ಪ್ರಿಯಾಂಕಾ ಚೋಪ್ರಾಗೂ ಡೀಪ್‌ಫೇಕ್ ಪ್ರಾಬ್ಲಂ: ಮುಖ ಬದಲಿಗೆ ವಿಡಿಯೋ ಧ್ವನಿ ಬದಲಿಸಿ ಶಾಕ್!

Priyanka Chopra: ಗ್ಲೋಬಲ್‌ ಸ್ಟಾರ್‌ ಪ್ರಿಯಾಂಕಾ ಚೋಪ್ರಾಗೆ ಡೀಪ್‌ಫೇಕ್ ಪ್ರಾಬ್ಲಂ  ಎದುರಾಗಿದ್ದು, ಈ ಪ್ರಕರಣದಲ್ಲಿ ಈಕೆಯ ವಿಡಿಯೋಗೆ ಮುಖ ಅಂಟಿಸುವ ಬದಲಿಗೆ ಆಕೆಯ ಹಳೆಯ ವಿಡಿಯೋ ಧ್ವನಿ ಬದಲಿಸಿ ಶಾಕ್ ನೀಡಿದ್ದಾರೆ.  

Written by - Zee Kannada News Desk | Last Updated : Dec 6, 2023, 02:28 PM IST
  • AI ಸಹಾಯದಿಂದ ಯಾರದ್ದೋ ದೇಹಕ್ಕೆ ಯಾರದ್ದೋ ಮುಖ ಅಂಟಿಸಿ ಫೇಕ್‌ ವಿಡಿಯೋ, ಫೋಟೊ ವೈರಲ್ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ.
  • ನಟಿ ಪ್ರಿಯಾಂಕಾ ಚೋಪ್ರಾಗೂ ಡೀಪ್‌ಫೇಕ್ ಪ್ರಾಬ್ಲಂ ಶುರುವಾಗಿದ್ದು, ಈ ಬಾರಿ ಹಸಿಬಿಸಿ ವಿಡಿಯೋಗೆ ನಟಿಯ ಮುಖ ಅಂಟಿಸುವ, ಬದಲಿಗೆ ಆಕೆಯ ಹಳೆಯ ವಿಡಿಯೋ ಧ್ವನಿ ಬದಲಿಸಿ ಶಾಕ್ ಕೊಟ್ಟಿದ್ದಾರೆ.
  • ಪಿಗ್ಗಿಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಆದರೆ ಈ ಬಾರಿ ಕಿಡಿಕೇಡಿಗಳು ನಟಿಯ ಮುಖ ಬದಲಿಸದೇ ಧ್ವನಿ ಬದಲಿಸಿದ್ದಾರೆ.
ಪ್ರಿಯಾಂಕಾ ಚೋಪ್ರಾಗೂ ಡೀಪ್‌ಫೇಕ್ ಪ್ರಾಬ್ಲಂ: ಮುಖ ಬದಲಿಗೆ ವಿಡಿಯೋ ಧ್ವನಿ ಬದಲಿಸಿ ಶಾಕ್! title=

Priyanka Chopra Deepfake: ಇತ್ತೀಚಿನ ದಿನಗಳಲ್ಲಿ AI ಸಹಾಯದಿಂದ ಯಾರದ್ದೋ ದೇಹಕ್ಕೆ ಯಾರದ್ದೋ ಮುಖ ಅಂಟಿಸಿ ಫೇಕ್‌ ವಿಡಿಯೋ, ಫೋಟೊ ವೈರಲ್ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇತ್ತೀಚೆಗೆ ಸಾಕಷ್ಟು ನಟಿಯರು ಡೀಪ್‌ಫೇಕ್‌ ವಿಡಿಯೋಗಳಿಂದ ಸಂಕಷ್ಟ ಎದುರಿಸಿವುದರ ಜೊತೆಗೆ, ನಟಿ ರಶ್ಮಿಕಾ ಮಂದಣ್ಣ ಫೇಕ್ ವಿಡಿಯೋ ಭಾರೀ ಸಂಚಲನ ಸೃಷ್ಟಿಸಿತ್ತು. ರಶ್ಮಿಕಾ ಬಳಿಕ ಕತ್ರೀಕಾ ಕೈಫ್, ಕಾಜೋಲ್, ಆಲಿಯಾ ಭಟ್‌ಗೂ ಇಂತದ್ದೇ ಕಹಿ ಅನುಭವ ಎದುರಾಗಿತ್ತು. ಆದರೆ ರಶ್ಮಿಕಾ ಬಿಟ್ಟು ಬೇರೆ ಯಾರು ಈ ಬಗ್ಗೆ ಮಾತನಾಡುವ ಗೋಜಿಗೆ ಹೋಗಲಿಲ್ಲ. ಇನ್ನು ಕಿರಿಕ್ ಬೆಡಗಿಗೆ ಅಮಿತಾಬ್ ಬಚ್ಚನ್ ಸೇರಿದಂತೆ ಸಾಕಷ್ಟು ನಟ-ನಟಿಯರು ಬೆಂಬಲವಾಗಿ ನಿಂತಿದ್ದರು. 

