How to link all provident fund accounts: ಖಾಸಗಿ ಉದ್ಯೋಗಿಗಳು ಉದ್ಯೋಗಗಳನ್ನು ಬದಲಾಯಿಸುವಾಗ ಕಂಪನಿಗಳು ಕೂಡಾ ಬದಲಾಗುತ್ತವೆ. ಯಾರೇ ಆಗಲಿ ಒಬ್ಬ ವ್ಯಕ್ತಿಯು ಕಂಪನಿ ಬದಲಾಯಿಸುವಾಗ ಹಳೆಯ UAN ಸಂಖ್ಯೆಯಿದ್ದರೆ ಹೊಸ PF ಖಾತೆಯು ಸ್ವಯಂಚಾಲಿತವಾಗಿ ಲಿಂಕ್ ಆಗುತ್ತದೆ ಎಂದು ಅನೇಕರು ಅಂದುಕೊಳ್ಳುತ್ತಾರೆ. ಆದರೆ ಹೀಗೆ ಅಂದುಕೊಂಡರೆ ಭಾರೀ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಕೆಲಸ ಬದಲಾಯಿಸಿದ ಕೂಡಲೇ ಉದ್ಯೋಗಿಗಳು ಸ್ವತಃ ಇಪಿಎಫ್ಒ ವೆಬ್ಸೈಟ್ಗೆ ಹೋಗಿ ತನ್ನ ಹೊಸ ಪಿಎಫ್ ಖಾತೆಯನ್ನು ಯುಎಎನ್ಗೆ ಲಿಂಕ್ ಮಾಡಬೇಕು.
ಖಾತೆಯನ್ನು ಲಿಂಕ್ ಮಾಡದಿದ್ದರೆ ಏನಾಗುತ್ತದೆ ? :
ಹಣಕಾಸು ತಜ್ಞರ ಪ್ರಕಾರ, ಹೊಸ ಇಪಿಎಫ್ ಖಾತೆಯನ್ನು ಹಳೆಯ ಖಾತೆಯೊಂದಿಗೆ ವಿಲೀನಗೊಳಿಸದಿದ್ದರೆ, ಹಳೆ ಖಾತೆಯಲ್ಲಿರುವ ಹಣವು ನಿಮಗೆ ಒಟ್ಟಿಗೆ ಕಾಣಿಸುವುದಿಲ್ಲ. ಅಲ್ಲದೆ ತೆರಿಗೆ ಉಳಿತಾಯದ ದೃಷ್ಟಿಯಿಂದಲೂ ಎರಡು ಖಾತೆಗಳನ್ನು ಲಿಂಕ್ ಮಾಡುವುದು ಅಗತ್ಯ. 5 ವರ್ಷಗಳವರೆಗೆ ನಿರಂತರವಾಗಿ ಹಣವನ್ನು ಠೇವಣಿ ಮಾಡಿದ ನಂತರ ನಿಮ್ಮ ಇಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯುವಾಗ, ಅದರ ಮೇಲೆ ಯಾವುದೇ ರೀತಿಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ಆದರೆ, ಅದಕ್ಕೂ ಮೊದಲು ಹಣವನ್ನು ಹಿಂಪಡೆದಾಗ ತೆರಿಗೆ ನೀಡಬೇಕಾಗುತ್ತದೆ.
ಇದನ್ನೂ ಓದಿ : Budget 2024 : ವೇತನ ವರ್ಗಕ್ಕೆ ದೊಡ್ಡ ಪರಿಹಾರ : ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯಲ್ಲಿ ಬದಲಾವಣೆ?
