ಕೃಷ್ಣಾ ಪ್ರವಾಹದ ಕುರಿತು ಹೆಚ್.ಕೆ.ಪಾಟೀಲ್ ಬರೆದ ಪತ್ರಕ್ಕೆ ಸ್ಪಂದಿಸಿದ ಸಿಎಂ

ಕೃಷ್ಣಾ ನದಿಯಿಂದ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಕುರಿತಾಗಿ ಪತ್ರದ ಮೂಲಕ ಗಮನ ಸೆಳೆದ ಹಿರಿಯ ಕಾಂಗ್ರೆಸ್ ನಾಯಕ ಹೆಚ್ ಕೆ ಪಾಟೀಲ್ ರ ಮನವಿ ಸಿಎಂ ಯಡಿಯೂರಪ್ಪ ತಕ್ಷಣ ಸ್ಪಂದಿಸಿದ್ದಾರೆ.

Last Updated : Aug 4, 2019, 05:19 PM IST
 ಕೃಷ್ಣಾ ಪ್ರವಾಹದ ಕುರಿತು ಹೆಚ್.ಕೆ.ಪಾಟೀಲ್ ಬರೆದ ಪತ್ರಕ್ಕೆ ಸ್ಪಂದಿಸಿದ ಸಿಎಂ  title=

ಬೆಂಗಳೂರು: ಕೃಷ್ಣಾ ನದಿಯಿಂದ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಕುರಿತಾಗಿ ಪತ್ರದ ಮೂಲಕ ಗಮನ ಸೆಳೆದ ಹಿರಿಯ ಕಾಂಗ್ರೆಸ್ ನಾಯಕ ಹೆಚ್ ಕೆ ಪಾಟೀಲ್ ರ ಮನವಿ ಸಿಎಂ ಯಡಿಯೂರಪ್ಪ ತಕ್ಷಣ ಸ್ಪಂದಿಸಿದ್ದಾರೆ.

 

03-08-2019 ರಂದು ಎಚ್. ಕೆ.ಪಾಟೀಲ್ ಪತ್ರ ಬರೆದು 'ಕೃಷ್ಣಾದ ಪ್ರವಾಹದಿಂದ ಕಳವಳಕಾರಿ ಪರಿಸ್ಥಿತಿ ಉಂಟಾಗಿರುವಾಗ ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜಕೀಯ ಪ್ರಹಸನಕ್ಕಾಗಿ ಕೈಗೊಳ್ಳುತ್ತಿರುವ ದೆಹಲಿ ಪ್ರವಾಸ ರದ್ದುಗೊಳಿಸಿ ಸಂಕಷ್ಟದ ಪ್ರದೇಶಗಳಿಗೆ ಭೇಟಿ ನೀಡಿ. ಪ್ರಧಾನಿಯವರನ್ನು ಕಷ್ಟದಲ್ಲಿರುವಲ್ಲಿಗೆ ಭೆಟ್ಟಿ ನೀಡುವಂತೆ ಒತ್ತಾಯಿಸಿ. ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಕರೆಯಲು ಆಗ್ರಹಿಸುವೆ' ಎಂದು ಮನವಿ ಮಾಡಿಕೊಂಡಿದ್ದರು.

ಈಗ ಇದಕ್ಕೆ ಪ್ರತಿಕ್ರಿಯಿ ನೀಡಿರುವ ಸಿಎಂ ಯಡಿಯೂರಪ್ಪನವರು' ಕೃಷ್ಣಾ ಕೊಳ್ಳ ಪ್ರದೇಶದಲ್ಲಿ ಮಳೆ ಹಾಗೂ ಪ್ರವಾಹದಿಂದ ಉಂಟಾಗಿರುವ ಸಂಕಷ್ಟ ಪರಿಸ್ಥಿತಿ ಬಗ್ಗೆ ಬೆಳಕು ಚೆಲ್ಲಿದ್ದಕ್ಕೆ ಧನ್ಯವಾದಗಳು.ಈ ಭಾಗದ ಜನರ ಸಂಕಷ್ಟಕ್ಕೆ ಸ್ಪಂದಿಸಲು ಸರ್ಕಾರ ಸನ್ನದ್ದವಾಗಿದೆ ಎಂದು ಉತ್ತರಿಸಿದ್ದಾರೆ.

ಇದಾದ ನಂತರ ಸಿಎಂ ಯಡಿಯೂರಪ್ಪ  ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದ್ದಾರೆ.

 

Trending News