ಇದೀಗ ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾಗೂ ಡೀಪ್‌ಫೇಕ್ ಪ್ರಾಬ್ಲಂ ಶುರುವಾಗಿದ್ದು, ಈ ಬಾರಿ ಹಸಿಬಿಸಿ ವಿಡಿಯೋಗೆ ನಟಿಯ ಮುಖ ಅಂಟಿಸುವ, ಬದಲಿಗೆ ಆಕೆಯ ಹಳೆಯ ವಿಡಿಯೋ ಧ್ವನಿ ಬದಲಿಸಿ ಶಾಕ್ ಕೊಟ್ಟಿದ್ದಾರೆ. ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಸಿನಿಮಾಗಳಿಂದ ದೂರವಾಗಿದ್ದು, ಪತಿ ಹಾಗೂ ಮಗಳ ಜೊತೆ ವಿದೇಶದಲ್ಲಿ ವಾಸಿಸುತ್ತಿದ್ದಾರೆ. ಹಾಗೊಮ್ಮ ಈಗೊಮ್ಮೆ ಹಾಲಿವುಡ್ ಪ್ರಾಜೆಕ್ಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುವರಿಗೆ, ಈಗ ಆಕೆಗೆ ಡೀಪ್‌ಫೇಕ್‌ ಶಾಕ್ ಎದುರಾಗಿದೆ. 

ಇದನ್ನೂ ಓದಿ: 

ಪಿಗ್ಗಿಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಆದರೆ ಈ ಬಾರಿ ಕಿಡಿಕೇಡಿಗಳು ನಟಿಯ ಮುಖ ಬದಲಿಸದೇ ಧ್ವನಿ ಬದಲಿಸಿದ್ದಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ ಪ್ರಿಯಾಂಕಾ ಮಾತನಾಡಿದ್ದ ವಿಡಿಯೋ ಇದೀಗ ವೈರಲ್ ಆಗಿದ್ದು, ಆಕೆಯ ಧ್ವನಿ ಬದಲಾಗಿದೆ. ಆ ವಿಡಿಯೋದಲ್ಲಿ ಆಕೆ ನಕಲಿ ಬ್ರ್ಯಾಂಡ್ ಪ್ರಚಾರ ಮಾಡುತ್ತಿರುವಂತೆ ಕ್ರಿಯೇಟ್ ಮಾಡಲಾಗಿದ್ದು, ಆ ಬ್ರ್ಯಾಂಡ್‌ನಿಂದಾಗಿ 2023ರಲ್ಲಿ ತನ್ನ ವಾರ್ಷಿಕ ಆದಾಯ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಎಲ್ಲರೂ ಅದನ್ನು ಬಳಸಿ ಎಂದು ಪ್ರಿಯಾಂಕ ಹೇಳಿದಂತೆ ವಿಡಿಯೋ ಕ್ರಿಯೇಟ್ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಗರಂ ಆಗಿ, ಹಿಂಗೂ ಡೀಪ್‌ಫೇಕ್ ವಿಡಿಯೋ ಸೃಷ್ಟಿಸುತ್ತಿದ್ದಾರೆಂದು ಅಚ್ಚರಿಗೊಂಡಿದ್ದಾರೆ. 

ಮೊದಲಿಗೆ ಜಾರಾ ಪಟೇಲ್ ಎನ್ನುವ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ ತುಂಡು ಬಟ್ಟೆಯಲ್ಲಿ ಲಿಫ್ಟ್‌ ಒಳಗೆ ಪ್ರವೇಶಿಸುವ ವಿಡಿಯೋಗೆ ರಶ್ಮಿಕಾ ಮುಖ ಮಾರ್ಪ್ ಮಾಡಿ ವೈರಲ್ ಮಾಡಿದ್ದರು. ಬಳಿಕ ರೋಸಿ ಬ್ರೀನ್ ಎನ್ನುವ ಮತ್ತೊಬ್ಬ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ ಬಟ್ಟೆ ಬದಲಿಸುವ ವಿಡಿಯೋಗೆ ನಟಿ ಕಾಜೋಲ್ ಮುಖ ಅಂಟಿಸಿ ತೇಲಿ ಬಿಟ್ಟಿದ್ದರು. ಇನ್ನು ಯುವತಿಯೊಬ್ಬಳ ಹಸಿಬಿಸಿ ವಿಡಿಯೋಗೆ ಆಲಿಯಾ ಭಟ್ ಮುಖ ಅಂಟಿಸಿ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದರು. ಇದೀಗ ಪ್ರಿಯಾಂಕ ಚೋಪ್ರಾ ಧ್ವನಿ ಬದಲಿಸಿದ್ದಾರೆ. ಇದೆಲ್ಲಾ ನೋಡುತ್ತಿದ್ದರೆ ಮುಂದೆ ಈ ಡೀಪ್‌ಫೇಕ್ ಅನ್ನೋದು ಯಾವೆಲ್ಲಾ ಸ್ವರೂಪ ಪಡೆದುಕೊಳ್ಳಬಹುದು ಎಂದು ಆತಂಕ ಹುಟ್ಟಿಸುತ್ತದೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News