ಅರ್ಧಶತಕದ ಜೊತೆ ಧೋನಿಯ ಶ್ರೇಷ್ಠ ದಾಖಲೆ ಮುರಿದ ಇಶಾನ್ ಕಿಶನ್: ಈ ವಿಷಯದಲ್ಲಿ ಗುರುವನ್ನೇ ಮೀರಿಸಿಬಿಟ್ಟನಲ್ಲ ಶಿಷ್ಯ…!

ishan kishan breaks dhoni record: ಇಶಾನ್ ಕಿಶನ್ 52 ರನ್‌ ಕಲೆ ಹಾಕುವ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌’ನಲ್ಲಿ 50ಕ್ಕೂ ಹೆಚ್ಚು ರನ್ ಗಳಿಸಿದ ಭಾರತದ ಎರಡನೇ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಈ ವಿಚಾರದಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರನ್ನೂ ಹಿಂದಿಕ್ಕಿದ್ದಾರೆ.

Written by - Bhavishya Shetty | Last Updated : Nov 26, 2023, 09:53 PM IST
    • ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ T20 ಸರಣಿ
    • ಇಶಾನ್ ಕಿಶನ್ ಹೆಸರಲ್ಲಿ ವಿಶೇಷ ದಾಖಲೆಯೊಂದು ಸೇರ್ಪಡೆಗೊಂಡಿದೆ
    • ಟಿ20 ಕ್ರಿಕೆಟ್‌’ನಲ್ಲಿ 50ಕ್ಕೂ ಹೆಚ್ಚು ರನ್ ಗಳಿಸಿದ ಭಾರತದ ಎರಡನೇ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್
ಅರ್ಧಶತಕದ ಜೊತೆ ಧೋನಿಯ ಶ್ರೇಷ್ಠ ದಾಖಲೆ ಮುರಿದ ಇಶಾನ್ ಕಿಶನ್: ಈ ವಿಷಯದಲ್ಲಿ ಗುರುವನ್ನೇ ಮೀರಿಸಿಬಿಟ್ಟನಲ್ಲ ಶಿಷ್ಯ…! title=
ishan kishan half century

IND vs AUS 2nd T20: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ T20 ಸರಣಿಯ ಎರಡನೇ ಪಂದ್ಯ ಇಂದು ತಿರುವನಂತಪುರದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತದ ಆರಂಭಿಕ ಜೋಡಿ ಯಶಸ್ವಿ ಜೈಸ್ವಾಲ್ ಮತ್ತು ರುತುರಾಜ್ ಗಾಯಕ್ವಾಡ್ ತಂಡಕ್ಕೆ ಉತ್ತಮ ಆರಂಭ ನೀಡಿದ್ದು, ಮೊದಲು ಬ್ಯಾಟ್ ಮಾಡಿದ ಭಾರತ ತಂಡ 4 ವಿಕೆಟ್ ನಷ್ಟಕ್ಕೆ 235 ರನ್ ಗಳಿಸಿದೆ.

ಇದನ್ನೂ ಓದಿ: 4 4 4 6 6 0… ಬ್ಯಾಕ್ ಟು ಬ್ಯಾಕ್ ಸಿಕ್ಸರ್-ಬೌಂಡರಿ… ಟೀಂ ಇಂಡಿಯಾ ಆಟಗಾರನ ‘ಯಶಸ್ವಿ’ ಅರ್ಧಶತಕ

ಇದೀಗ ಆಸ್ಟ್ರೇಲಿಯಾ ಗೆಲುವಿಗೆ 236 ರನ್‌’ಗಳ ಗುರಿ ಇದೆ. ಭಾರತದ ಪರ ಬ್ಯಾಟಿಂಗ್ ಮಾಡಿದ ಮೂವರೂ ಬ್ಯಾಟ್ಸ್‌ಮನ್‌ಗಳಾದ ಯಶಸ್ವಿ ಜೈಸ್ವಾಲ್ (53), ರಿತುರಾಜ್ ಗಾಯಕ್ವಾಡ್ (58) ಮತ್ತು ಇಶಾನ್ ಕಿಶನ್ (52) ಅದ್ಭುತ ಅರ್ಧಶತಕಗಳನ್ನು ಗಳಿಸಿದರು. ಅಂದಹಾಗೆ ಈ ಪಂದ್ಯದಲ್ಲಿ ಇಶಾನ್ ಕಿಶನ್ ಹೆಸರಲ್ಲಿ ವಿಶೇಷ ದಾಖಲೆಯೊಂದು ಸೇರ್ಪಡೆಗೊಂಡಿದೆ.

ಈ ಪಂದ್ಯದಲ್ಲಿ ಇಶಾನ್ ಕಿಶನ್ 52 ರನ್‌ ಕಲೆ ಹಾಕುವ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌’ನಲ್ಲಿ 50ಕ್ಕೂ ಹೆಚ್ಚು ರನ್ ಗಳಿಸಿದ ಭಾರತದ ಎರಡನೇ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಈ ವಿಚಾರದಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರನ್ನೂ ಹಿಂದಿಕ್ಕಿದ್ದಾರೆ.

ಧೋನಿ ಅಂತಾರಾಷ್ಟ್ರೀಯ ಟಿ20ಯಲ್ಲಿ ವಿಕೆಟ್‌ ಕೀಪರ್ ಬ್ಯಾಟ್ಸ್‌’ಮನ್ ಆಗಿ ಎರಡು ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಈಗ ಇಶಾನ್ ಕಿಶನ್ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌’ನಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ 3 ಬಾರಿ 50 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

1. ಕೆಎಲ್ ರಾಹುಲ್ 3 ಅರ್ಧ ಶತಕ

2. ಇಶಾನ್ ಕಿಶನ್ 3 ಅರ್ಧ ಶತಕ

3. ಮಹೇಂದ್ರ ಸಿಂಗ್ ಧೋನಿ 2 ಅರ್ಧ ಶತಕ

4. ರಿಷಬ್ ಪಂತ್ 2 ಅರ್ಧ ಶತಕ

ಇದನ್ನೂ ಓದಿ: ಈ ಚಿತ್ರದಲ್ಲಿ ವಿಭಿನ್ನ ಚಪ್ಪಲಿಗಳಿವೆ… ಅದರಲ್ಲೊಂದು ತಪ್ಪಿದೆ… ಆ ತಪ್ಪೇನೆಂದು ಕಂಡುಹಿಡಿಯಬಲ್ಲಿರಾ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News