ಚಂದನವನದ ಖ್ಯಾತ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ ನಿಧನ!

Jolly Bastin: ಸ್ಯಾಂಡಲ್‌ವುಡ್‌ನ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್‌ ಹಠಾತ್ ಹೃದಯಘಾತದಿಂದ ಡಿಸೆಂಬರ್‌ 26 ಮಂಗಳವಾರದಂದು ನಿಧನರಾಗಿದ್ದಾರೆ.

Written by - Zee Kannada News Desk | Last Updated : Dec 27, 2023, 10:35 AM IST
  • ಸಾಹಸ ನಿರ್ದೇಶನ ಮಾಡಿದ್ದ ಜಾಲಿ ಬಾಸ್ಟಿನ್ 57 ನೇ ವಯಸ್ಸಿನಲ್ಲಿ ಹಠಾತ್ ಹೃದಯಘಾತದಿಂದ ಡಿಸೆಂಬರ್‌ 26 ಮಂಗಳವಾರದಂದು ನಿಧನ ಹೊಂದಿದ್ದಾರೆ.
  • ಸ್ಟಂಟ್‌ ಡೈರೆಕ್ಟರ್‌ ಜಾಲಿಯವರು ಕೇರಳದ ಅಲೆಪ್ಪೆಯಲ್ಲಿ 1966ರಲ್ಲಿ ಹುಟ್ಟುದ್ದರೂ, ಇವರು ಬೆಳೆದಿದ್ದು ಎಲ್ಲಾ ಬೆಂಗಳೂರಿನಲ್ಲೇ.
  • ಸಾಹಸ ಕಲಾವಿದನಾಗಿ, ಸಾಹಸ ನಿರ್ದೇಶಕನಾಗಿ ಕೆಲಸ ಮಾಡಿದ ಜಾಲಿ ಬಾಸ್ಟಿನ್, ಮೊದಲು ‘ಪ್ರೇಮಲೋಕ’ ಚಿತ್ರದಲ್ಲಿ ರವಿಚಂದ್ರನ್ ಅವರಿಗೆ ಡ್ಯೂಪ್ ಹಾಕಿದರು
ಚಂದನವನದ ಖ್ಯಾತ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ ನಿಧನ! title=

Jolly Bastin Expired: ಇತ್ತೀಚೆಗೆ ಭಾರತದ ಚಿತ್ರರಂಗಕ್ಕೆ ಒಂದಾದರ ಮೇಲೆ ಒಂದರಂತೆ ಶಾಕ್‌ಗಳು ಎದುರಾಗುತ್ತಲೇ ಇದ್ದು, ಹಲವಾರು ಕಲಾವಿದರೂ ಹೃದಯಾಘಾತದಿಂದ  ಮೃತಪಟ್ಟಿದ್ದಾರೆ. ಕನ್ನಡ ಚಿತ್ರರಂಗ ಸೇರಿ ಹಲವಾರು ಭಾಷೆಗಳಲ್ಲಿ ಸಾಹಸ ನಿರ್ದೇಶನ ಮಾಡಿದ್ದ ಜಾಲಿ ಬಾಸ್ಟಿನ್  57 ನೇ ವಯಸ್ಸಿನಲ್ಲಿ ಹಠಾತ್ ಹೃದಯಘಾತದಿಂದ ಡಿಸೆಂಬರ್‌ 26 ಮಂಗಳವಾರದಂದು ನಿಧನ ಹೊಂದಿದ್ದಾರೆ. ಜಾಲಿ ಬಾಸ್ಟಿನ್‌ ಅಗಲಿಕೆಯ ಸುದ್ದಿ  ಅನೇಕರಿಗೆ ದುಃಖ ತಂದಿದೆ.