ಎಲ್ಲಾ ಕಂಪನಿಗಳು TDS ಅನ್ನು ಕಡಿತಗೊಳಿಸುತ್ತವೆ :
ನಿಮ್ಮ ಎಲ್ಲಾ EPF ಖಾತೆಗಳನ್ನು ವಿಲೀನಗೊಳಿಸದಿದ್ದರೆ, ಪ್ರತಿ ಕಂಪನಿಗೆ ಪ್ರತ್ಯೇಕವಾಗಿ TDS ಅನ್ನು ಪಾವತಿಸಬೇಕಾಗುತ್ತದೆ. ಉದಾಹರಣೆಗೆ, ನೀವು ತಲಾ 3 ವರ್ಷಗಳ ಕಾಲ ಎರಡು ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರೆ, ನಂತರ ಎರಡೂ ಕಂಪನಿಗಳ ಖಾತೆಗಳನ್ನು ವಿಲೀನಗೊಳಿಸಿದ ನಂತರ, ನಿಮ್ಮ ಒಟ್ಟು ಅನುಭವವನ್ನು 6 ವರ್ಷಗಳೆಂದು ಲೆಕ್ಕ ಹಾಕಲಾಗುತ್ತದೆ. ಇಲ್ಲವಾದರೆ ನಿಮ್ಮ ಅನುಭವವನ್ನು 3-3 ವರ್ಷಗಳವರೆಗೆ ಪ್ರತ್ಯೇಕವಾಗಿ ಲೆಕ್ಕ ಹಾಕಲಾಗುತ್ತದೆ.
ಖಾತೆಗಳನ್ನು ವಿಲೀನಗೊಳಿಸುವ ಪ್ರಕ್ರಿಯೆ :
-ನಿಮ್ಮ ಎಲ್ಲಾ EPFO ಖಾತೆಗಳನ್ನು ವಿಲೀನಗೊಳಿಸಲು ಬಯಸಿದರೆ, ಇದಕ್ಕಾಗಿ EPFO ಪೋರ್ಟಲ್ https://unifiedportal-mem.epfindia.gov.in ಅನ್ನು ಕ್ಲಿಕ್ ಮಾಡಿ .
- ನಂತರ, ಆನ್ಲೈನ್ ಸೇವೆಗಳ ವಿಭಾಗದಲ್ಲಿ 'One Member - One EPF Account' ಆಯ್ಕೆಮಾಡಿ.
- ನಂತರ, ನಿಮ್ಮ ವೈಯಕ್ತಿಕ ವಿವರಗಳನ್ನು ಮತ್ತು ಅಸ್ತಿತ್ವದಲ್ಲಿರುವ ಉದ್ಯೋಗದಾತರ ವಿವರಗಳನ್ನು ಭರ್ತಿ ಮಾಡುವ ಮೂಲಕ ನಿಮ್ಮ ಖಾತೆಯನ್ನು ಪರಿಶೀಲಿಸಿ.
- ಇಷ್ಟು ಮಾಡಿದ ನಂತರ, ಡೀಟೇಲ್ಸ್ ಮೇಲೆ ಕ್ಲಿಕ್ ಮಾಡಿದಾಗ ಹಳೆಯ ಉದ್ಯೋಗದಾತರ ಪಟ್ಟಿ ತೆರೆಯುತ್ತದೆ.
- ವರ್ಗಾಯಿಸಲು ಬಯಸುವ ಖಾತೆಯ ಮೇಲೆ ಕ್ಲಿಕ್ ಮಾಡಿ.
- ನಂತರ 'Get OTP' ಮೇಲೆ ಕ್ಲಿಕ್ ಮಾಡಿದ ತಕ್ಷಣ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಇದನ್ನು ಬರೆದು ಸಬ್ಮಿಟ್ ಮಾಡಿ.
ಈ ಪ್ರಕ್ರಿಯೆಯು ಪೂರ್ಣಗೊಂಡ ತಕ್ಷಣ ನಿಮ್ಮ ಪ್ರಸ್ತುತ ಉದ್ಯೋಗದಾತರು ಅದನ್ನು ಅನುಮೋದಿಸುತ್ತಾರೆ. ನಂತರ EPFO ನಿಮ್ಮ ಹಳೆಯ ಖಾತೆಯನ್ನು ಹೊಸ ಖಾತೆಗೆ ವಿಲೀನಗೊಳಿಸಲಾಗುತ್ತದೆ.
ಇದನ್ನೂ ಓದಿ : Arecanut today price January 18: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.