Magh Purnima Remedies: ಸಕಲ ಸಂಕಷ್ಟಗಳಿಂದ ಮುಕ್ತಿ ಪಡೆಯಲು ಮಾಘ ಹುಣ್ಣಿಮೆಯಂದು ಪುಣ್ಯ ಸ್ನಾನದ ಬಳಿಕ ತಪ್ಪದೇ ಮಾಡಿ ಈ ಕೆಲಸ

Magh Purnima: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ,  ಮಾಘ ಹುಣ್ಣಿಮೆಯಲ್ಲಿ ಪವಿತ್ರ ಸ್ನಾನದ ನಂತರ ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಜೀವನದಲ್ಲಿ ಎದುರಾಗಿರುವ ಸಮಸ್ಯೆಗಳಿಂದ ಸುಲಭ ಪರಿಹಾರ ಪಡೆಯಬಹುದು ಎಂದು ಹೇಳಲಾಗುತ್ತದೆ. 

Written by - Yashaswini V | Last Updated : Feb 20, 2024, 10:03 AM IST
  • ಹಿಂದೂ ಧರ್ಮದಲ್ಲಿ ಮಾಘ ಮಾಸವನ್ನು ಪವಿತ್ರ ಮಾಸಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.
  • ಈ ಮಾಸದಲ್ಲಿ ಪವಿತ್ರ ನದಿಯಲ್ಲಿ ಸ್ನಾನ ಮಾಡುವುದನ್ನು ಕೂಡ ಶುಭ ಎಂದು ಹೇಳಲಾಗುತ್ತದೆ.
  • ಈ ಮಾಸದಲ್ಲಿ ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಜೀವನದಲ್ಲಿ ಎದುರಾಗಿರುವ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು ಎನ್ನಲಾಗುತ್ತದೆ.
Magh Purnima Remedies: ಸಕಲ ಸಂಕಷ್ಟಗಳಿಂದ ಮುಕ್ತಿ ಪಡೆಯಲು ಮಾಘ ಹುಣ್ಣಿಮೆಯಂದು ಪುಣ್ಯ ಸ್ನಾನದ ಬಳಿಕ ತಪ್ಪದೇ ಮಾಡಿ ಈ ಕೆಲಸ  title=

Magh Purnima Remedies: ಸನಾತನ ಧರ್ಮದಲ್ಲಿ, ಪ್ರತಿಯೊಂದು ದಿನಕ್ಕೂ ಅದರದೇ ಆದ ವಿಶೇಷತೆ, ಮಹತ್ವವನ್ನು ಹೇಳಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಅಮಾವಾಸ್ಯೆ ಮತ್ತು ಹುಣ್ಣಿಮೆ ತಿಥಿಗೆ ವಿಶೇಷ ಮಹತ್ವವಿದೆ. ಅದರಲ್ಲೂ, ಪವಿತ್ರ ಮಾಸಗಳಲ್ಲಿ ಬರುವ ಹುಣ್ಣಿಮೆಗೆ ಹೆಚ್ಚಿನ ಮಹತ್ವವಿದೆ. ಮಾಘ ಮಾಸದಲ್ಲಿ ಬರುವ ಹುಣ್ಣಿಮೆಯನ್ನು ಮಾಘಿ ಹುಣ್ಣಿಮೆ ಎಂದು ಕರೆಯಲಾಗುತ್ತದೆ. 

ಧಾರ್ಮಿಕ ನಂಬಿಕೆಗಳ ಪ್ರಕಾರ, ಮಾಘಿ ಹುಣ್ಣಿಮೆಯ ದಿನ ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ಮತ್ತು ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿಯ ಕೃಪೆಗೆ ಪಾತ್ರರಾಗಬಹುದು. ಇದರೊಂದಿಗೆ ಜೀವನದಲ್ಲಿ ಎದುರಾಗಿರುವ ನಾನಾ ಬಗೆಯ ಸಂಕಷ್ಟಗಳಿಂದ ಮುಕ್ತಿಯನ್ನು ಪಡೆಯಬಹುದು ಎಂದು ನಂಬಲಾಗಿದೆ. 

2024ರಲ್ಲಿ ಮಾಘಿ ಹುಣ್ಣಿಮೆ ಯಾವಾಗ? 
ಹಿಂದೂ ಕ್ಯಾಲೆಂಡರ್ ಪ್ರಕಾರ, ಮಾಘ ಪೂರ್ಣಿಮಾವನ್ನು ಈ ವರ್ಷ ಫೆಬ್ರವರಿ 24 ರಂದು ಆಚರಿಸಲಾಗುತ್ತದೆ.  ಮಾಘ ಪೂರ್ಣಿಮೆಯ ಉಪವಾಸವನ್ನು ಸಹ ಆಚರಿಸಲಾಗುತ್ತದೆ.  ಈ ದಿನ ಸೂರ್ಯೋದಕ್ಕೂ ಮೊದಲೇ ಪುಣ್ಯ ನದಿಯಲ್ಲಿ ಸ್ನಾನ ಮಾಡಿ, ಕೆಲವು ವಿಶೇಷ ಕೆಲಸಗಳನ್ನು ಮಾಡುವುದರಿಂದ ಜೀವನದಲ್ಲಿ ಒಳ್ಳೆಯ ಫಲಗಳನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ- Surya Shani Yuti: ಕುಂಭ ರಾಶಿಯಲ್ಲಿ ಒಟ್ಟಿಗೆ ಸೇರಲಿದ್ದಾರೆ ಸೂರ್ಯ-ಶನಿ, ನಿಮ್ಮ ಮೇಲೆ ಏನು ಪರಿಣಾಮ

