ಈ ದಿನಾಂಕದಂದು ಖಾತೆಗೆ ಸೇರಲಿದೆ 18 ತಿಂಗಳ ಡಿಎ ಅರಿಯರ್ಸ್ : ಸರ್ಕಾರಿ ನೌಕರರ ಕೈ ಸೇರುವುದು 2 ಲಕ್ಷಕ್ಕೂ ಅಧಿಕ ಮೊತ್ತ

DA ARREAR UPDATE :ನೌಕರರು ಮತ್ತು ಪಿಂಚಣಿದಾರ ಖಾತೆ ಸೇರದೇ ಬಾಕಿ ಉಳಿದಿದ್ದ 18 ತಿಂಗಳ ಡಿಎ ಬಾಕಿ ಹಣ ಶೀಘ್ರದಲ್ಲೇ ಖಾತೆಗೆ ವರ್ಗಾವಣೆಯಾಗಲಿದೆ ಎಂದು ಹೇಳಲಾಗುತ್ತಿದೆ.   

Written by - Ranjitha R K | Last Updated : Dec 5, 2023, 09:15 AM IST
  • ಖಾತೆ ಸೇರಲಿದೆ ಡಿಎ ಬಾಕಿ ಹಣ
  • ಫಿಟ್‌ಮೆಂಟ್‌ ಫ್ಯಾಕ್ಟರ್ ನಲ್ಲಿಯೂ ಏರಿಕೆ
  • ಸುಮಾರು 2 ಲಕ್ಷ 18 ಸಾವಿರ ರೂ.ಗಳ ಲಾಭ
ಈ ದಿನಾಂಕದಂದು ಖಾತೆಗೆ ಸೇರಲಿದೆ 18 ತಿಂಗಳ ಡಿಎ ಅರಿಯರ್ಸ್ : ಸರ್ಕಾರಿ ನೌಕರರ ಕೈ ಸೇರುವುದು 2 ಲಕ್ಷಕ್ಕೂ ಅಧಿಕ ಮೊತ್ತ  title=

DA ARREAR UPDATE : ಮೋದಿ ಸರ್ಕಾರ ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ  ಭರ್ಜರಿ ಸಿಹಿ ಸುದ್ದಿ ನೀಡಿದೆ. ನೌಕರರು ಮತ್ತು ಪಿಂಚಣಿದಾರ ಖಾತೆ ಸೇರದೇ ಬಾಕಿ ಉಳಿದಿದ್ದ 18ತಿಂಗಳ ಡಿಎ ಬಾಕಿ ಹಣ ಶೀಘ್ರದಲ್ಲೇ ಖಾತೆಗೆ ವರ್ಗಾವಣೆಯಾಗಲಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಚುನಾವಣೆಯ ಹೊಸ್ತಿಲಲ್ಲಿ ಕೇಂದ್ರ ಸರ್ಕಾರಿ ನೌಕರರ ಮನ ಗೆಲ್ಲುವ ಕೆಲಸಕ್ಕೆ ಮೋದಿ ಸರ್ಕಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ. 

ಫಿಟ್‌ಮೆಂಟ್‌ ಫ್ಯಾಕ್ಟರ್ ನಲ್ಲಿಯೂ ಏರಿಕೆ : 
ಇದಲ್ಲದೆ, ಸರ್ಕಾರವು ಫಿಟ್‌ಮೆಂಟ್‌ ಫ್ಯಾಕ್ಟರ್ ನಲ್ಲಿಯೂ ಹೆಚ್ಚಳವನ್ನು ಘೋಷಿಸಬಹುದು. ಇದರಿಂದಾಗಿ ಮೂಲ ವೇತನದಲ್ಲಿ ಬಂಪರ್ ಹೆಚ್ಚಳ ಸಾಧ್ಯವಾಗುತ್ತದೆ. ಸರ್ಕಾರ ಈ ಎರಡೂ ದೊಡ್ಡ ಘೋಷಣೆಗಳನ್ನು ಮಾಡಿದರೆ, ಈ ವರ್ಷ ಸರ್ಕಾರಿ ನೌಕರರು ಲಾಟರಿ ಗೆದ್ದಂತೆಯೇ. 

ಇದನ್ನೂ ಓದಿ :  ನೌಕರಿಯಿಂದ ಬೇಸತ್ತು ಹೋಗಿರುವಿರಾ? ಬಿಸ್ನೆಸ್ ಆರಂಭಿಸಬೇಕೆ? ಕೈತುಂಬಾ ಸಂಪಾದನೆ ಕೊಡುವ 4 ಬಿಸ್ನೆಸ್ ಪರಿಕಲ್ಪನೆ ಕೇವಲ ನಿಮಗಾಗಿ!

