ಕಳೆದ ಹತ್ತು ವರ್ಷಗಳಲ್ಲಿ ಕೇವಲ ಆರು ಚಿತ್ರಗಳನ್ನು ಮಾಡಿದ ಸ್ಟಾರ್‌ ನಟ.. ಗಳಿಸಿದ್ದು ಮಾತ್ರ 622 ಕೋಟಿ!

Bollywood Actor: ಈ ಸ್ಟಾರ್ ಕಳೆದ ಹತ್ತು ವರ್ಷಗಳಲ್ಲಿ ಕೇವಲ ಆರು ಚಿತ್ರಗಳನ್ನು ಮಾಡಿದ್ದು.. ಅದರಲ್ಲಿ ಎರಡು ಮಾತ್ರ ಹಿಟ್ ಆಗಿದ್ದವು.. ಆದರೆ, ಈತನ ಆದಾಯ ದಿನಕ್ಕೆ ದಿನಕ್ಕೆ ರೂ.3.24 ಲಕ್ಷ.. ಹಾಗಾದರೆ ಯಾರು ಆ ಶ್ರೀಮಂತ ನಟ ಇದೀಗ ತಿಳಿಯೋಣ ಬನ್ನಿ..  

Written by - Savita M B | Last Updated : Jan 15, 2024, 10:51 AM IST
  • ಸತತ ಚಿತ್ರಗಳಲ್ಲಿ ಬ್ಯುಸಿಯಾಗಿರುವ ಹೃತಿಕ್ ರೋಷನ್
  • ಕಳೆದ ಕೆಲವು ವರ್ಷಗಳಿಂದ ದೊಡ್ಡ ಹಿಟ್ ಗಳಿಲ್ಲದಿದ್ದರೂ ಸಿನಿಮಾ ಮಾಡುತ್ತಿದ್ದಾರೆ
  • ಹಿಟ್‌ಗಳು ಮತ್ತು ಫ್ಲಾಪ್‌ಗಳನ್ನು ಲೆಕ್ಕಿಸದ ಈ ನಟ ಭಾರಿ ಗಳಿಕೆ ಮಾಡುತ್ತಿದ್ದಾರೆ..
ಕಳೆದ ಹತ್ತು ವರ್ಷಗಳಲ್ಲಿ ಕೇವಲ ಆರು ಚಿತ್ರಗಳನ್ನು ಮಾಡಿದ ಸ್ಟಾರ್‌ ನಟ.. ಗಳಿಸಿದ್ದು ಮಾತ್ರ 622 ಕೋಟಿ! title=

Actor Hrithik Roshan: ಬಾಲಿವುಡ್ ನ ಸ್ಫುರದ್ರೂಪಿ ಹೃತಿಕ್ ರೋಷನ್... ಸತತ ಚಿತ್ರಗಳಲ್ಲಿ ಬ್ಯುಸಿಯಾಗಿರುವ ಅವರು ಕಳೆದ ಕೆಲವು ವರ್ಷಗಳಿಂದ ದೊಡ್ಡ ಹಿಟ್ ಗಳಿಲ್ಲದಿದ್ದರೂ ಸಿನಿಮಾ ಮಾಡುತ್ತಿದ್ದಾರೆ. ಹಿಟ್‌ಗಳು ಮತ್ತು ಫ್ಲಾಪ್‌ಗಳನ್ನು ಲೆಕ್ಕಿಸದ ಈ ನಟ ಭಾರಿ ಗಳಿಕೆ ಮಾಡುತ್ತಿದ್ದಾರೆ.. ಹೇಗೆ ಅಂತೀರಾ ಮುಂದೆ ಓದಿ..

ಹೃತಿಕ್ ರೋಷನ್ ಸಿನಿಮಾಗಳ ವಿಚಾರಕ್ಕೆ ಬಂದರೆ 2014ರಲ್ಲಿ ತೆರೆಕಂಡ ‘ಬ್ಯಾಂಗ್ ಬ್ಯಾಂಗ್’ ಸಿನಿಮಾ ಸೆಮಿ ಹಿಟ್ ಆಗಿತ್ತು. ಅದರ ನಂತರ 2016 ರಲ್ಲಿ 'ಮೊಹೆಂಜೊ ದಾರೋ' ಸಿನಿಮಾ ಮಾಡಿದರು. ರು.138 ಕೋಟಿಯ ಅದ್ಧೂರಿ ಬಜೆಟ್ ನಲ್ಲಿ ತಯಾರಾದ ಈ ಚಿತ್ರ ಕೇವಲ ರು.74 ಕೋಟಿ ಗಳಿಸುವಲ್ಲಿ ಯಶಸ್ವಿಯಾಯಿತು.. 

