ಮೂವರು ಪಾಕಿಸ್ತಾನಿ ಯೋಧರನ್ನು ಕೊಂದ ಭಾರತೀಯ ಸೈನಿಕರು

ಓರ್ವ ಪಾಕಿಸ್ತಾನಿ ಯೋಧ ಈ ಸಂದರ್ಭದಲ್ಲಿ ಗಾಯಗೊಂಡಿರುವುದಾಗಿ ಮಾಹಿತಿ ದೊರೆತಿದೆ. ಆದರೂ ಈ ಬಗ್ಗೆ ಅಧಿಕಾರಿಗಳಿಂದ ಯಾವುದೇ ದೃಢ ಮಾಹಿತಿ ದೊರೆತಿಲ್ಲ. 

Last Updated : Dec 26, 2017, 10:51 AM IST
ಮೂವರು ಪಾಕಿಸ್ತಾನಿ ಯೋಧರನ್ನು ಕೊಂದ ಭಾರತೀಯ ಸೈನಿಕರು title=

ನವದೆಹಲಿ: ಇತ್ತೀಚೆಗಷ್ಟೇ ಪಾಕಿಸ್ತಾನದ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಭಾರತೀಯ ಸೇನೆಯ ನಾಲ್ವರು ಯೋಧರನ್ನು ಗುಂಡಿಕ್ಕಿ ಕೊಂದ ಬೆನ್ನಲ್ಲೇ, ಸೋಮವಾರ ಭಾರತೀಯ ಯೋಧರು ಇಂಡೋ-ಪಾಕ್ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಮೂವರು ಪಾಕ್ ಯೋಧರನ್ನು ಕೊಂದಿದ್ದಾರೆ. 

ಓರ್ವ ಪಾಕಿಸ್ತಾನಿ ಯೋಧ ಈ ಸಂದರ್ಭದಲ್ಲಿ ಗಾಯಗೊಂಡಿರುವುದಾಗಿ ಮಾಹಿತಿ ದೊರೆತಿದೆ. ಆದರೂ ಈ ಬಗ್ಗೆ ಅಧಿಕಾರಿಗಳಿಂದ ಯಾವುದೇ ದೃಢ ಮಾಹಿತಿ ದೊರೆತಿಲ್ಲ. 

ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿರುವಂತೆ ನಿನ್ನೆ ಭಾರತೀಯ ಸೈನಿಕರು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಪಾಕಿಸ್ತಾನಿ ಯೋಧರು ಸಾವನ್ನಪ್ಪಿದ್ದಾರೆ. ಅಂತೆಯೇ ಇಂಡೋ-ಪಾಕ್ ಗಡಿ ನಿಯಂತ್ರಣ ರೇಖೆ ಎಲ್ ಒಸಿ ಬಳಿ ಇರುವ ರಾಖಿಕ್ರಿ, ರಾವಲ್ ಕೋಟ್ ಸೆಕ್ಟರ್ ನಲ್ಲಿರುವ ಪಾಕಿಸ್ತಾನಿ ಪಡೆಗಳ ಕ್ಯಾಂಪ್ ಗಳ ಮೇಲೆ ಭಾರತೀಯ ಸೈನಿಕರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಅಲ್ಲಿದ್ದ ನಾಲ್ಕು ಸೈನಿಕರ ಮೇಲೆ ಗುಂಡಿನ ಮಳೆಗರೆಯಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

Trending News