ಇತ್ತೀಚೆಗೆ, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು (ಡಿಎ) 4 ಪ್ರತಿಶತದಷ್ಟು ಹೆಚ್ಚಿಸಲಾಗಿದೆ. ಈ ಮೂಲಕ  ವೇತನದಲ್ಲಿ ಏರಿಕೆ ಕಂಡುಬಂದಿದೆ. ಡಿಎ ಬಾಕಿ ಮತ್ತು ಫಿಟ್‌ಮೆಂಟ್ ಅಂಶದ ಬಗ್ಗೆ ಸರ್ಕಾರ ಇನ್ನೂ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಆದರೆ, ಈ ಬಗ್ಗೆ ಎಲ್ಲಾ ರೀತಿಯ ಸಿದ್ದತೆಗಳು ನದೆಯುತ್ತಿವೆ ಎಂದು ಮೂಲಗಳು ಹೇಳುತ್ತಿವೆ. 

ಖಾತೆ ಸೇರಲಿದೆ ಡಿಎ ಬಾಕಿ ಹಣ :
ಕೇಂದ್ರ ಸರ್ಕಾರವು 18 ತಿಂಗಳ ಡಿಎ ಬಾಕಿ ಹಣವನ್ನು ಶೀಘ್ರದಲ್ಲೇ ನೌಕರರ ಖಾತೆಗೆ ಕಳುಹಿಸಲಿದೆ. ಹೀಗಾದರೆ, ಕೇಂದ್ರ ನೌಕರರು ಮತ್ತು ಪಿಂಚಣಿದಾರರ ಖಾತೆಗಳಿಗೆ ಭಾರೀ ಮೊತ್ತದ ಹಣ ಬರುತ್ತದೆ. 

ಇದನ್ನೂ ಓದಿ :  ನಿಮ್ಮ 1000 ರೂ.ಗಳನ್ನು ಈ ಫಾರ್ಮ್ಯೂಲಾ ಬಳಸಿ ರಾಕೆಟ್ ವೇಗದಲ್ಲಿ 5.32 ಲಕ್ಷ ರೂ.ಗಳಾಗಿಸಿ!

ಉನ್ನತ ಶ್ರೇಣಿಯ ಉದ್ಯೋಗಿಗಳಿಗೆ ಸುಮಾರು 2 ಲಕ್ಷ 18 ಸಾವಿರ ರೂ.ಗಳ ಲಾಭವಾಗುವುದು. ಕರೋನಾ ವೈರಸ್ ಸೋಂಕಿನ ಅವಧಿಯಲ್ಲಿ, ಜನವರಿ 1, 2020 ರಿಂದ ಜೂನ್ 30, 2021 ರವರೆಗಿನ ಡಿಎ ಹಣವನ್ನು ನೌಕರರಿಗೆ ನೀಡಿರಲಿಲ್ಲ. ಈ ಹಣಕ್ಕಾಗಿ ಸರ್ಕಾರಿ ನೌಕರರು ಬೇಡಿಕೆ ಇಡುತ್ತಲೇ ಬಂದಿದ್ದಾರೆ. ಆದರೆ, ಈ ಬಾರಿ ನೌಕರರ ಬೇಡಿಕೆ ಈಡೇರಲಿದೆ ಎಂದೇ ಹೇಳಲಾಗುತ್ತಿದೆ. 

ಫಿಟ್ಮೆಂಟ್ ಅಂಶದಲ್ಲಿ ಹೆಚ್ಚಳ : 
ನೌಕರರು ಶೀಘ್ರದಲ್ಲೇ ಫಿಟ್‌ಮೆಂಟ್ ಅಂಶದ ಹೆಚ್ಚಳದ ಪ್ರಯೋಜನವನ್ನು ಪಡೆಯುತ್ತಾರೆ. ಈ ಹೆಚ್ಚಳದ ನಂತರ ನಂತರ ಕನಿಷ್ಠ ಮೂಲ ವೇತನದಲ್ಲಿಯೂ ಹೆಚ್ಚಳವಾಗುವುದು. ಸರ್ಕಾರ ಫಿಟ್‌ಮೆಂಟ್ ಅಂಶವನ್ನು 2.60 ರಿಂದ 3.0 ಪಟ್ಟು ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ. ಕೇಂದ್ರೀಯ ಉದ್ಯೋಗಿಗಳ ಸಂಘಟನೆಗಳು ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸಲು ಬಹಳ ಸಮಯದಿಂದ ಒತ್ತಾಯಿಸುತ್ತಿವೆ. 

ಇದನ್ನೂ ಓದಿ :  ಹಿಂದಿನ ಎಲ್ಲಾ ದಾಖಲೆ ಮುರಿದ ಬಂಗಾರದ ಬೆಲೆ ! ಇನ್ನು ಚಿನ್ನ ಖರೀದಿ ಬಲು ಕಷ್ಟ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News