ಇದನ್ನೂ ಓದಿ-ಲುಂಗಿ ಬೀಸುತ್ತಾ, ಫುಲ್ ಸೌತ್ ಫೀಲ್ ಕೊಟ್ಟು, ಫಸ್ಟ್ ಲುಕ್ ನಲ್ಲಿ ರಾಜಾ ಸಾಬ್ ಆಗಿ ಬಂದ ಪ್ರಭಾಸ್

ಈ ಚಿತ್ರದ ನಂತರ, ಹೃತಿಕ್ ರೋಷನ್ ಅಭಿನಯದ 'ಕಾಬಿಲ್' 2017 ರಲ್ಲಿ ಬಿಡುಗಡೆಯಾಯಿತು ಮತ್ತು ಬಾಕ್ಸ್ ಆಫೀಸ್ನಲ್ಲಿ ಸೋತಿತು. 2019 ರಲ್ಲಿ, 'ಸೂಪರ್ -30' ಚಿತ್ರವು ಉತ್ತಮ ಯಶಸ್ಸನ್ನು ಪಡೆಯಿತು. ನಂತರ ಬಂದ 'ವಾರ್' ಚಿತ್ರ ಕೂಡ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆ ಮಾಡಿತ್ತು.

2022 ರಲ್ಲಿ ಬಿಡುಗಡೆಯಾದ 'ವಿಕ್ರಮ್ ವೇದ' ದೊಡ್ಡ ಫ್ಲಾಪ್ ಆಯಿತು. ಅದಾದ ನಂತರವೂ ಹೃತಿಕ್ ರೋಷನ್ ಸ್ಟಾರ್ ಡಮ್ ಸ್ವಲ್ಪವೂ ಬದಲಾಗಲಿಲ್ಲ. 51ರಲ್ಲೂ ಹೃತಿಕ್ ರೋಷನ್ ಗಳಿಕೆ ಕಿಂಚಿತ್ತು ಕಡಿಮೆಯಾಗಿಲ್ಲ. 2014 ರಿಂದ, ಹೃತಿಕ್ ದಿನಕ್ಕೆ ರೂ.3.28 ಲಕ್ಷಗಳನ್ನು ಗಳಿಸುತ್ತಿದ್ದಾರೆ.. 

ಹೌದು 2014 ರ ಬಿಸಿನೆಸ್ ಸ್ಟ್ಯಾಂಡರ್ಡ್ ವರದಿಯ ಪ್ರಕಾರ..  ಹೃತಿಕ್ ರೋಷನ್ ಅವರ ನಿವ್ವಳ ಮೌಲ್ಯ ರೂ.85 ಕೋಟಿಗಳು. ಅವರು ಶ್ರೀಮಂತರ ಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿದ್ದಾರೆ. 2020 ರ Wealth management ವರದಿಯ ಪ್ರಕಾರ.. ಹೃತಿಕ್ ರೋಷನ್ ಅವರ ನಿವ್ವಳ ಮೌಲ್ಯ 622 ಕೋಟಿ ದಾಟಿದೆ. ಅಂದರೆ ಶೇ.1170ರಷ್ಟು ಹೆಚ್ಚಳವಾಗಿದೆ.. 

ಇದನ್ನೂ ಓದಿ-ಮಾಲ್ಡೀವ್ಸ್ ಬಾಯ್ಕಾಟ್‌ ಹಿನ್ನೆಲೆ ಟ್ರಾವೆಲ್‌ ಟಿಕೇಟ್‌ ಕ್ಯಾನ್ಸಲ್‌ ಮಾಡಿದ ನಾಗಾರ್ಜುನ್‌!

ಹೃತಿಕ್ ರೋಷನ್ ಮುಂಬೈನಲ್ಲಿ ಐಷಾರಾಮಿ ಬಂಗಲೆಗಳು ಮತ್ತು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಅಲ್ಲದೇ ಜುಹು ಪ್ರದೇಶದಲ್ಲಿ ರೂ.100 ಕೋಟಿಗೂ ಹೆಚ್ಚು ಮೌಲ್ಯದ ಅಪಾರ್ಟ್ ಮೆಂಟ್‌ನ್ನು ಖರೀದಿಸಿದ್ದಾರೆ..  ಇವುಗಳ ಹೊರತಾಗಿ.. ಇತರ ವ್ಯವಹಾರಗಳೂ ಇವೆ.

ಹೃತಿಕ್ ರೋಷನ್ ಪ್ರತಿ ಚಿತ್ರಕ್ಕೆ ರೂ.80-85 ಕೋಟಿ ಚಾರ್ಜ್ ಮಾಡುತ್ತಿದ್ದಾರೆ. ಸದ್ಯ ಇವರ ಮೂರು ಚಿತ್ರಗಳು 2024 ರಲ್ಲಿ ಬಿಡುಗಡೆಗೆ ಸಿದ್ಧವಾಗಿವೆ. ಅವುಗಳಲ್ಲಿ 'ಫೈಟರ್', 'ವಾರ್-3' ಮತ್ತು 'ಕ್ರಿಶ್ 2' ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಲು ಸಿದ್ಧವಾಗಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

 

Trending News