ಸ್ಟಂಟ್‌ ಡೈರೆಕ್ಟರ್‌ ಜಾಲಿಯವರು ಕೇರಳದ ಅಲೆಪ್ಪೆಯಲ್ಲಿ 1966ರಲ್ಲಿ ಹುಟ್ಟುದ್ದರೂ, ಇವರು ಬೆಳೆದಿದ್ದು  ಎಲ್ಲಾ ಬೆಂಗಳೂರಿನಲ್ಲೇ. ಅವರು ಬೆಂಗಳೂರಿನಲ್ಲೇ ಶಿಕ್ಷಣ ಪಡೆದು, ಬಳಿಕ ಬೈಕ್ ಮೆಕಾನಿಕ್ ಆಗಿ ಜಾಲಿ ಬಾಸ್ಟಿನ್ ವೃತ್ತಿ ಆರಂಭಿಸಿದರು. ಜಾಲೀ ಬಾಸ್ಟಿನ್‌  ಕೇವಲ 17ನೇ ವಯಸ್ಸಿನಲ್ಲಿದ್ದಾಗ, ಇವರನ್ನು ಗುರುತಿಸಿದ ಕೆಲವರು ಸ್ಟಂಟ್​ಮನ್ ಆಗಿ ಚಿತ್ರರಂಗಕ್ಕೆ ಪರಿಚಯಿಸಿದರು. ತದನಂತರ ಜಾಲಿ ಅವರು ಈವರೆಗೆ 900ಕ್ಕೂ ಅಧಿಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ನ್ಯೂಯಾರ್ಕ್‌ನಲ್ಲಿ ಯುವತಿಯೊಂದಿಗೆ ಸಿಕ್ಕಿ ಬಿದ್ದ ನಟ ವಿಶಾಲ್‌ ವಿಡಿಯೋ ವೈರಲ್!

ಸಾಹಸ ಕಲಾವಿದನಾಗಿ, ಸಾಹಸ ನಿರ್ದೇಶಕನಾಗಿ ಕೆಲಸ ಮಾಡಿದ ಜಾಲಿ ಬಾಸ್ಟಿನ್, ಮೊದಲು ‘ಪ್ರೇಮಲೋಕ’ ಚಿತ್ರದಲ್ಲಿ ರವಿಚಂದ್ರನ್ ಅವರಿಗೆ ಡ್ಯೂಪ್ ಹಾಕಿದರು. ಜಾಲಿಯವರು ‘ನಿನಗಾಗಿ ಕಾದಿರುವೆ’ ಚಿತ್ರದ ಮೂಲಕ ನಿರ್ದೇಶಕನ ಕ್ಯಾಪ್ ತೊಟ್ಟವರು, ಬಳಿಕ ಕನ್ನಡ, ತಮಿಳು, ಮಲಯಾಳಂ ಚಿತ್ರಗಳಲ್ಲಿ ಸಾಹಸ ನಿರ್ದೇಶಕನಾಗಿ ಜಾಲಿ ಬಾಸ್ಟಿನ್ ಹೆಸರು ಮಾಡಿದ್ದರು. ಜಾಲಿ ಬಾಸ್ಟಿನ್‌ ಅವರು, ಒಂದು ಕಾಲಕ್ಕೆ ಅತಿಹೆಚ್ಚು ಸಂಭಾವನೆ ಪಡೆಯೋ ಸಾಹಸ ನಿರ್ದೇಶಕ ಎಂಬ ಹೆಗ್ಗಳಿಕೆ ಅವರಿಗೆ ಇತ್ತು.

ಸ್ಟಂಟ್‌ ಡೈರೆಕ್ಟರ್‌ ಜಾಲಿಯವರು ‘ಪ್ರೇಮಲೋಕ’, ‘ಪುಟ್ನಂಜ’, ‘ಅಣ್ಣಯ್ಯ’, ‘ಶಾಂತಿ ಕ್ರಾಂತಿ’ ಸೇರಿದಂತೆ ರವಿಚಂದ್ರನ್ ಅಭಿನಯದ ಹಲವಾರು ಸಿನಿಮಾಗಳಲ್ಲಿ ಜಾಲಿ ಕೆಲಸ ಮಾಡಿದ್ದಾರೆ. ರಿಸ್ಕಿ ಸ್ಟಂಟ್ ಮಾಡೋ ವೇಳೆ ಸಾಕಷ್ಟು ಬಾರಿ ಜಾಲಿ ಬಾಸ್ಟಿನ್ ಪೆಟ್ಟು ಮಾಡಿಕೊಂಡಿದ್ದು, ಅದರಲ್ಲೂ ‘ಭಲೇ ಚತುರ’ ಚಿತ್ರದ ಬಾಂಬ್ ಬ್ಲಾಸ್ಟ್ ದೃಶ್ಯದ ವೇಳೆ ಇವರ ದೇಹಕ್ಕೆ ಸಾಕಷ್ಟು ಹಾನಿ ಆಗಿತ್ತು. ‘ಪುಟ್ನಂಜ’ ಸಿನಿಮಾ ಶೂಟ್ ವೇಳೆ ಕೂಡ ಬೈಕ್‌ನಿಂದ ಬಿದ್ದು ಮುಖ ಹಾಗೂ ಕಾಲಿಗೆ ಪೆಟ್ಟಾಗಿತ್ತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News