೆಗೆ ಸಾಕ್ಷಿಯಾಗಿದೆ ಎಂದರು.

ಗುಣಮಟ್ಟ ಕೊಯ್ದುಕೊಂಡು ಆದಷ್ಟು ಬೇಗ ಕಾಮಗಾರಿ  ಮುಗಿಸಬೇಕು, ರೈತರು ಸಹಕರಿಸಿಬೇಕು  ಎಂದು ಸಚಿವರು ಕರೆ ನೀಡಿದರು. ರಾಜ್ಯದಲ್ಲಿ ನಮ್ಮ  ಸರ್ಕಾರ ಬಂದ ನಂತರ ಮಂಜೂರಾಗಿ  ಟೆಂಡರ್ ಕೂಡ‌ ಮುಗಿದು  ಈ ಹೊಸ ಕಾಮಗಾರಿ ಪ್ರಾರಂಭವಾಗಿದೆ. ಜನರ ದಶಕದ ಕನಸು ಈಡೇರಿದೆ. ನಾಗಮಂಗಲ ,ಕೌಡ್ಲು ತುಮಕೂರು ಕಡೆಗೆ ತೆರಳುವವರಿಗೆ ಈ ರಸ್ತೆ  ಕಾಮಗಾರಿಯಿಂದ ಅನುಕೂಲವಾಗಲಿದೆ ಎಂದು ಕೃಷಿ ಸಚಿವರು ಅಭಿಪ್ರಾಯ ಪಟ್ಟರು.

11 ಕೋಟಿ ರೂ ವೆಚ್ಚದ ಕಾಮಗಾರಿ ಇದಾಗಿದೆ .ಶೀಘ್ರದಲ್ಲೇ 150 ವೆಚ್ಚದಲ್ಲಿ ಜಿಲ್ಲೆಯ ವಿವಿಧ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಸಚಿವರು ಹೇಳಿದರು.

ಇದನ್ನೂ ಓದಿ: ನ.28 ರಂದು ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ಚುನಾವಣೆ

ಜಿಲ್ಲೆಯವರಾದ ಡಾ. ವಿವೇಕ್ ಅವರು ಅಮೇರಿಕ ಅಧ್ಯಕ್ಷರ ಆಪ್ತ ವೈದ್ಯರಾಗಿರುವುದು ಹೆಮ್ಮೆಯ ವಿಷಯ. ಅವರ ಆಹ್ವಾನದ ಮೇರೆಗೆ ಅಮೇರಿಕಾದ ಮಾಜಿ ಅಧ್ಯಕ್ಷರಾದ ಬರಾಕ್ ಒಬಮಾ ಅವರು  ಸ್ಟ್ಯಾಚು ಆಫ್ ಮದರ್ ಅರ್ಥ ಪ್ರತಿಮೆ ಅನಾವರಣಕ್ಕೆ  ಮಂಡ್ಯಗೆ ಬರುವ ಸಾಧ್ಯತೆ ಇದೆ. ಅಷ್ಟರಲ್ಲಿ ರಸ್ತೆ ಕಾಮಗಾರಿಗಳು ಪೂರ್ಣಗೊಳ್ಳಬೇಕು ಎಂದರು.

ಮಂಡ್ಯ ಶಾಸಕರಾದ ರವಿಕುಮಾರ್ ಪಿ ಗೌಡ ಅವರು ಮಾತನಾಡಿ ಕಳೆದ 10 ವರ್ಷಗಳಿಂದ ಮಂಡ್ಯ ಕೆರಗೋಡು ರಸ್ತೆ   ನೆನೆಗುದಿಗೆ ಬಿದ್ದಿದ್ದು ದುರಸ್ತಿ ಕಾಮಗಾರಿಗೆ ಈಗ ಚಾಲನೆ ದೊರೆತಿರುವುದು ಸಂತೋಷದ ವಿವಾರ  ಎಂದರು.

ಕಳೆದ 10 ವರ್ಷಗಳಲ್ಲಿ ಈ ರಸ್ತೆಯಲ್ಲಿ ಹಲವು ಅಪಘಾತಗಳು, ಒಂದೆರೆಡು ಪ್ರಾಣ ಹಾನಿಗಳೂ  ಸಂಭವಿಸಿತ್ತು. ಆದರೆ ಹಿಂದೆ ಆಳಿದವರು ಯಾವುದೇ ಅಭಿವೃದ್ಧಿಗೆ ಗಮನ ಹರಿಸಿಲ್ಲ.ಈಗ ರಸ್ತೆ ಅಭಿವೃದ್ಧಿಗೆ ಚಾಲನೆ  ನೀಡಲಾಗಿದೆ.ಇದು ನಮ್ಮ ಸರ್ಕಾರ ಹಾಗೂ  ಜಿಲ್ಲಾ ಉಸ್ತವಾರಿ ಸಚಿವರಾದ  ಎನ್ ಚಲುವರಾಯಸ್ವಾಮಿ ಅವರ ಇಚ್ಚಾಶಕ್ತಿ ಏನೆಂಬುದನ್ನು ತೋರುತ್ತಿದೆ ಎಂದರು.

11 ಕೋಟಿ ರೂ ವೆಚ್ಚದಲ್ಲಿ ಎರೆಡು ತಿಂಗಳೊಳಗೆ ರಸ್ತೆ ಕಾಮಗಾರಿ‌ ಪೂರ್ಣ ಗೊಳ್ಳಲಿದೆ. ನಗರದ ವಿವಿಧ ಭಾಗಗಳಲ್ಲಿ 5 ಕೋಟಿ ರೂ ವೆಚ್ಚದಲ್ಲಿ  ರಸ್ತೆ  ಕಾಮಗಾರಿಗಳಿಗೂ ಚಾಲನೆ ನೀಡಲಾಗಿದೆ. ಇದಲ್ಲದೆ 150ಕೋಟಿ ರೂ ಗಳಲ್ಲಿ ಜಿಲ್ಲೆಯ  ವಿವಿಧ ರಸ್ತೆಗಳ ಅಭಿವೃದ್ಧಿ ಆದಷ್ಟು ಬೇಗ  ಮಾಡಲಾಗುವುದು ಎಂದು ಶಾಸಕರು ಹೇಳಿದರು .
ಜಿಲ್ಲಾಧಿಕಾರಿ ಕುಮಾರ್,ಜಿಲ್ಲಾ ಪಂಚಾಯತ್ ಸಿ.ಇ.ಒ ಶೇಖ್ ತನ್ವೀರ್ ಆಸೀಫ್  ಮತ್ತಿತರರು  ಉಪಸ್ಥಿತರಿದ್ದರು.

ಇದನ್ನೂ ಓದಿ: ಕರೆಂಟ್‌ ಶಾಕ್‌ನಿಂದ ತಾಯಿ ಮಗು ಸಾವು: ಸ್ಟೇಷನ್‌ ಬೇಲ್‌ ಮೇಲೆ ಹೊರಬಂದ ಐವರು ಅಧಿಕಾರಿಗಳು 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News