Viral News: ಕೋರ್ಟ್ ವಿಚಾರಣೆ ವೇಳೆಯೇ ನ್ಯಾಯಾಧೀಶೆಗೆ ಪ್ರೇಮ ನಿವೇದನೆ ಮಾಡಿದ ಕಳ್ಳ..!

Viral Video: ಲೂಯಿಸ್‌ನ ಕಳ್ಳತನದ ಆರೋಪ ಹಾಗೂ ಕೋರ್ಟ್‌ನಲ್ಲಿ ಆತ ಈ ರೀತಿ ವರ್ತಿಸಲು ಕಾರಣವೇನು ಎಂಬುದನ್ನು ಕಂಡುಕೊಂಡ ನ್ಯಾಯಾಧೀಶೆ ತಬಿತಾ, ಆತನಿಗೆ 5 ಸಾವಿರ ಡಾಲರ್ ದಂಡ ವಿಧಿಸಿ ಆದೇಶಿಸಿದ್ದಾರೆ.

Written by - Puttaraj K Alur | Last Updated : Feb 10, 2024, 12:19 AM IST
  • ಕಳ್ಳತನ ಮಾಡಿ ಜೈಲುಪಾಲಾದರೂ ಬುದ್ದಿ ಕಲಿಯದ ಖದೀಮ
  • ಕೋರ್ಟ್‌ ವಿಚಾರಣೆ ವೇಳೆ ನ್ಯಾಯಾಧೀಶೆಗೆ ಪ್ರೇಮ ನಿವೇದನೆ
  • ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವಿಡಿಯೋ ವಿಡಿಯೋ
Viral News: ಕೋರ್ಟ್ ವಿಚಾರಣೆ ವೇಳೆಯೇ ನ್ಯಾಯಾಧೀಶೆಗೆ ಪ್ರೇಮ ನಿವೇದನೆ ಮಾಡಿದ ಕಳ್ಳ..! title=
ನ್ಯಾಯಾಧೀಶೆಗೆ ಪ್ರೇಮ ನಿವೇದನೆ

ನವದೆಹಲಿ: ಆತ ಕಳ್ಳತನ ಮಾಡಿ ಜೈಲುಪಾಲಾಗಿದ್ದ ಅಸಾಮಿ… ಜೈಲುಕಂಬಿ ಹಿಂದೆ ಶಿಕ್ಷೆ ಅನುಭವಿಸುತ್ತಿದ್ದರೂ ಆತನಿಗೆ ತನ್ನ ತಪ್ಪಿನ ಅರಿವಾಗಿರಲಿಲ್ಲ. ಮಾಡಿದ ತಪ್ಪಿಗೆ ಶಿಕ್ಷೆ ಪ್ರಮಾಣ ಪ್ರಕಟಿಸುತ್ತಿದ್ದ ವೇಳೆಯೇ ಆತ ನ್ಯಾಯಾಧೀಶೆಗೆ ಲೈನ್ ಹಾಕಿ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾನೆ. ಈ ಘಟನೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಆತನ ವರ್ತನೆಗೆ ಅನೇಕರು ಕಿಡಿಕಾರಿದ್ದಾರೆ. ಅಷ್ಟಕ್ಕೂ ಏನಿದು ಘಟನೆ ಅಂತೀರಾ? 

ಈ ವಿಚಿತ್ರ ಘಟನೆಗೆ ಸಾಕ್ಷಿಯಾಗಿದ್ದು ಫ್ಲೋರಿಡಾದ ಬ್ರೋವರ್ಡ್ ಕೌಂಟಿ ಕೋರ್ಟ್. ವಿಡಿಯೋದಲ್ಲಿ ಒಂದೆಡೆ ಕಳ್ಳತನದ ಆರೋಪಿ ಡೆಮೆಟ್ರಿಯಸ್ ಲೂಯಿಸ್ ಇದ್ದರೆ, ಮತ್ತೊಂದು ಕಡೆ ಮಹಿಳಾ ಜಡ್ಜ್ ತಬಿತಾ ಬ್ಲ್ಯಾಕ್ಮನ್ ವಿಚಾರಣೆ ನಡೆಸಲು ಹಾಜರಾಗುತ್ತಾರೆ. ವರ್ಚುವಲ್ ಕೋರ್ಟ್ ಮೂಲಕ ನ್ಯಾಯಾಧೀಶೆ ತೀರ್ಪಿನ ಪ್ರತಿ ಓದಲು ಆರಂಭಿಸುತ್ತಿದ್ದಂತೆ ಸುಮ್ಮನೇ ನಿಲ್ಲದ ಆರೋಪಿ ವಿಚಿತ್ರವಾಗಿ ವರ್ತಿಸಲು ಶುರು ಮಾಡುತ್ತಾನೆ.

