ಬೆಳ್ಳಿ ಪರದೆಗೆ ಕಾಲಿಟ್ಟು 38 ವರ್ಷಗಳ ಸಂಭ್ರಮದಲ್ಲಿ ಸುಧಾರಾಣಿ : ಸೆಲೆಬ್ರೆಷನ್ ವಿಡಿಯೋ ವೈರಲ್

Sudharani : ಕನ್ನಡದ ಆನಂದ್ ಸಿನಿಮಾ ಮೂಲಕ ಬೆಳ್ಳಿ ಪರದೆಗೆ ಪಾದಾರ್ಪಣೆ ಮಾಡಿದ ಸುಧಾರಾಣಿ ಅವರ ವೃತ್ತಿ ಜೀವನಕ್ಕೆ ಈಗ 38 ವರ್ಷಗಳ ಸಂಭ್ರಮ . ಆ ಸಂಭ್ರಮದ ವಿಡಿಯೋವೊಂದು ಇಲ್ಲಿದೆ ನೋಡಿ

Written by - Zee Kannada News Desk | Last Updated : Feb 26, 2024, 08:42 PM IST
  • ಸ್ಯಾಂಡಲ್‌ವುಡ್‌ನ ಶಿವರಾಜ್ ಕುಮಾರ್ ಮತ್ತು ಸುಧಾರಾಣಿ ಇಂಡಸ್ಟ್ರಿಗೆ ಒಟ್ಟಿಗೆ ಕಾಲಿಟ್ಟಿದ್ದು ಇದೀಗ 38 ವರ್ಷ ಕಳೆದಿದೆ.
  • ಶೂಟಿಂಗ್ ಸೆಟ್‌ನಲ್ಲಿಯೇ ಕೇಕ್ ಕಟ್ ಮಾಡಿ ಸುಧಾರಾಣಿ ಅವರಿಗೆ ಶುಭಾಷಯ ತಿಳಿಸಿದೆ.
  • ಇದೀಗ ಸುಧಾರಾಣಿ ಅವರು ಬೆಳ್ಳಿ ಪರದೆಯಿಂದ ಪುಟ್ಟ ಪರದೆಗೆ ಬಂದಿದ್ದಾರೆ. ಶ್ರೀರಸ್ತು ಶುಭಮಸ್ತು ಸೀರಿಯಲ್‌ ನಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.
ಬೆಳ್ಳಿ ಪರದೆಗೆ ಕಾಲಿಟ್ಟು 38 ವರ್ಷಗಳ ಸಂಭ್ರಮದಲ್ಲಿ ಸುಧಾರಾಣಿ : ಸೆಲೆಬ್ರೆಷನ್ ವಿಡಿಯೋ ವೈರಲ್  title=

38 years journey of sudharani in cinema industry : ಸ್ಯಾಂಡಲ್‌ವುಡ್‌ನ ಶಿವರಾಜ್ ಕುಮಾರ್ ಮತ್ತು ಸುಧಾರಾಣಿ ಇಂಡಸ್ಟ್ರಿಗೆ ಒಟ್ಟಿಗೆ ಕಾಲಿಟ್ಟಿದ್ದು ಇದೀಗ 38 ವರ್ಷ ಕಳೆದಿದೆ.  ಈ ಚಿತ್ರದ ಮೂಲಕವೇ ನಾಯಕಿಯಾಗಿದ್ದ ನಟಿ ಸುಧಾರಾಣಿ ಕೂಡ ಹಲವು ಹಿಟ್ ಸಿನಿಮಾಗಳನ್ನ ಕೊಟ್ಟಿದ್ದಾರೆ.  ದೊಡ್ಡಪರದೆಯ ಈ ಚೆಲುವೆಯ 38 ರ ಸಡಗರವನ್ನ ಕಿರುತೆರೆಯ ಕಲಾವಿದರೆಲ್ಲ ಸೇರಿ ಒಟ್ಟಿಗೆ ಸೆಲೆಬ್ರೇಟ್ ಮಾಡಿದ್ದಾರೆ. 

