12 ವಾರಗಳ ಜಿದ್ದಾಜಿದ್ದಿ, 8 ಮಂದಿ ನಾಮಿನೇಟ್… ಈ ವಾರ ದೊಡ್ಮನೆಯಿಂದ ಹೊರಹೋಗೋರು ಯಾರು ಗೊತ್ತಾ?

Bigg Boss Kannada Elimination: ಈ ವಾರ ತುಕಾಲಿ ಸಂತೋಷ್, ತನಿಷಾ ಕುಪ್ಪಂಡ, ವರ್ತೂರ್ ಸಂತೋಷ್, ವಿನಯ್ ಗೌಡ, ಕಾರ್ತಿಕ್ ಮಹೇಶ್, ಸಿರಿ, ಮೈಕಲ್ ಅಜಯ್, ಸಂಗೀತಾ ಶೃಂಗೇರಿ ನಾಮಿನೇಷನ್ ಖೆಡ್ಡಾಗೆ ಬಿದ್ದಿದ್ದಾರೆ.

Written by - Bhavishya Shetty | Last Updated : Dec 30, 2023, 04:52 PM IST
    • ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್
    • ನಾಮಿನೇಶನ್ ಸುಳಿಗೆ ಸಿಲುಕಿದ 8 ಮಂದಿ ಸದಸ್ಯರು
    • ಈ ವಾರ ಯಾವ ಸ್ಪರ್ಧಿ ಹೊರಹೋಗುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
12 ವಾರಗಳ ಜಿದ್ದಾಜಿದ್ದಿ, 8 ಮಂದಿ ನಾಮಿನೇಟ್… ಈ ವಾರ ದೊಡ್ಮನೆಯಿಂದ ಹೊರಹೋಗೋರು ಯಾರು ಗೊತ್ತಾ? title=
Bigg Boss Kannada 10

Bigg Boss Kannada: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಮನೆಯಲ್ಲಿ ವೀಕೆಂಡ್ ಮಜಾ ಶುರುವಾಗಿದೆ. ಕಳೆದ ವಾರ ಕಿಚ್ಚನ ಅನುಪಸ್ಥಿತಿಯಲ್ಲಿ ನಡೆದಿದ್ದ ವೀಕೆಂಡ್ ಪಂಚಾಯ್ತಿ, ಇಂದು ಕಿಚ್ಚನ ಉಪಸ್ಥಿತಿಯಲ್ಲೇ ನಡೆಯಲಿದೆ.

ಇದನ್ನೂ ಓದಿ: 6 ವರ್ಷ ಕಾದರೂ ಸಿಗದ ಸಿಗದ ಚಾನ್ಸ್… ಟೀಂ ಇಂಡಿಯಾ ಬಿಟ್ಟು ಈ ತಂಡ ಸೇರಿದ ಸ್ಟಾರ್ ಸ್ವಿಂಗ್ ಬೌಲರ್!

ಈ ವಾರ ಪೂರ್ತಿ ಫ್ಯಾಮಿಲಿ ರೌಂಡ್ ಆಗಿದ್ದು, ಸ್ಪರ್ಧಿಗಳ ಮನೆಯಿಂದ ಆಗಮಿಸಿದ್ದರು, ಈ ಕಾರಣದಿಂದ ಯಾವುದೇ ಟಾಸ್ಕ್’ಗಳು ಇರಲಿಲ್ಲ. ಆದರೂ ವಾರದ ಆರಂಭದಲ್ಲಿ ನಾಮಿನೇಶನ್ ಸುಳಿಗೆ ಸಿಲುಕಿದ್ದ 8 ಮಂದಿ ಸದಸ್ಯರಲ್ಲಿ ಒಬ್ಬರು ಈ ವಾರ ಮನೆಯಿಂದ ಹೊರಹೋಗೋದು ಫಿಕ್ಸ್ ಆಗಿದೆ.

ಈ ವಾರ ತುಕಾಲಿ ಸಂತೋಷ್, ತನಿಷಾ ಕುಪ್ಪಂಡ, ವರ್ತೂರ್ ಸಂತೋಷ್, ವಿನಯ್ ಗೌಡ, ಕಾರ್ತಿಕ್ ಮಹೇಶ್, ಸಿರಿ, ಮೈಕಲ್ ಅಜಯ್, ಸಂಗೀತಾ ಶೃಂಗೇರಿ ನಾಮಿನೇಷನ್ ಖೆಡ್ಡಾಗೆ ಬಿದ್ದಿದ್ದಾರೆ.

ಇನ್ನು ವೀಕೆಂಡ್ ಪಂಚಾಯ್ತಿಯ ಪ್ರೋಮೋ ಪ್ರಸಾರವಾಗುತ್ತಿದ್ದಂತೆ, ಸಂಗೀತಾ ಮೊದಲು ಸೇವ್ ಆಗಬೇಕು ಎಂದು ನೆಟಿಜನ್ಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  “ಈ ವೇಗಿಯನ್ನು ಈಗಿನಿಂದಲೇ ಸಿದ್ಧಪಡಿಸಿ, ಅತ್ಯುತ್ತಮ ಬೌಲರ್ ಆಗಬಹುದು”: ರವಿ ಶಾಸ್ತ್ರಿ ಸಲಹೆ

ಅಂದಹಾಗೆ ಕಳೆದ ವಾರ ಡಬಲ್ ಎಲಿಮಿನೇಷನ್ ನಡೆದಿದ್ದು, ಆ ಸಂದರ್ಭದಲ್ಲಿ ಅವಿನಾಶ್ ಶೆಟ್ಟಿ ಮತ್ತು ಮೈಕಲ್ ಔಟ್ ಆಗಿದ್ದರು. ಆದರೆ ಮೈಕಲ್ ಮನೆಯೊಳಗೆ ಮತ್ತೆ ಎಂಟ್ರಿಕೊಟ್ಟಿದ್ದರೂ ಸಹ ನೇರವಾಗಿ ನಾಮಿನೇಟ್ ಆಗಿದ್ದಾರೆ. ಇನ್ನೊಂದೆಡೆ ಈ ವಾರ ಯಾವ ಸ್ಪರ್ಧಿ ಹೊರಹೋಗುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News