18 ಬೌಂಡರಿ, 3 ಸಿಕ್ಸರ್, ಒಂದೇ ಇನ್ನಿಂಗ್ಸ್’ನಲ್ಲಿ 159 ರನ್… 24ರ ಹರೆಯದ ಭಾರತದ ಕ್ರಿಕೆಟಿಗನಿಂದ ಅಮೋಘ ಶತಕದಾಟ!

Prithvi Shaw Century: ಮುಂಬೈ ಪರ ಆಡುತ್ತಿದ್ದ ಅವರು ಛತ್ತೀಸ್‌’ಗಢ ವಿರುದ್ಧ ಭರ್ಜರಿ ಶತಕ ಬಾರಿಸಿದ್ದರು. ಬಿ ಗುಂಪಿನಲ್ಲಿ ನಡೆಯುತ್ತಿರುವ ಮುಂಬೈ ಮತ್ತು ಛತ್ತೀಸ್‌’ಗಢ ನಡುವಿನ ಪಂದ್ಯದ ಮೊದಲ ದಿನದ ಮೊದಲ ಸೆಷನ್‌’ನಲ್ಲಿ ಪೃಥ್ವಿ ಶಾ ಶತಕ ಪೂರೈಸಿದ್ದಾರೆ.

Written by - Bhavishya Shetty | Last Updated : Feb 9, 2024, 04:58 PM IST
    • ಮುಂಬೈ ಪರ ಆಡುತ್ತಿದ್ದ ಅವರು ಛತ್ತೀಸ್‌’ಗಢ ವಿರುದ್ಧ ಭರ್ಜರಿ ಶತಕ ಬಾರಿಸಿದ್ದರು
    • ಪೃಥ್ವಿ ಶಾ ಅಮೋಘ ಬ್ಯಾಟಿಂಗ್ ನಡೆಸಿ 102 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ
    • ಕಳೆದ ವರ್ಷ ಕೌಂಟಿ ಕ್ರಿಕೆಟ್ ಆಡುವಾಗ ಶಾ ಗಾಯಗೊಂಡಿದ್ದರು
18 ಬೌಂಡರಿ, 3 ಸಿಕ್ಸರ್, ಒಂದೇ ಇನ್ನಿಂಗ್ಸ್’ನಲ್ಲಿ 159 ರನ್… 24ರ ಹರೆಯದ ಭಾರತದ ಕ್ರಿಕೆಟಿಗನಿಂದ ಅಮೋಘ ಶತಕದಾಟ! title=
prithvi shaw

Prithvi Shaw Century: ಭಾರತ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಸರಣಿ ನಡೆಯುತ್ತಿದೆ. ಎರಡು ಟೆಸ್ಟ್ ಪಂದ್ಯಗಳ ಬಳಿಕ ಸರಣಿ 1-1ರಲ್ಲಿ ಸಮಬಲಗೊಂಡಿದೆ. ಇನ್ನುಳಿದ ಮೂರು ಟೆಸ್ಟ್ ಪಂದ್ಯಗಳಿಗೆ ಭಾರತ ತಂಡವನ್ನು ಪ್ರಕಟಿಸಬೇಕಿದೆ. ಇದಕ್ಕೂ ಮುನ್ನ 24ರ ಹರೆಯದ ಬ್ಯಾಟ್ಸ್‌’ಮನ್ ಪೃಥ್ವಿ ಶಾ 2024ರ ರಣಜಿ ಟ್ರೋಫಿಯಲ್ಲಿ ವಿಧ್ವಂಸಕತೆಯನ್ನು ಸೃಷ್ಟಿಸಿದ್ದಾರೆ.

ಇದನ್ನೂ ಓದಿ: 200 ವರ್ಷಗಳ ಬಳಿಕ ಈ ಜನ್ಮರಾಶಿಯಲ್ಲಿ ರಾಜಯೋಗ: ಬಾಳು ಪ್ರವೇಶಿಸಲಿದೆ ಕೀರ್ತಿ-ಪ್ರತಿಷ್ಠೆ, ಇನ್ನೇನಿದ್ದರೂ ಗೆಲುವಿನದ್ದೇ ರಾಜ್ಯಭಾರ!