ಜೀವನದಲ್ಲಿ ಎದುರಾಗಿರುವ ಸಮಸ್ಯೆಗಳಿಂದ ಮುಕ್ತಿಗಾಗಿ ಮಾಘ ಹುಣ್ಣಿಮೆ ಪುಣ್ಯ ಸ್ನಾನದ ಬಳಿಕ ಈ ಕೆಲಸಗಳನ್ನು ತಪ್ಪದೇ ಮಾಡಿ: 
ಸೂರ್ಯದೇವನಿಗೆ ಅರ್ಘ್ಯ: 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಾಘ ಹುಣ್ಣಿಮೆಯ ದಿನ ಸೂರ್ಯೋದಯಕ್ಕೂ ಮೊದಲೇ ಪುಣ್ಯ ನದಿಯಲ್ಲಿ ಸ್ನಾನ ಮಾಡಿ ಸೂರ್ಯೋದಯದ ಸಮಯದಲ್ಲಿ ಸೂರ್ಯದೇವನಿಗೆ ಅರ್ಘ್ಯವನ್ನು ಅರ್ಪಿಸುವುದರಿಂದ ಪಾಪಗಳಿಂದ ಮುಕ್ತಿ ದೊರೆಯುತ್ತದೆ ಎಂದು ನಂಬಲಾಗಿದೆ. 

ದಾನ: 
ಮಾಘ ಹುಣ್ಣಿಮೆಯಲ್ಲಿ ದೀನದಲಿತರಿಗೆ ದಾನ ಮಾಡುವುದರಿಂದ ದೇವ-ದೇವತೆಗಳು ಸಂತುಷ್ಟರಾಗಿ ಭಕ್ತರಿಗೆ ಆಶೀರ್ವಾದವನ್ನು ನೀಡುತ್ತಾರೆ. ಇದರಿಂದ ಜೀವನದಲ್ಲಿ ಎಂತಹುದ್ದೇ ಬೆಟ್ಟದಂತ ಸಮಸ್ಯೆ ಇದ್ದರೂ ಮಂಜಿನಂತೆ ಕರಗುತ್ತದೆ ಎನ್ನಲಾಗುತ್ತದೆ. 

ಧಾನ್ಯಗಳು-ಹಣ್ಣುಗಳ ದಾನ: 
ಮಾಘ ಹುಣ್ಣಿಮೆಯಲ್ಲಿ ಪವಿತ್ರ ಸ್ನಾನದ ಬಳಿಕ ನಿಮ್ಮ ಕೈಲಾದಷ್ಟೂ ಧಾನ್ಯಗಳು ಮತ್ತು ಹಣ್ಣುಗಳನ್ನು ಅಗತ್ಯವಿರುವವರಿಗೆ ದಾನ ಮಾಡುವುದರಿಂದ ನಿಮ್ಮೆಲ್ಲಾ ಸಮಸ್ಯೆಗಳಿಗೂ ಮುಕ್ತಿ ದೊರೆಯುತ್ತದೆ ಎಂದು ನಂಬಲಾಗಿದೆ. 

ಇದನ್ನೂ ಓದಿ- Jaya Ekadashi 2024: ಜಯ ಏಕಾದಶಿಯ ಶುಭ ಮುಹೂರ್ತ, ಪೂಜಾ ವಿಧಾನ & ಮಹತ್ವ ತಿಳಿಯಿರಿ

ಪೂರ್ವಜರಾ ಆಶೀರ್ವಾದ: 
ಮಾಘ ಹುಣ್ಣಿಮೆಯಲ್ಲಿ ಪವಿತ್ರ ಸ್ನಾನದ ಬಳಿಕ ಪವಿತ್ರ ನೀರಿನಲ್ಲಿ ಕಪ್ಪು ಎಳ್ಳನ್ನು ಸೇರಿಸಿ ಪೂರ್ವಜರಾ ಹೆಸರಿನಲ್ಲಿ ನೇವೇದ್ಯ ಸಲ್ಲಿಸಿ. ಇದರಿಂದ ಪೂರ್ವಜರ ಆತ್ಮಕ್ಕೆ ಶಾಂತಿ ದೊರೆತು ಅವರ ಆಶೀರ್ವಾದದಿಂದ ಮನೆಯಲ್ಲಿ ಸುಖ-ಸಂತೋಷ, ಸಮೃದ್ಧಿ ನೆಲೆಸುತ್ತದೆ. ಯಾವುದೇ ಕೆಲಸ ಕಾರ್ಯಗಳಲ್ಲಿ ಎದುರಾಗಿರುವ ಅಡೆತಡೆಗಳಿಂದ ಮುಕ್ತಿ ದೊರೆಯುತ್ತದೆ ಎಂದು ಹೇಳಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News