ಇದೀಗ ಸುಧಾರಾಣಿ ಅವರು ಬೆಳ್ಳಿ ಪರದೆಯಿಂದ ಪುಟ್ಟ ಪರದೆಗೆ ಬಂದಿದ್ದಾರೆ. ಶ್ರೀರಸ್ತು ಶುಭಮಸ್ತು ಸೀರಿಯಲ್‌ ನಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಹೀಗೆ ಬಣ್ಣದ ನಂಟು ಉಳಿಸಿಕೊಂಡು ನಟಿ ಸುಧಾರಾಣಿ ಮುಂದೆ ಸಾಗುತ್ತಿದ್ದಾರೆ. ಇದೀಗ ಇವರು ನಾಯಕಿಯಾಗಿ ಇಂಡಸ್ಟ್ರಿಗೆ ಬಂದು 38 ವರ್ಷ ಪೂರ್ಣಗೊಂಡಿದೆ.

ಇದನ್ನು ಓದಿ : Upadhyksha team :ಉಪಾಧ್ಯಕ್ಷ ತಂಡದಿಂದ ರಾಕಿಂಗ್ ಕಪಲ್ ಭೇಟಿ : ಫೋಟೋಸ್ ಇಲ್ಲಿವೆ ನೋಡಿ

ಸೋಷಿಯಲ್ ಮೀಡಿಯಾದಲ್ಲೂ ಈ ಒಂದು ಖುಷಿಯನ್ನ ಸಂಭ್ರಮಿಸಲಾಗಿದೆ. ಶಿವಣ್ಣನ ಮನೆಯಲ್ಲಿ ಕೇಕ್ ಕಟ್ ಮಾಡೋ ಮೂಲಕ ಇದನ್ನ ಸೆಲೆಬ್ರೇಟ್ ಮಾಡಲಾಗಿದೆ.

ಸುಧಾರಾಣಿ ಅವರ ಈ ವಿಚಾರದಲ್ಲಿ ಶ್ರೀಮಸ್ತು ಶುಭಮಸ್ತು ಸೀರಿಯಲ್ ಟೀಮ್ ಒಂದು ಸೆಲೆಬ್ರೇಷನ್ ಮಾಡಿದೆ. ಶೂಟಿಂಗ್ ಸೆಟ್‌ನಲ್ಲಿಯೇ ಕೇಕ್ ಕಟ್ ಮಾಡಿ ಸುಧಾರಾಣಿ ಅವರಿಗೆ ಶುಭಾಷಯ ತಿಳಿಸಿದೆ.

ಇದನ್ನು ಓದಿ : keerthy Suresh : 'ಮಹಾನಟಿ'ಯ ಬೋಲ್ಡ್ ಫೋಟೋಸ್ : ಇಲ್ಲಿವೆ ನೋಡಿ 

ಎರಡೂವರೆ ವರ್ಷದವಳಿದ್ದಾಗ ಕ್ವಾಲಿಟಿ ಬಿಸ್ಕೆಟ್‌ಗಳ ಜಾಹೀರಾತಿಗಾಗಿ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದ ಇವರು 1986ರಲ್ಲಿ ತೆರೆ ಕಂಡ ಆನಂದ್ ಸಿನಿಮಾದ ಮೂಲಕ ತಮ್ಮ ವೃತ್ತಿ ಜೀವನ ಪ್ರಾರಂಭಿಸಿ , ಇದೀಗ 38 ವರ್ಷಗಳ ಅನುಭವ ಪಡೆದು ದೊಡ್ಡ ಕಲಾವಿದೆಯಾಗಿ ನಮ್ಮ ಮುಂದೆ ಎತ್ತರಕ್ಕೆ ಬೆಳೆದು ನಿಂತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News