ಮುಂಬೈ ಪರ ಆಡುತ್ತಿದ್ದ ಅವರು ಛತ್ತೀಸ್‌’ಗಢ ವಿರುದ್ಧ ಭರ್ಜರಿ ಶತಕ ಬಾರಿಸಿದ್ದರು. ಬಿ ಗುಂಪಿನಲ್ಲಿ ನಡೆಯುತ್ತಿರುವ ಮುಂಬೈ ಮತ್ತು ಛತ್ತೀಸ್‌’ಗಢ ನಡುವಿನ ಪಂದ್ಯದ ಮೊದಲ ದಿನದ ಮೊದಲ ಸೆಷನ್‌’ನಲ್ಲಿ ಪೃಥ್ವಿ ಶಾ ಶತಕ ಪೂರೈಸಿದ್ದಾರೆ.

ಪೃಥ್ವಿ ಶಾ ಅಮೋಘ ಬ್ಯಾಟಿಂಗ್ ನಡೆಸಿ 102 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ (185 ಎಸೆತಗಳಿಗೆ 159 ರನ್ ಗಳಿಸಿ ಔಟ್ ಆಗಿದ್ದಾರೆ). ಈ ಇನ್ನಿಂಗ್ಸ್‌’ನಲ್ಲಿ 18 ಬೌಂಡರಿ ಮತ್ತು 3 ಸಿಕ್ಸರ್‌’ಗಳನ್ನು ಸಿಡಿಸಿದ್ದಾರೆ, ಇನ್ನು ಇದು ಅವರ ಪ್ರಥಮ ದರ್ಜೆ ವೃತ್ತಿ ಬದುಕಿನ 13ನೇ ಶತಕವಾಗಿದೆ.

ಕಳೆದ ವರ್ಷ ಕೌಂಟಿ ಕ್ರಿಕೆಟ್ ಆಡುವಾಗ ಶಾ ಗಾಯಗೊಂಡಿದ್ದರು. ಅಂದಿನಿಂದ ಅವರು ಕ್ರಿಕೆಟ್’ನಿಂದ ದೂರವಿದ್ದಾರೆ. ನಾರ್ಥಾಂಪ್ಟನ್‌’ಶೈರ್ ವಿರುದ್ಧ ರಾಯಲ್ ಲಂಡನ್ ODI ಕಪ್ ಆಡುವಾಗ ಅಸ್ಥಿರಜ್ಜು ಗಾಯಕ್ಕೆ ತುತ್ತಾಗಿದ್ದರು. ಇದರ ನಂತರ ಶಸ್ತ್ರಚಿಕಿತ್ಸೆಗೆ ಕೂಡ ಒಳಗಾಗಬೇಕಾಯಿತು. ಇದೀಗ ಚೇತರಿಸಿಕೊಂಡು ತಂಡಕ್ಕೆ ಮರಳಿರುವ ಅವರು ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ.

ಇದನ್ನೂ ಓದಿ: ಅವಕಾಶ ಕಸಿದುಕೊಂಡ ಬೆನ್ನು ನೋವು: ಕೊನೆಯ 3 ಟೆಸ್ಟ್ ಪಂದ್ಯಗಳಿಗೆ ಈ ಪ್ರಮುಖ ಪ್ಲೇಯರ್ ಅಲಭ್ಯ!

2018 ರಲ್ಲಿ ಪಾದಾರ್ಪಣೆ ಮಾಡಿದ 24 ವರ್ಷದ ಪೃಥ್ವಿ ಶಾ ಭಾರತದ ಪರ 5 ಟೆಸ್ಟ್, 6 ODI ಮತ್ತು ಒಂದು T20 ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ದಾರೆ. ಆದರೆ, ಅವರಿಗೆ ಟೀಂ ಇಂಡಿಯಾದಲ್ಲಿ ಹೆಚ್ಚು ಕಾಲ ಉಳಿಯಲು ಸಾಧ್ಯವಾಗಿಲ್ಲ.  2020 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಅಂದಿನಿಂದ ಭಾರತ ಟೆಸ್ಟ್ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News