ಇದನ್ನೂ ಓದಿ: ಪಲ್ಸ್ ಪೋಲಿಯೋಗೆ ಸಂಬಂಧಿಸಿದಂತೆ ಪೂರ್ವ ವಲಯದಲ್ಲಿ ಸಭೆ: ಧ್ವನಿವರ್ಧಕಗಳ ಮೂಲಕ ಜಾಗೃತಿ

ತಾನು ಮಾಡಿದ ಅಪರಾಧಕ್ಕೆ ಶಿಕ್ಷೆ ಪ್ರಕಟಿಸುತ್ತಿರುವುದು ಕೋರ್ಟ್‌ನ ನ್ಯಾಯಾಧೀಶರು ಎಂಬ ಪರಿಜ್ಞಾನವೇ ಇಲ್ಲದ ಆರೋಪಿ ಅನುಚಿತವಾಗಿ ವರ್ತಿಸಿದ್ದಾನೆ. ‘ನ್ಯಾಯಾಧೀಶರೇ ನೀವು ನೋಡಲು ಬಹಳ ಸುಂದರವಾಗಿದ್ದೀರಾ.. ನಾನು ನಿಮಗೆ ಹೇಳುವುದು ಇಷ್ಟೇ, ನಾನು ನಿಮ್ಮನ್ನು ಪ್ರೀತಿಸುತ್ತಿದ್ದೇನೆ’ ಎಂದು ಹೇಳುವ ಮೂಲಕ ತೀರ್ಪು ಪ್ರಕಟಿಸಲು ಆತ ಅಡ್ಡಿಯನ್ನುಂಟು ಮಾಡಿದ್ದಾನೆ.

ಆರೋಪಿ ಹೀಗೆ ಹೇಳುತ್ತಿದ್ದಂತೆಯೇ ತುಸು ವಿಚಲಿತರಾದ ಮಹಿಳಾ ಜಡ್ಜ್ ಬಳಿಕ ನಗೆಯಾಡಿದ್ದಾರೆ. ಅಲ್ಲದೇ ಎಲ್ಲಿ ಬೇಕಿದ್ದರೂ ನೀನು ಕಳ್ಳತನ ಮಾಡಬಹುದು. ಆದರೆ ಕೋರ್ಟ್‌ನಲ್ಲಿ ಎಂದು ಹೇಳಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.

ಇದನ್ನೂ ಓದಿ: ಸುಮಾರು ದಶಕಗಳ ನಂತರ ಭಾರತದಲ್ಲಿ ನಡೆಯಲಿದೆ 71ನೇ ಆವೃತ್ತಿಯ ವಿಶ್ವ ಸುಂದರಿ ಸ್ಪರ್ಧೆ

ಲೂಯಿಸ್‌ನ ಕಳ್ಳತನದ ಆರೋಪ ಹಾಗೂ ಕೋರ್ಟ್‌ನಲ್ಲಿ ಆತ ಈ ರೀತಿ ವರ್ತಿಸಲು ಕಾರಣವೇನು ಎಂಬುದನ್ನು ಕಂಡುಕೊಂಡ ನ್ಯಾಯಾಧೀಶೆ ತಬಿತಾ, ಆತನಿಗೆ 5 ಸಾವಿರ ಡಾಲರ್ ದಂಡ ವಿಧಿಸಿ ಆದೇಶಿಸಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಲೂಯಿಸ್ ಈಗಾಗಲೇ 4 ವರ್ಷಗಳ ಜೈಲುವಾಸ ಅನುಭವಿಸಿದ್ದಾನೆ. ನ್ಯಾಯಾಧೀಶೆ ಜೊತೆ ಅನುಚಿತವಾಗಿ ವರ್ತಿಸಿದ್ದಕ್ಕೆ ಆತನಿಗೆ ಯಾವುದೇ ಶಿಕ್ಷೆ ವಿಧಿಸಿಲ್ಲವಾದರೂ ಸಹ ಆತನ ಅತಿರೇಕದ ವರ್ತನೆಯಿಂದ ಟ್ರೋಲಿಗರ ಬಾಯಿಗೆ ತುತ್ತಾಗಿದ್ದಾನೆ. ಒಟ್ನಲ್ಲಿ ಈ ತಮಾಷೆಯ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಭರ್ಜರಿ ಸದ್ದು ಮಾಡುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News